ETV Bharat / state

ದೊರೆಸ್ವಾಮಿ ವಿರುದ್ಧ ಹೇಳಿಕೆ ವಿಚಾರ... ಯತ್ನಾಳ ಪರ ಬ್ಯಾಟ್​ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ - dcm ashwath narayana

ಕಾಂಗ್ರೆಸ್ ಪಕ್ಷವು ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಹೋರಾಟ ಮಾಡಿದೆ. ಅವರು ಸಂವಿಧಾನ ವಿರುದ್ಧ ಮಾತನಾಡಿದ್ರೇ ಸದನದಲ್ಲಿ ಚರ್ಚೆ ಮಾಡಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದರು.

dcm ashwath narayana
ಅಶ್ವಥ್ ನಾರಾಯಣ
author img

By

Published : Mar 1, 2020, 5:35 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷವು ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಹೋರಾಟ ಮಾಡಿದೆ. ಅವರು ಸಂವಿಧಾನ ವಿರುದ್ಧ ಮಾತನಾಡಿದ್ರೇ ಸದನದಲ್ಲಿ ಚರ್ಚೆ ಮಾಡಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದರು.

ಅವರು ಕಾನೂನು ಚೌಕಟ್ಟಿನಲ್ಲಿ ಮಾತಾಡಿದ್ದು, ಸಂವಿಧಾನ ವಿರೋಧವಾಗಿ ಮಾತಾಡಿಲ್ಲ. ಅವರಿಗೆ ಮಾತನಾಡುವ ವಾಕ್‌ ಸ್ವಾತಂತ್ರ್ಯವಿದೆ ಎಂದು ಯತ್ನಾಳ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿರು. 60 ದಿನ ಸದನ ನಡೆಸುವ ಉದ್ದೇಶದಿಂದ ಒಂದು ತಿಂಗಳು ಅಧಿವೇಶನ ನಡೆಸುತ್ತಿದ್ದೇವೆ. ಏನೇ ವಿಚಾರ ಇದ್ದರೂ ಸದನದ ಒಳಗೆ ಚರ್ಚೆಯಾಗಲಿ ಎಂದರು.

ಅಶ್ವಥ್ ನಾರಾಯಣ

ರಾಜಕೀಯ ಧ್ರುವೀಕರಣ ಡೈನಾಮಿಕ್ ಪ್ರೋಸೆಸ್

ಇನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಬಿಜೆಪಿಗೆ ಸೇರುವ ವಿಚಾರವಾಗಿ ಮಾತನಾಡಿ, ಜಿ.ಟಿ. ದೇವೇಗೌಡ ತುಂಬಾ ಸ್ವತಂತ್ರವಾಗಿ, ನೆಮ್ಮದಿಯಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಮರ್ಥರಾಗಿದ್ದಾರೆ. ಯಾವಾಗ ಬೇಕಾದ್ರೂ ಬಿಜೆಪಿಗೆ ಬರಬಹುದು. ಈ ಕುರಿತು ನಮ್ಮ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು. ಕೇವಲ ಜೆಡಿಎಸ್ ಪಕ್ಷದವರು ಮಾತ್ರ ಬರಬೇಕು ಅಂತ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಯಾವ ಪಕ್ಷದವರು ಬೇಕಾದ್ರು ನಮ್ಮ ಸಿದ್ಧಾಂತ ಹಾಗೂ ಅಭಿವೃದ್ಧಿ ಕೆಲಸ ಒಪ್ಪಿ ನಮ್ಮ ಪಕ್ಷಕ್ಕೆ ಬರಬಹುದು. ಬರುವ ಎಲ್ಲರಿಗೂ ಸ್ವಾಗತವಿದೆ ಎಂದು ಹೇಳಿದರು.

ರಾಜಕೀಯ ಧ್ರುವೀಕರಣ ಅನ್ನೋದು ಡೈನಾಮಿಕ್ ಪ್ರೋಸೆಸ್. ಆಗಾಗ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈಗ ಸುಭದ್ರ ಸರ್ಕಾರವಿದ್ದು,‌ ನಮ್ಮ ಬಳಿ ಸಂಖ್ಯೆ ಇದೆ. ವಿಪಕ್ಷ ಕೂಡಾ ನಮಗೆ ಸಂಖ್ಯಾಬಲವಿದೆ ಎಂದು ಹೇಳಿದ್ದು, ವಿರೋಧ ಪಕ್ಷ ಕೂಡ ನಮಗೆ ಸಹಕಾರ ಕೊಟ್ಟಿದೆ ಎಂದರು. ಯಾರೇ ಪಕ್ಷಕ್ಕೆ ಬಂದರು ಸಂತೋಷ. ಅವರಿಗೆ ಬೇಕಾದಾಗ ಪಕ್ಷಕ್ಕೆ ಬರಲಿ, ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

ಇನ್ನು ನಾಳೆಯಿಂದ ಅಧಿವೇಶನ ಶುರುವಾಗಲಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಖಂಡಿಸಿ ಸದನದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲು ಯೋಜಿಸಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.