ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯನ್ನು ಬಿಬಿಎಂಪಿಯಲ್ಲಿ ಆಚರಿಸಲಾಯಿತು. ಬಳಿಕ ವಿಧಾನಸೌಧ ಮುಂಭಾಗದಲ್ಲಿ ಸಿಎಂ ಯಡಿಯೂರಪ್ಪ, ಪೌರಕಾರ್ಮಿಕರಿಗೆ ಸಾಂಕೇತಿಕವಾಗಿ ಸಮವಸ್ತ್ರ ಮತ್ತು ಸುರಕ್ಷಾ ದಿರಿಸುಗಳನ್ನು ವಿತರಿಸಿದರು.
ಸುಮಾರು 18,378 ಪೌರ ಕಾರ್ಮಿಕರಿಗೆ 9.34 ಕೋಟಿ ವೆಚ್ಚದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಮಹಿಳಾ ಪೌರಕಾರ್ಮಿಕರಿಗೆ, ಎಪ್ರಾನ್, ಸೀರೆ, ಸ್ವೆಟರ್, ಟೋಪಿ, ಕೈ ಕವಚ, ಮುಖ ಗವಸು ಮತ್ತು ಪುರುಷರಿಗೆ ಟೀ-ಶರ್ಟ್, ಟ್ರ್ಯಾಕ್ ಪ್ಯಾಂಟ್, ಸೂಪರ್ ವೈಸರ್ಗಳಿಗೆ ಬ್ಲೇಸರ್, ಡೆನಿಮ್ ಪ್ಯಾಂಟ್, ಟೋಪಿ, ಆರೋಗ್ಯ ಪರಿವೀಕ್ಷಕರಿಗೆ ಸಫಾರಿ ಸ್ಯೂಟ್, ಟೋಪಿ, ಆರೋಗ್ಯ ಪರಿವೀಕ್ಷಕ ಮಹಿಳೆಗೆ ಸಫಾರಿ ಕೋಟ್, ಸಲ್ವಾರ್ ಸೂಟ್, ಟೋಪಿ ಕೊಡಲಾಗಿದೆ. 40 ಲಕ್ಷ ವೆಚ್ಚದಲ್ಲಿ 55,000 ತೆಂಗಿನ ನಾರಿನ ಪೊರಕೆಯನ್ನೂ ವಿತರಿಸಲಾಗುತ್ತಿದೆ.
ಇದನ್ನೂ ಓದಿ: ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ ಖಾಸಗಿ ಬಸ್ಗಳ ಜಪ್ತಿ
ಈ ವೇಳೆ ಸಚಿವ ಶ್ರೀರಾಮುಲು, ಆಡಳಿತಗಾರರಾದ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತರು ಗೌರವ್ ಗುಪ್ತ, ವಿಶೇಷ ಆಯುಕ್ತರು(ಘನತ್ಯಾಜ್ಯ) ರಂದೀಪ್ ಭಾಗಿಯಾಗಿದ್ದರು.