ಬೆಂಗಳೂರು: ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಯಾರ್‍ಯಾರೋ ಮೆಂಟಲ್ಗಳು ಏನೇನೋ ಮಾತನಾಡುತ್ತಾರೆ. 30,40,50 ಅಂತಾ ಕಡ್ಲೆಪುರಿ ವ್ಯಾಪಾರ ಮಾಡ್ತಾರೆ. ನಮ್ಮ ಶಾಸಕರಿಗೆ ಅಗೌರವ ಮಾಡೋದು ಬೇಡ ಎಂದರು.
ಯಾರ್‍ಯಾರೋ ಮೆಂಟಲ್ಗಳು ಏನೇನೋ ಮಾತಾಡ್ತಾರೆ: ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್ - ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್
ಯಾರೆಲ್ಲಾ ಏನೆಲ್ಲಾ ಮಾತನಾಡುತ್ತಿದ್ದಾರೆ ಅನ್ನೋದನ್ನು ಗಮನಿಸುತ್ತಿದ್ದೇನೆ. ಯಾರೆಲ್ಲಾ ಯಾವೆಲ್ಲಾ ಸಭೆ ಮಾಡುತ್ತಿದ್ದಾರೆ ಎಂಬುದೂ ನನಗೆ ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿ ಹೇಳಿದರು.
![ಯಾರ್‍ಯಾರೋ ಮೆಂಟಲ್ಗಳು ಏನೇನೋ ಮಾತಾಡ್ತಾರೆ: ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್ D k Shivkumar talking about Ramesh jarakiholi](https://etvbharatimages.akamaized.net/etvbharat/prod-images/768-512-7489060-1089-7489060-1591354913475.jpg?imwidth=3840)
ರಮೇಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್
ಬೆಂಗಳೂರು: ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಯಾರ್‍ಯಾರೋ ಮೆಂಟಲ್ಗಳು ಏನೇನೋ ಮಾತನಾಡುತ್ತಾರೆ. 30,40,50 ಅಂತಾ ಕಡ್ಲೆಪುರಿ ವ್ಯಾಪಾರ ಮಾಡ್ತಾರೆ. ನಮ್ಮ ಶಾಸಕರಿಗೆ ಅಗೌರವ ಮಾಡೋದು ಬೇಡ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಜೆಡಿಎಸ್‌ಗೆ ರಾಜ್ಯಸಭೆ ಚುನಾವಣೆ ವೇಳೆ ಬೆಂಬಲಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ ನಮ್ಮ ಬಳಿ ಬೆಂಬಲ ಕೇಳಿಲ್ಲ. ಪಕ್ಷದ ಅಧ್ಯಕ್ಷನಾಗಿ ನನ್ನನ್ನ ಯಾರು ಬೆಂಬಲ ಕೇಳಿಲ್ಲ. ರಾಷ್ಟ್ರೀಯ ಮಟ್ಟದ ನಾಯಕರು ಈ ಬಗ್ಗೆ ತೀರ್ಮಾನ ಮಾಡ್ತಾರೆ. ಪಕ್ಷಗಳ ಸಿದ್ಧಾಂತ ವಿಚಾರದ ಮೇಲೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದು ವಿವರಿಸಿದರು.
ಹಲವರು ಸ್ಥಳೀಯ ನಾಯಕರು ನಮ್ಮ ಪಕ್ಷ ಸೇರಲು ಬಯಸಿದ್ದಾರೆ. ಅವರು ಪಕ್ಷಕ್ಕೆ ಕೆಲಸ ಮಾಡಬೇಕು. ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ಪರಿಸರ ದಿನಾಚರಣೆ:
ವಿಶ್ವ ಪರಿಸರ ದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು.