ETV Bharat / state

ಬೆಂಗಳೂರು : ಕೊರೊನಾ ಬಳಿಕ ಡೆಂಘೀ ಹಾವಳಿ ಹೆಚ್ಚಳ.. ಒಂದೇ ದಿನ 1557 ಶಂಕಿತ ಪ್ರಕರಣ ಪತ್ತೆ.. - Dengue spreading in Bangalore news

ಪಾಲಿಕೆ ವ್ಯಾಪ್ತಿಯಲ್ಲಿ ಜನವರಿಯಿಂದ ಈ ತನಕ 22,864 ಡೆಂಘೀ ಪ್ರಕರಣ ಇರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 1856 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 484 ಜನರಿಗೆ ಡೆಂಘೀ ದೃಢಪಟ್ಟಿದೆ..

ಬೆಂಗಳೂರು: ಕೊರೊನಾ ಬಳಿಕ ಡೆಡ್ಲಿ ಡೆಂಘಿ ಹಾವಳಿ

author img

By

Published : Sep 11, 2021, 5:01 PM IST

ಬೆಂಗಳೂರು : ಕೊರೊನಾ ಹಾಗೂ ಅದರ ರೂಪಾಂತರಿ ಹಾವಳಿ ಜೊತೆಗೆ ಇದೀಗ ಡೆಂಘೀ ಸೋಂಕಿನ ಕಿರಿಕ್ ಹೆಚ್ಚಾಗಿದೆ. ರಾಜಧಾನಿಯ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ಶಂಕಿತರ ಸಂಖ್ಯೆ ಹೆಚ್ಚಾಗಿರೋದು ಆತಂಕ ಹೆಚ್ಚಿಸಿದೆ. ಕೋವಿಡ್ 2ನೇ ಅಲೆ ಕಡಿಮೆ ಆದ ಬೆನ್ನಲ್ಲೇ ಇತರೆ ಸಾಂಕ್ರಾಮಿಕ ರೋಗದ ಹಾವಳಿ ಶುರುವಾಗಿದೆ‌.‌ ಕೋವಿಡ್ ಮಧ್ಯೆ ಮರೆಯಾಗಿದ್ದ ಡೆಂಘೀ, ಚಿಕೂನ್ ಗುನ್ಯಾ ಭೀತಿ ಕೂಡ ಹೆಚ್ಚಾಗಿದೆ.

ಡೆಂಘೀ ಸಾಂಕ್ರಾಮಿಕ ರೋಗದಿಂದ ಎಚ್ಚರಿಕೆ ಅಗತ್ಯವಾಗಿದೆ. ಈ ಬದಲಾವಣೆಗೆ ದಿಢೀರ್ ಅಂತಾ ಸುರಿಯುವ ಮಳೆ ಹಾಗೂ ಹವಾಮಾನ ವೈಪರೀತ್ಯ ಡೆಂಘೀ ಹರಡಲು ಕಾರಣವಾಗುತ್ತಿದೆ.‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಶಂಕಿತರ ಸಂಖ್ಯೆ ಹೆಚ್ಚಾಗಿದೆ.

Dengue spreading in Bangalore
ಡೆಂಘೀ ಹಾವಳಿ ಹೆಚ್ಚಳ

ಸೆಪ್ಟೆಂಬರ್ 9ರಂದು ಒಂದೇ ದಿನ 1557 ಜನರಿಗೆ ಡೆಂಘೀ ಇರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 208 ಮಂದಿಯ ರಕ್ತವನ್ನ ಪರೀಕ್ಷೆಗೊಳಪಡಿಸಲಾಗಿದೆ. ಅದರಲ್ಲಿ 38 ಮಂದಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆದರೆ, ಸಮಾಧಾನಕರ ಸಂಗತಿ ಅಂದರೆ ಡೆಂಘೀಯಿಂದ ಸಾವು ಸಂಭವಿಸಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಜನವರಿಯಿಂದ ಈ ತನಕ 22,864 ಡೆಂಘೀ ಪ್ರಕರಣ ಇರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 1856 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ 484 ಜನರಿಗೆ ಡೆಂಘೀ ದೃಢಪಟ್ಟಿದೆ.

ತುಮಕೂರು-3, ಶಿವಮೊಗ್ಗ-9, ಬೀದರ್-7, ಕೊಪ್ಪಳ-7 ಡೆಂಘೀ ದೃಢಪಟ್ಟಿದ್ದರೆ, ಇತ್ತ ಕೊಡಗಿನಲ್ಲಿ-5 ಜನರಲ್ಲಿ ಶಂಕೆ ಇದ್ದು, ಸದ್ಯ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಓದಿ: ಹು-ಧಾ ಮಹಾನಗರ ಪಾಲಿಕೆ ಮೇಯರ್ ಗಾದಿ: ಬಿಜೆಪಿ ನಾಯಕರ ನಡುವೆ ಮುಸುಕಿನ ಗುದ್ದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.