ಬೆಂಗಳೂರು : ಡೆನ್ಮಾರ್ಕ್ ರಾಷ್ಟ್ರದ ಜತೆ ರಾಜ್ಯದ ನಗರಾಭಿವೃದ್ಧಿ ಇಲಾಖೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ವಿದೇಶಾಂಗ ಸಚಿವಾಲಯ ಈ ಹಿಂದೆ ಡೆನ್ಮಾರ್ಕ್ ಹಾಗೂ ಭಾರತ ಒಪ್ಪಂದದ ಹಿನ್ನೆಲೆ, ಡೆನ್ಮಾರ್ಕ್ ರಾಷ್ಟ್ರದ ರಾಯಭಾರಿ ಫ್ರೆಡ್ಡಿ ಸ್ವಾನ್ ಹಾಗೂ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ ಟಿ ರೇಜು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಒಪ್ಪಂದದ ಪ್ರಕಾರ, ಡೆನ್ಮಾರ್ಕ್ ರಾಷ್ಟ್ರದ ಸಂಸ್ಥೆಗಳು, ಸಂಶೋಧಕರನ್ನ ರಾಜ್ಯ ಸರ್ಕಾರ ಭೇಟಿ ಮಾಡಬಹುದು. ಹೊಸ ತಂತ್ರಜ್ಞಾನದಿಂದ ಪ್ರೇರಣೆ ಪಡೆಯಬಹುದು.
ಹೊಸ ತಂತ್ರಜ್ಞಾನಕ್ಕೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲಿನ ತಂತ್ರಜ್ಞಾನಕ್ಕೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.
ಓದಿ: ಶಿವಮೊಗ್ಗದ ರಂಗಾಯಣದಲ್ಲಿ ಕಲಾತ್ಮಕ ಭಿತ್ತಿಚಿತ್ರಗಳ ಅನಾವರಣ..ಕಣ್ಮನ ಸೆಳೆಯುವ ಚಿತ್ರಗಳು