ETV Bharat / state

ಸ್ವಾಬ್ ಟೆಸ್ಟ್ ದರ ಇಳಿಕೆ ಮಾಡಲು ನಿರ್ಧಾರ: ಡಿಸಿಎಂ ಅಶ್ವತ್ಥನಾರಾಯಣ

ವಿಧಾನಸೌಧದಲ್ಲಿ ಕಾರ್ಯಪಡೆ ಸಭೆಯನ್ನು ಡಿಸಿಎಂ ಸಿ.ಎನ್​. ಅಶ್ವತ್ಥನಾರಾಯಣ ನಡೆಸಿದರು. ಈ ಸಭೆಯಲ್ಲಿಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ. ನಿಂದ 1500 ರೂ.ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ.ಗೆ ಇಳಿಸಲಾಗಿದೆ. ಇನ್ನು 18 ಲಕ್ಷ ಆರ್​ಟಿಸಿಪಿಆರ್ ಟೆಸ್ಟ್ ಕಿಟ್ ಹಾಗೂ 20 ಲಕ್ಷ ರ‍್ಯಾಪಿಡ್ ಆಂಟಿಜೆನ್‌ ಕಿಟ್‌ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ಡಿಸಿಎಂ ಸಿ.ಎನ್​. ಅಶ್ವತ್ಥನಾರಾಯಣ
ಡಿಸಿಎಂ ಸಿ.ಎನ್​. ಅಶ್ವತ್ಥನಾರಾಯಣ
author img

By

Published : Aug 14, 2020, 6:06 PM IST

ಬೆಂಗಳೂರು: ಸ್ವಾಬ್ ಟೆಸ್ಟ್ ದರವನ್ನು ಇಳಿಕೆ ಮಾಡಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಿಸಿಎಂ ಸಿ.ಎನ್​. ಅಶ್ವತ್ಥನಾರಾಯಣ ಹೇಳಿದರು.

ವಿಧಾನಸೌಧದಲ್ಲಿ ಕಾರ್ಯಪಡೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ. ನಿಂದ 1500 ರೂ.ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ.ಗೆ ಇಳಿಸಲಾಗಿದೆ. ಇನ್ನು 18 ಲಕ್ಷ ಆರ್​ಟಿಸಿಪಿಆರ್ ಟೆಸ್ಟ್ ಕಿಟ್ ಹಾಗೂ 20 ಲಕ್ಷ ರ‍್ಯಾಪಿಡ್ ಆಂಟಿಜೆನ್‌ ಕಿಟ್‌ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ಡಿಸಿಎಂ ಸಿ.ಎನ್​. ಅಶ್ವತ್ಥನಾರಾಯಣ

ಸಿರಾಲಜಿ ಟೆಸ್ಟ್​​ಗೆ ನಿರ್ಧಾರ:

ಕಾರ್ಯಪಡೆ ಸಭೆಯಲ್ಲಿ 18 ಸಾವಿರ ಜನಕ್ಕೆ ಸಿರಾಲಜಿ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಸಿರಾಲಜಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 1.90 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರ ಮೂಲಕ ಯಾರಿಗೆ ಈಗಾಗಲೇ ಕೋವಿಡ್ -19 ಬಂದು ಹೋಗಿದೆ ಎಂಬುದರ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಸಾವಿನ ಸಂಖ್ಯೆ ಕಡಿಮೆ ಮಾಡಲು ಮತ್ತಷ್ಟು ಹೆಚ್ಚುವರಿ ಅಲರಂ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಖಾಸಗಿ ಲ್ಯಾಬ್​​ನಲ್ಲೂ ಈ ಟೆಸ್ಟ್ ಮಾಡಲು ನಿರ್ಧರಿಸಿದ್ದೇವೆ. ಸೋಂಕಿನ ಶೀಘ್ರ ಪತ್ತೆಗೆ ಹೆಚ್ಚುವರಿ ಟೆಸ್ಟ್ ಮಾಡಲಿದ್ದೇವೆ. ಮಾನ್ಯತೆ ಪಡೆದ ಲ್ಯಾಬ್​ನಿಂದ ಈ ಟೆಸ್ಟ್ ಮಾಡುತ್ತೇವೆ‌ ಎಂದರು.

ಇನ್ನು ಇದೇ ವೇಳೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ12 ಕೋಟಿ ರೂ. ಮೊತ್ತದ ವಿವಿಧ ಉಪಕರಣಗಳ ಖರೀದಿಗೆ ನಿರ್ಧರಿಸಲಾಗಿದೆ. ಪ್ಲಾಸ್ಮಾ ತೆರಪಿ ರಾಜ್ಯಾದ್ಯಂತ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಪ್ಲಾಸ್ಮಾ ತೆರಪಿ ಮಾಡಲಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಂಶೋಧನಾ ಪ್ರಯೋಗಾಲಯಕ್ಕೆ ಒತ್ತು ನೀಡಲು 10 ಕೋಟಿ ರೂ. ಬಿಡುಗಡೆ ಮಾಡಲಿದ್ದೇವೆ. ಬೆಂಗಳೂರು ಬಯೋ ಇನೋವೇಶನ್ ಸೆಂಟರ್​ನಲ್ಲಿ ಸಂಶೋಧನೆ ಪ್ರಾರಂಭಿಸಲಾಗುತ್ತದೆ. ಸೋಂಕು ಪತ್ತೆ, ವ್ಯಾಕ್ಸಿನ್ ಇನ್ನಿತರ ಸಂಶೋಧನೆಗೆ ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.