ETV Bharat / state

ಸಂವಿಧಾನ ದಿನಾಚರಣೆ ಕುರಿತ ಗೊಂದಲದ ಸುತ್ತೋಲೆ ವಾಪಾಸ್​ ಪಡೆದ ಶಿಕ್ಷಣ ಇಲಾಖೆ, ಏನಿತ್ತು ಅದರಲ್ಲಿ? - ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿದ್ದ ಸುತ್ತೋಲೆ

ಸಂವಿಧಾನ ದಿನಾಚರಣೆ ನಡೆಸುವ ಕುರಿತು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು. ಈ ಸುತ್ತೋಲೆ ಹಲವಾರು ಗೊಂದಲಗಳನ್ನು ಸೃಷ್ಟಿಸಿತ್ತು. ಈ ಸುತ್ತೋಲೆಯನ್ನು ಈಗ ಹಿಂಪಡೆಯಲಾಗಿದೆ.

ಸಂವಿಧಾನ ದಿನಾಚರಣೆ ಕುರಿತ ಸುತ್ತೋಲೆ ವಾಪಾಸ್​ ಪಡೆದ ಶಿಕ್ಷಣ ಇಲಾಖೆ
author img

By

Published : Nov 12, 2019, 9:42 PM IST

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ನಡೆಸುವ ಕುರಿತು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿದ್ದ ಸುತ್ತೋಲೆಯನ್ನು ಅಧಿಕಾರಿಗಳ ಗಮನಕ್ಕೆ ಬಾರದೆ ಇಲಾಖೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.

ಸಂವಿಧಾನ ದಿನಾಚರಣೆ ಕುರಿತ ಸುತ್ತೋಲೆ ವಾಪಾಸ್​ ಪಡೆದ ಶಿಕ್ಷಣ ಇಲಾಖೆ

ಹೌದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಗಳ ಗಮನಕ್ಕೆ ತಾರದೇ, ವೆಬ್ ಸೈಟ್​​ನಲ್ಲಿ ನವೆಂಬರ್ 26 ರಂದು 'ಸಂವಿಧಾನ ದಿನಾಚರಣೆ’ ಕುರಿತು ಅಕ್ಟೋಬರ್ 10ರಂದು ಸುತ್ತೋಲೆ ಹೊರಡಿಸಲಾಗಿತ್ತು. ಆ ಸುತ್ತೋಲೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದ ಕುರಿತು ಸಾಕಷ್ಟು ಗೊಂದಲಕಾರಿ ವಿಷಯಗನ್ನು ಒಳಗೊಂಡಿತ್ತು. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ, ಬೇರೆ ಬೇರೆ ಸಮಿತಿಗಳು ಬರೆದಿದ್ದ ಕಾನೂನುಗಳನ್ನು ಒಟ್ಟುಗೂಡಿಸಿ ಅಂಬೇಡ್ಕರ್ ಕರಡು ತಯಾರಿಸಿದ್ದರು ಎಂದು ಉಲ್ಲೇಖಿಸಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಈ ಸುತ್ತೋಲೆಯಲ್ಲಿ ಆಯುಕ್ತರ ಹಾಗೂ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಯಾರೊಬ್ಬರು ಸಹಿ ಮಾಡಿಲ್ಲ. ಅಂತಹ ಸುತ್ತೋಲೆಯನ್ನು ವೆಬ್‌ಸೈಟ್‌ಗೆ ಅಪ್​​ಲೋಡ್​​ ಮಾಡಿದವರು ಯಾರೆಂಬುದು ಸಹ ತಿಳಿದಿಲ್ಲ. ಹೀಗಾಗಿ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸುತ್ತೋಲೆ ಸಿದ್ಧಪಡಿಸಿದ್ದ ಖಾಸಗಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಅಂತ ತಿಳಿಸಿದರು.

circular
ಸುತ್ತೋಲೆ

ಇನ್ನು ಖಾಸಗಿ ಸಂಸ್ಥೆ ನೀಡುವ ಮಾರ್ಗಸೂಚಿ‌ ಅವಶ್ಯಕತೆ ಇಲ್ಲ.‌ ಸಂವಿಧಾನ ದಿನದ ಆಚರಣೆ ನಮ್ಮ ಪಾಡಿಗೆ ನಾವು ಆಚರಣೆ ಮಾಡುತ್ತೀವಿ.‌ ಬೇರೆಯವರ ಮಾರ್ಗಸೂಚಿ ಬೇಡ ಅಂತ ಸ್ಪಷ್ಟಪಡಿಸಿದರು.

Intro:‌ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ವಿಚಾರ; ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ..‌

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಗಳ ಗಮನಕ್ಕೆ ತಾರದೇ, ವೆಬ್ ಸೈಟ್ ನಲ್ಲಿ ನವೆಂಬರ್ 26ರ ಸಂವಿಧಾನ ದಿನಾಚರಣೆ’ ಕುರಿತು ಅಕ್ಟೋಬರ್ 10ರಂದು ಸುತ್ತೋಲೆ ಹೊರಡಿಸಿತ್ತು.. ಸುತ್ತೋಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರು ಸಂವಿಧಾನ ರಚಿಸಿದ್ದ ಕುರಿತು ಸಾಕಷ್ಟು ಗೊಂದಲಕಾರಿ ವಿಷಯಗಳಿಂದ ಕೂಡಿತ್ತು. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ, ಬೇರೆ ಬೇರೆ ಸಮಿತಿಗಳು ಬರೆದಿದ್ದ ಕಾನೂನುಗಳನ್ನು ಒಟ್ಟುಗೂಡಿಸಿ ಅಂಬೇಡ್ಕರ್ ಕರಡು ತಯಾರಿಸಿದ್ದರು ಎಂದು ಉಲ್ಲೇಖಿಸಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು..

ರಾಜ್ಯದ ಎಲ್ಲ ಶಾಲೆಗಳಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ನಡೆಸುವ ಕುರಿತು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿದ್ದ ಸುತ್ತೋಲೆಯನ್ನು ಅಧಿಕಾರಿಗಳ ಗಮನಕ್ಕೆ ಬಾರದೆ ಇಲಾಖೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಈ ಸುತ್ತೋಲೆಯಲ್ಲಿ ಆಯುಕ್ತರ ಹಾಗೂ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಯಾರೊಬ್ಬರು ಸಹಿ ಮಾಡಿಲ್ಲ. ಅಂತಹ ಸುತ್ತೋಲೆಯನ್ನು ವೆಬ್‌ಸೈಟ್‌ಗೆ ಅಪ್ ಮಾಡಿದವರು ಯಾರೆಂಬುದು ಸಹ ತಿಳಿದಿಲ್ಲ. ಹೀಗಾಗಿ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸುತ್ತೋಲೆ ಸಿದ್ಧಪಡಿಸಿದ್ದ ಸಿಎಂಸಿಎ ಎಂಬ ಖಾಸಗಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಅಂತ ತಿಳಿಸಿದರು.
ಅಪ್‌ಲೋಡ್ ಮಾಡಿದವರು ಯಾರೆಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು..

ಇನ್ನು ಖಾಸಗಿ ಸಂಸ್ಥೆ ನೀಡುವ ಮಾರ್ಗಸೂಚಿ‌ ಅವಶ್ಯಕತೆ ಇಲ್ಲ..‌ ಸಂವಿಧಾನ ದಿನವನ್ನಾ ಆಚರಣೆ ನಮ್ಮ ಪಾಡಿಗೆ ನಾವು ಆಚರಣೆ ಮಾಡುತ್ತಿವಿ..‌ ಬೇರೆಯವರ ಮಾರ್ಗಸೂಚಿ ಬೇಡ ಅಂತ ಸ್ಪಷ್ಟಪಡಿಸಿದರು..

KN_BNG_3_DR_BRAMBEDAKR_SUTHOLE_SCRIPT_7201801

BYTE- ,ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ..
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.