ಆನೇಕಲ್: ರಾಜಕೀಯವಾಗಿ ಆನೇಕಲ್ ಮೀಸಲು ಕ್ಷೇತ್ರ ಹಾಗೂ ತಮಿಳುನಾಡಿನ ಗಡಿ ತಾಲೂಕು. ಹೀಗಾಗಿ ದಮನಿತ ಜನ ಸಮುದಾಯದ ಹಿತ ಕಾಪಾಡುವಲ್ಲಿ ಹಲವಾರು ಸಂಘಟನೆಗಳು ಶ್ರಮಿಸಿವೆ.
ಸಮಕಾಲೀನ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಹೊತ್ತಿನಲ್ಲಿ ದಲಿತ ಹಕ್ಕುಗಳ ಸಮಿತಿ, ಶೋಷಿತರಿಗೆ ಭೂಮಿ, ವಸತಿ, ಸ್ಮಶಾನ ಕಲ್ಪಿಸಿ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಲು ಮುಂದೆ ಬಂದಿದೆ ಎಂದು ತಾಲೂಕು ಮುಖಂಡ ಕ್ರಾಂತಿ ಗೋವಿಂದ್ ತಿಳಿಸಿದ್ದಾರೆ.
ಆನೇಕಲ್ ಪರ್ಲ್ ವ್ಯಾಲಿ ಶಾಲಾ ಸಮುಚ್ಚಯದಲ್ಲಿ ಸಭೆ ಕರೆದು 224 ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಹಳ್ಳಿಗರೊಂದಿಗೆ ಬೆರೆತು ಪಟ್ಟಿ ಮಾಡಿ ಸಮಾವೇಶ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಒತ್ತಡದ ಗುಂಪಾಗಿ ಆದ್ಯತೆ ಮೇರೆಗೆ ಹೋರಾಟ ನಡೆಸುವ ತೀರ್ಮಾನ ತೆಗೆದುಕೊಂಡರು. ಡಿಸೆಂಬರ್ನಲ್ಲಿ ಸಮಾವೇಶ, ಅದಕ್ಕೂ ಮುನ್ನ ಸ್ಮಶಾನವಿಲ್ಲದ ಊರುಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿಗಳ ಮುಂದೆ ಹೋರಾಟ ಹಮ್ಮಿಕೊಳ್ಳುವ ಭರವಸೆ ನೀಡಿದರು.