ETV Bharat / state

ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ - ಡಬಲ್ ಇಂಜಿನ್ ಸರ್ಕಾರ

ಕೆಪಿಸಿಸಿ ಅಧ್ಯಕ್ಷನಾಗಿ ಒಂದು ದಿನವೂ ನಿದ್ದೆ ಮಾಡಿಲ್ಲ. ಹೋರಾಟ ಮಾಡುತ್ತಿದ್ದೇನೆ. ನೂರು ಶೇಕಡಾ ಸಾಧನೆ ಮಾಡಿದ್ದೇನೆ ಎಂದು ಹೇಳಲ್ಲ. ಆದರೆ ಶೇ 25-30 ಕೆಲಸ ಮಾಡಿದ್ದೇವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
author img

By

Published : Dec 15, 2022, 4:15 PM IST

Updated : Dec 15, 2022, 4:32 PM IST

ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಕುಕ್ಕರ್ ಬ್ಲಾಸ್ಟ್ ಮಾಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪ ಮಾಡಿದರು. ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತನಾಡುತ್ತಾ, ಭಯೋತ್ಪಾದಕ‌ ಎಲ್ಲಿಂದ ಬಂದ?. ಡಿಜಿ ಸ್ಫೋಟದ ಬಗ್ಗೆ ಕೂಡಲೇ ಟ್ವೀಟ್ ಮಾಡುತ್ತಾರೆ. ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದರು.

ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರು ಮರಳಿ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆಗೆ ಡಿಕೆಶಿ ಆಶ್ಚರ್ಯಕರ ಹೇಳಿಕೆ ಕೊಟ್ಟರು. ಸಂಕ್ರಾಂತಿ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ ಅವರು, ಗುಟ್ಟು ಗುಟ್ಟಾಗಿಯೇ ಇರುತ್ತದೆ ಎಂದು ತಿಳಿಸಿದರು. ಆ ಮೂಲಕ ಮರಳಿ ಆಪರೇಷನ್ ಆಗುತ್ತೆ ಎಂಬ ಚರ್ಚೆಗೆ ಪುಷ್ಟಿ ನೀಡುವ ಹೇಳಿಕೆ ಕೊಟ್ಟರು.

ಸಂವಿಧಾನ‌ ಬಿಟ್ಟು ನಾವು ಯಾರೂ ಬದುಕಲು ಸಾಧ್ಯವಿಲ್ಲ. ನಾವು ಬದುಕಿಗಾಗಿ ಹೋರಾಟ ‌ಮಾಡುತ್ತಿದ್ದೇವೆ. ಬಿಜೆಪಿ ಭಾವನೆ ಮೇಲೆ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಒಂದು ದಿನವೂ ನಿದ್ದೆ ಮಾಡಿಲ್ಲ. ಹೋರಾಟ ಮಾಡುತ್ತಿದ್ದೇನೆ. ನೂರು ಶೇ. ಸಾಧನೆ ಮಾಡಿದ್ದೇನೆ ಎಂದು ಹೇಳಲ್ಲ. ಆದರೆ 25-30% ಕೆಲಸ ಮಾಡಿದ್ದೇವೆ ಎಂದರು.

ಸರ್ವೇ ಪ್ರಕಾರ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತೆ: ನಮ್ಮ ಸರ್ವೇ ಪ್ರಕಾರ, 136 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಗೆ 60-65 ಬರಲಿದೆ. ಅವರಿಗೂ ಇದೆ ನಮಗೂ ಇದೆ ಸಂಕ್ರಾಂತಿ ಎಂದು ತಿಳಿಸಿದರು.

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಕಿತ್ತಾಟ ಇಲ್ಲ. ಬಿಜೆಪಿಯಲ್ಲಿ ನೂರಾರು ಕಿತ್ತಾಟಗಳಿವೆ.‌ ಹೈಕಮಾಂಡ್ ಯಾವ ನಾಯಕರನ್ನೂ ಕೂರಿಸಿ ಮಾತನಾಡಿಲ್ಲ. ಹೈಕಮಾಂಡ್ ಕೂರಿಸಿ ಪ್ಲಾನ್ ಆಫ್ ಆಕ್ಷನ್ ಮಾಡಿದ್ದೇವೆ. ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ‌. ಪಕ್ಷ ಪೂಜೆ ಇದೆ. ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದರು‌.

ಇದನ್ನೂ ಓದಿ: ಈ ಬಾರಿ ಕಾಂಗ್ರೆಸ್‌ನಿಂದ ಹೊಸ ಮುಖಗಳಿಗೆ ಮಣೆ? ಉದಯಪುರ ನಿರ್ಣಯ ಜಾರಿ ಎಂದ ಡಿಕೆಶಿ

Last Updated : Dec 15, 2022, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.