ಬೆಂಗಳೂರು: ಉಪ ಚುನಾವಣೆಗೆ ನೀಡಿರುವ ತಡೆಯಾಜ್ಞೆ ತೆರವಾದ ನಂತರ ಯಾರ್ಯಾರು ಬರ್ತಾರೋ ಜೊತೆ ನಿಲ್ತಾರೋ ನೋಡೋಣ ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತಿಸುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅನರ್ಹರಿಗೆ ಟಿಕೆಟ್ ಎಂದು ಪರೋಕ್ಷ ಸುಳಿವು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಕೋರ್ಟ್ ತಡೆ ಬಂದಿರುವ ಕಾರಣ ಚುನಾವಣೆ ನಡೆಯಲ್ಲ ತೀರ್ಪನ್ನು ಹೇಗೆ ಸ್ವೀಕಾರ ಮಾಡ್ತಾರೋ ಅದರ ಮೇಲೆ ಹೋಗುತ್ತದೆ ಎಂದರು.
ಬಿಜೆಪಿ ಪರಾಜಿತರು ಟಿಕೆಟ್ ಕೇಳುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಸಿಎಂ ಟಿಕೆಟ್ ಬೇಕು ಅಂತಾ ಕೇಳುವುದರಲ್ಲಿ ಏನೂ ತಪ್ಪಿಲ್ಲ ಅವರಿಗೆ ಹಕ್ಕಿದೆ, ಆಸಕ್ತಿ ಇದೆ ಕೇಳುತ್ತಾರೆ ಆದರೆ ಪಕ್ಷದಲ್ಲಿ ಏನು ತೀರ್ಮಾನ ಆಗುತ್ತದೋ ಅದರಂತೆ ಹೋಗಬೇಕಾಗುತ್ತದೆ ಎಂದರು.
ಉಪ ಚುನಾವಣೆಗೆ ಬಿಜೆಪಿ ಯಾವ ಸಂದರ್ಭದಲ್ಲೂ ಸಿದ್ದ ಇದೆ ಅಕ್ಟೋಬರ್ 21 ರಂದು ಚುನಾವಣೆ ನಡೆಯುತ್ತಿದ್ದರೆ ಅದಕ್ಕೂ ಕೂಡಾ ಬಿಜೆಪಿ ಸಿದ್ಧವಿತ್ತು. ರಾಜ್ಯದಲ್ಲಿ ಬಿಜೆಪಿ ಪೂರಕವಾದ ವಾತಾವರಣವಿದೆ. ಮಂಡ್ಯದಲ್ಲಿ ನೂರಕ್ಕೆ ನೂರು 15 ಕ್ಷೇತ್ರಗಳನ್ನ ಗೆಲ್ಲುತ್ತೇವೆ ಅಂತ ಹೇಳಿದ್ದೆ ಯಾವಾಗ ಚುನಾವಣೆ ಆದರೂ ನಾವು ಸಿದ್ಧವಿದ್ದೇವೆ ಎಂದರು.