ಬೆಂಗಳೂರು: ಲಾಕ್‌ಡೌನ್ ನಡುವೆ ಶಾಸಕರ ನಕಲಿ ಪಾಸ್ ಹಾಕಿಕೊಂಡು ಹೆಸರು, ನಂಬರ್ ಏನೂ ಇಲ್ಲದೆ ಕೇವಲ ಶಾಸಕರ ಪಾಸ್ ಪಡೆದು ಸುಖಾಸುಮ್ಮನೆ ಓಡಾಟ ನಡೆಸುತ್ತಿದ್ದ ಇನ್ನೋವಾ ಕಾರ್ ಅನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾಸ್ ನಲ್ಲಿರುವ ಕಾರ್ ನಂಬರ್‌ಗೂ ಓಡಾಟ ನಡೆಸುತ್ತಿರುವ ಕಾರ್ ನಂಬರ್‌ಗೂ ವ್ಯತ್ಯಾಸ ಕಂಡುಬಂದಿರುವುದರಿಂದ, ಸದ್ಯ ಕಾರ್ ವಶಕ್ಕೆ ಪಡೆದು, ಚಾಲಕನನ್ನು ಪೊಲೀಸರು ವಿಚಾರಣೆ ನೆಡೆಸುತ್ತಿದ್ದಾರೆ.