ETV Bharat / state

ಬೆಂಗಳೂರು: ಕೊರೊನಾ ಸೋಂಕಿತ ಪೊಲೀಸರಿಗೆ ಧೈರ್ಯ ತುಂಬಿದ ಡಿಸಿಪಿ

ಉತ್ತರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ 14 ಪೊಲೀಸರಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರು ಇರುವ ಸ್ಥಳಕ್ಕೆ ಬಂದ ಡಿಸಿಪಿ ಶಶಿಕುಮಾರ್ ಆತ್ಮವಿಶ್ವಾಸ ಕಳೆದುಕೊಂಡಿದ್ದ ಸಿಬ್ಬಂದಿಗೆ ಧೈರ್ಯ ತುಂಬಿದರು.

DCP Meet the police
ಸೋಂಕು ತಗುಲಿರುವ 14 ಮಂದಿ ಪೊಲೀಸರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಡಿಸಿಪಿ
author img

By

Published : Jul 11, 2020, 11:17 AM IST

ಬೆಂಗಳೂರು: ಕೊರೊನಾ ಸೋಂಕು ಕಾಣಿಸಿಕೊಂಡಿದ್ದ 14 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಗರ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಖುದ್ದು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ಸೋಂಕು ತಗುಲಿರುವ 14 ಮಂದಿ ಪೊಲೀಸರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಡಿಸಿಪಿ

ಉತ್ತರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ 14 ಪೊಲೀಸರಿಗೆ ಸೋಂಕು ವಕ್ಕರಿಸಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಯೂ ಸಹ ಕ್ವಾರಂಟೈನ್​ಗೆ ಒಳಗಾಗಲು ಸಿದ್ಧತೆ ನಡೆಸಿಕೊಂಡು ಒಂದೆಡೆ ಸೇರಿದ್ದಾರೆ. ಸಿಬ್ಬಂದಿಗೆ ಸೋಂಕು ದೃಢಪಟ್ಟ ಕಾರಣ ಸೋಂಕಿತರು ಇರುವ ಸ್ಥಳಕ್ಕೆ ಬಂದ ಡಿಸಿಪಿ ಆತ್ಮವಿಶ್ವಾಸ ಕಳೆದುಕೊಂಡಿದ್ದ ಸಿಬ್ಬಂದಿಗೆ ಧೈರ್ಯ ತುಂಬಿದರು. ಕೊರೊನಾ ಸೋಂಕು ಬಂದಿದೆ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ನೀವೆಲ್ಲರೂ ಯಂಗ್ ಆಗಿದ್ದೀರಿ. ಕ್ವಾರಂಟೈನ್ ಒಳಗಾಗುವ ಜಾಗದಲ್ಲಿ ನಿಮಗೆ ವೈದ್ಯರು ಒಳ್ಳೆಯ ಚಿಕಿತ್ಸೆ ಮಾಡುತ್ತಾರೆ. ಅದೆಷ್ಟು ವಲಸೆ ಕಾರ್ಮಿಕರನ್ನು ನೀವು ಊರು ಸೇರಿಸಿದ್ದೀರಿ. ಕೊರೊನಾ ಪರಿಸ್ಥಿತಿ ಮಧ್ಯೆಯೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದೀರಿ. ನಿಮ್ಮಲ್ಲಿ ಸೋಂಕು ಕಾಣಿಸಿಕೊಂಡಿರುವುದು‌ ನಿಜಕ್ಕೂ ಬೇಸರ ತರಿಸಿದೆ‌‌ ಎಂದರು.

ಏನೇ ಸಮಸ್ಯೆಯಾದರೂ ಯಾವ ಸಮಯದಲ್ಲಾದರೂ ನನಗೆ ಕರೆ ಮಾಡಿ ಎಂದು ಸಿಬ್ಬಂದಿಗಳಲ್ಲಿ ಧೈರ್ಯ ತುಂಬಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.