ETV Bharat / state

ಕೊರೊನಾ ಪೀಡಿತ ಏರಿಯಾ ಸ್ಯಾನಿಟೈಸ್​ಗೆ ಹಣದ ಬೇಡಿಕೆ ಆರೋಪ..ಈ ಕುರಿತು ವೀಡಿಯೋ ಮಾಡಿ ಹರಿಬಿಟ್ಟ ಯುವಕರು - 40 ಸಾವಿರ ರೂ. ಕೋಡುವಂತೆ ಬೇಡಿಕೆ

ಕೊರೊನಾ ಸೋಂಕು ಪತ್ತೆಯಾದಾಗ ರೋಗಿಯ ಮನೆ ಸುತ್ತಮುತ್ತ ಸ್ಯಾನಿಟೈಸ್ ಮಾಡಬೇಕು ಎಂಬ ನಿಯಮ ಇದೆ. ಆದರೆ, ಏರಿಯಾವನ್ನು ಸ್ಯಾನಿಟೈಸ್ ಮಾಡಲು ಕಾರ್ಪೋರೇಟರ್ ಆಪ್ತ 40 ಸಾವಿರ ರೂ. ಕೋಡುವಂತೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ವೀಡಿಯೋ ಮಾಡಿ ಹರಿಬಿಟ್ಟ ಯುವಕರು
ವೀಡಿಯೋ ಮಾಡಿ ಹರಿಬಿಟ್ಟ ಯುವಕರು
author img

By

Published : Jun 25, 2020, 4:06 PM IST

ಬೆಂಗಳೂರು: ಕೊರೊನಾ ಸೋಂಕು ಪತ್ತೆಯಾದಾಗ ರೋಗಿಯ ಮನೆ ಸುತ್ತಮುತ್ತ ಸ್ಯಾನಿಟೈಸ್ ಮಾಡಬೇಕು ಎಂಬ ನಿಯಮ ಇದೆ. ಆದರೆ, ಏರಿಯಾವನ್ನು ಸ್ಯಾನಿಟೈಸ್ ಮಾಡಲು ಕಾರ್ಪೋರೇಟರ್ ಆಪ್ತ 40 ಸಾವಿರ ರೂ. ಕೋಡುವಂತೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ನಗರದ ಕೆ.ಜಿ ಹಳ್ಳಿಯ ವಾರ್ಡ್ ನಂಬರ್ 31ರ ಬಳಿ ಕಳೆದ ಎರಡು ದಿನದ ಹಿಂದೆ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಧೃಡವಾಗಿತ್ತು. ಹೀಗಾಗಿ ರೋಗಿ ಆಸ್ಪತ್ರೆಗೆ ತೆರಳಿದ ನಂತರ ಈತನ ಮಗ ಏರಿಯಾ ಸ್ಯಾನಿಟೈಸ್​ ಮಾಡುವಂತೆ ಕೇಳಿಕೊಂಡಿದ್ದ. ಆದರೆ,ಇಲ್ಲಿನ ಕಾರ್ಪೋರೆಟರ್ ಆಪ್ತ 40 ಸಾವಿರ ರೂ. ಹಣ ನೀಡಿದ್ರೆ ಸ್ಯಾನಿಟೈಸ್ ಮಾಡುವುದಾಗಿ ಬೇಡಿಕೆ ಇಟ್ಟಿದ್ದಾರೆ. ಹಾಗೆ ಜಾಸ್ತಿ ಧ್ವನಿ ಎತ್ತಿದರೆ ಕ್ವಾರೆಂಟೈನ್ ಮಾಡ್ತಿವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಯಾನಿಟೈಜ್​ಗೆ ಹಣದ ಬೇಡಿಕೆ ಆರೋಪದ ಕುರಿತು ಮಾಡಿರುವ ವಿಡಿಯೋ

ಇನ್ನು ಈ ಬಗ್ಗೆ ದೂರು ನೀಡಲು ಹೋದರೆ ಕೆ.ಜೆ ಹಳ್ಳಿ ಪೊಲೀಸರು ಪ್ರತಿಕ್ರಿಯಿಸುತ್ತಿಲ್ಲ ಎಂದು ವಿಡಿಯೋ ಮೂಲಕ ಆರೋಪ ‌ಮಾಡಿದ್ದಾರೆ. ಸದ್ಯ ಏರಿಯಾದ ಸಮಾಜ ಸೇವಕ ಹುಡುಗರ ನೆರವಿನಿಂದ ಸ್ಯಾನಿಟೈಸ್ ‌ಮಾಡಿದ್ದು. ಈ ಬಗ್ಗೆ ವಿಡಿಯೋ ಮಾಡಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.