ETV Bharat / state

ಕೋವಿಡ್ ಸೋಂಕಿತರ ಡಿಸ್ಚಾರ್ಜ್ ಪಾಲಿಸಿ ಪರಿಷ್ಕರಿಸಿದ ಆರೋಗ್ಯ ಇಲಾಖೆ..‌ - ಕೋವಿಡ್ ಸೋಂಕಿತರ ಡಿಸ್ಜಾರ್ಜ್ ಪಾಲಿಸಿ ಪರಿಷ್ಕರಿಸಿದ ಆರೋಗ್ಯ ಇಲಾಖೆ

ಕೋವಿಡ್​ನ ಮಧ್ಯಮ ರೋಗಲಕ್ಷಣಗಳನ್ನ ಹೊಂದಿದ್ದರೆ ಅಂಥವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತನು ಸತತ 3 ದಿನಗಳವರೆಗೆ ಆಮ್ಲಜನಕದ ಬೆಂಬಲವಿಲ್ಲದೆ 93% ಕ್ಕಿಂತ ಹೆಚ್ಚಿನ ಸ್ಯಾಚುರೇಟೆಡ್ ಹೊಂದಿದ್ದರೆ ಮೆಡಿಕಲ್ ಆಫೀಸರ್ ಸಲಹೆಯಂತೆ ಬಿಡುಗಡೆ ಮಾಡಲಾಗುತ್ತೆ.

Health Department
ಆರೋಗ್ಯ ಇಲಾಖೆ
author img

By

Published : Jan 10, 2022, 4:57 PM IST

ಬೆಂಗಳೂರು: ಕೇಂದ್ರ ಸರ್ಕಾರದ ಸೂಚನೆಯಂತೆ ಕೋವಿಡ್ ಸೋಂಕಿತರ ಪರಿಷ್ಕೃತ ಡಿಸ್ಚಾರ್ಜ್ ಪಾಲಿಸಿಯನ್ನ ಜಾರಿ ಮಾಡಲಾಗಿದೆ. ಮೈಲ್ಡ್ ಕೇಸ್ ಹಾಗು ಹೋಮ್ ಐಸೋಲೇಷನ್‌ಗಾಗಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಆ ಪ್ರಕಾರ ಕೋವಿಡ್ -19 ನ ಸೋಂಕಿನ ಸೌಮ್ಯ ಸ್ವಭಾವದ ರೋಗ ಲಕ್ಷಣಗಳನ್ನ ಸೋಂಕಿತರು ಹೊಂದಿದ್ದರೆ, ಪಾಸಿಟಿವ್ ಬಂದು ಕನಿಷ್ಠ 7 ದಿನಗಳು ಕಳೆದ ನಂತರ ಮತ್ತು ಸತತ 3 ದಿನಗಳವರೆಗೆ ಜ್ವರವಿಲ್ಲದೆ ಇದ್ದರೆ ಅಂತಹವರನ್ನ ಬಿಡುಗಡೆ ಮಾಡಲಾಗುತ್ತೆ.‌ ಕೋವಿಡ್ ಕೇರ್ ಸೆಂಟರ್ ಹಾಗೂ ಹೋಮ್ ಐಸೋಲೇಷನ್​ನಲ್ಲಿ ಇರುವವರಿಗೆ ಈ ನಿಯಮ ಅನ್ವಯಿಸಲಿದೆ.

department-of-health-revised-covid-infected-discharge-policy
ಹೋಮ್ ಐಸೋಲೇಷನ್‌ಗಾಗಿ ಪರಿಷ್ಕೃತ ಮಾರ್ಗಸೂಚಿ

ಕೋವಿಡ್​ನ ಮಧ್ಯಮ ರೋಗಲಕ್ಷಣಗಳನ್ನ ಹೊಂದಿದ್ದರೆ ಅಂತಹವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತನು ಸತತ 3 ದಿನಗಳವರೆಗೆ
ಆಮ್ಲಜನಕದ ಬೆಂಬಲವಿಲ್ಲದೆ 93% ಕ್ಕಿಂತ ಹೆಚ್ಚಿನ ಸ್ಯಾಚುರೇಟೆಡ್ ಹೊಂದಿದ್ದರೆ ಮೆಡಿಕಲ್ ಆಫೀಸರ್ ಸಲಹೆಯಂತೆ ಬಿಡುಗಡೆ ಮಾಡಲಾಗುತ್ತೆ.

ಡಿಸ್ಚಾರ್ಜ್ ಆದ ನಂತರ ವ್ಯಕ್ತಿಯು ಮುಂದಿನ 7 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಇಲಾಖೆ ಸಲಹೆ ನೀಡಿದೆ.‌ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಯಾವುದೇ ರೋಗಲಕ್ಷಣಗಳನ್ನು ಕಾಣಿಸಿಕೊಂಡರೆ ಹೆಚ್ಚಿನ ವೈದ್ಯಕೀಯ ಮಾರ್ಗದರ್ಶನಕ್ಕಾಗಿ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.‌ ರಾಜ್ಯ/ಜಿಲ್ಲಾ ನಿಯಂತ್ರಣ ಕೊಠಡಿ 1075 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.

ಓದಿ: 'ಹಾಡಿದ್ದೇ ಹಾಡೋ ಕಿಸಬಾಯಿದಾಸ ಅನ್ನೋಹಾಗೆ ಸಿದ್ದರಾಮಯ್ಯ ಹೇಳಿದ್ದೇ ಹೇಳ್ತಾರೆ'

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.