ETV Bharat / state

ನೆರೆ ಹಾವಳಿ ಪರಿಹಾರಕ್ಕೆ ಶೀಘ್ರವೇ ದೆಹಲಿಗೆ ನಿಯೋಗ: ದೇವೇಗೌಡ

ರಾಜ್ಯದ ನೆರೆ ಹಾವಳಿಗೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಕೂಡಲೇ ದೆಹಲಿಗೆ ನಿಯೋಗ ತೆರಳುತ್ತೇನೆ. ಪ್ರಧಾನಿ ಮೋದಿ ಜತೆ ಮಾತನಾಡಿ ಅನುದಾನಕ್ಕೆ ಒತ್ತು ನೀಡುವಂತೆ ಆಗ್ರಹಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
author img

By

Published : Sep 18, 2019, 4:47 PM IST

ಬೆಂಗಳೂರು: ನೆರೆ ಹಾವಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ದೆಹಲಿಗೆ ನಿಯೋಗ ತೆರಳಲಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನೆರೆ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲು ಯಾವುದೇ ದಾಕ್ಷಿಣ್ಯ ತೋರುವುದಿಲ್ಲ. ಮೊಟ್ಟಮೊದಲಿಗೆ 5 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಇದುವರೆಗೂ ಉತ್ತರ ಬಂದಿಲ್ಲ ಎಂದು ಜೆಡಿಎಸ್​ ಕಚೇರಿಯಲ್ಲಿ ಹಮ್ಮಿಕೊಂಡ ಜಿಲ್ಲಾವಾರು ಮುಖಂಡರ ಸಭೆಗೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಕಾಶ್ಮೀರ, ಹಿಂದಿ ಭಾಷೆ ಸೇರಿದಂತೆ ಇನ್ನಿತರ ವಿಚಾರದಲ್ಲಿ ಮುಳುಗಿರುವ ಕೇಂದ್ರಕ್ಕೆ ನಮ್ಮ ಪತ್ರಕ್ಕೆ ಉತ್ತರಿಸುವಷ್ಟು ಸಮಯವು ಇಲ್ಲವಾಗಿದೆ ಎಂದು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದರು.

Intro:ಬೆಂಗಳೂರು : ಕೇಂದ್ರ ಸರ್ಕಾರದಿಂದ‌ ರಾಜ್ಯದ ನೆರೆಗೆ ಅನುದಾನ ನೀಡದ ವಿಚಾರಕ್ಕೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,
ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.Body:ಪಕ್ಷದ ಕಚೇರಿಯಲ್ಲಿ ಇಂದು ನಡೆಯತ್ತಿರುವ ಜಿಲ್ಲಾವಾರು ಮುಖಂಡರ ಸಭೆಗೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗೌಡರು, ನಾವು ಹೋರಾಟ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ.
ನಮ್ಮ ಪಕ್ಷದ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಅದರ ಮೇಲು ಅನುದಾನ ಬಾರದೇ ಹೋದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಯಾವ ರೀತಿ ಹೋರಾಟ ಮಾಡಬೇಕೆಂಬುದರ ಬಗ್ಗೆ ನಂತರ ತೀರ್ಮಾನ ಮಾಡುತ್ತೇವೆ. ಹೋರಾಟದ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ನನಗೆ ಇಲ್ಲ. ನಾನು ಹೋರಾಟ ಮಾಡುವುದನ್ನು ಯಾರಿಂದ ಕಲಿಯಬೇಕಿಲ್ಲ ಎಂದರು.
ನೆರೆ ಅನುದಾನಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ‌. ಆದರೆ ಅವರಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದು ಹೇಳಿದರು.
ಪಾಪ ಬಿಜೆಪಿ ಅವರು ಕಾಶ್ಮೀರ, ಇನ್ನಿತರ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಕಾಗದ ನೋಡೋಕೆ ಅವರಿಗೆ ಟೈಂ ಇಲ್ಲ ಅನ್ನಿಸುತ್ತದೆ ಎಂದು ಕುಟುಕಿದರು.
ನೀವು ಈ ವಿಷಯದಲ್ಲಿ ಮೆತ್ತಗಾದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ನಾನು ಹೋರಾಟಕ್ಕೆ ನಿಂತರೆ ಯಾವುದೇ ದಾಕ್ಷಿಣ್ಯ ಇಲ್ಲ. ಎರಡು ಸರ್ಕಾರದ ವಿರುದ್ಧ ಹೋರಾಟ ಮಾಡಿದವನು ನಾನು. ನೈಸ್ ವಿರುದ್ದ ಹೋರಾಟ ಮಾಡಿದವನು ನಾನು. ಹೋರಾಟವೇ ನನ್ನ ಜೀವನದ ಮಜಲು. ಯಾರಿಂದಲೂ ನಾನು ಹೋರಾಟ‌ ಮಾಡೋದು ಕಲಿಯಬೇಕಿಲ್ಲ ಹೇಳಿದರು.
ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ಅವರು ಪ್ರತಿಭಟನೆ ಮಾಡಲಿ. ಅವರು ಪ್ರತಿಭಟನೆ ಮಾಡಿದರೆ ಸಂತೋಷ ಎಂದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.