ಬೆಂಗಳೂರು: ಹಿರಿಯ ನಾಗರಿಕರ ನೆರವಿಗಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫೆಟ್ ನೇತೃತ್ವದಲ್ಲಿ, 24x7 ಮಾದರಿಯಲ್ಲಿ ವಿಶೇಷ ಪೊಲೀಸ್ ತಂಡ ರಚನೆಯಾಗಿದೆ.
ತುರ್ತು ಸಹಾಯ, ಅಗತ್ಯ ಸೇವೆಗಳಿಗಾಗಿ ಹಾಗೂ ವಾಸಸ್ಥಳದಲ್ಲಿ ಹಿರಿಯ ನಾಗರಿಕರಿಗೆ ಶೋಷಣೆಯಾದರೆ ತ್ವರಿತಗತಿಯಲ್ಲಿ ಪೊಲೀಸರು ನೆರವು ನೀಡಲು ಮುಂದಾಗಲಿದ್ದಾರೆ. ದಕ್ಷಿಣ ವಿಭಾಗದ ವ್ಯಾಪ್ತಿಯ 7 ಠಾಣಾ ವ್ಯಾಪ್ತಿಗಳಲ್ಲಿ ವಾಸ ಮಾಡುತ್ತಿರುವ ಲಕ್ಷಾಂತರ ಹಿರಿಯ ನಾಗರಿಕರು ಈ ಸೇವೆ ಪಡೆಯಲಿದ್ದಾರೆ. ಪ್ರತಿ ಠಾಣೆಯಲ್ಲಿ ಪಿಎಸ್ಐ, ಇಬ್ಬರು ಕಾನ್ಸ್ಟೇಬಲ್ ತಂಡದಲ್ಲಿ ಇರಲಿದ್ದಾರೆ.
- https://www.facebook.com/story.php?story_fbid=286339732404072&id=101520714832813
ಕೊರೊನಾ ಕಾಲದಲ್ಲಿ ಹಿರಿಯ ನಾಗರಿಕರಿಗೆ ಶೋಷಣೆ ಹಾಗೂ ಮೋಸವಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಏನಾದರೂ ತೊಂದರೆ ಉಂಟಾದರೆ ಆದ್ಯತೆ ಮೇಲೆ ದೂರು ಸ್ವೀಕರಿಸಿ ಸಮಸ್ಯೆ ಹೋಗಲಾಡಿಸುವ ಕೆಲಸ ಈ ತಂಡ ಮಾಡಲಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ತಮಗೆ ಆಗುತ್ತಿರುವ ಸಮಸ್ಯೆ, ಅನ್ಯಾಯ, ಶೋಷಣೆ ಬಗ್ಗೆ ಹಿರಿಯ ನಾಗರಿಕರು ತಿಳಿಸಿದರೆ ಸಂಬಂಧಪಟ್ಟ ಠಾಣಾ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ.