ಬೆಂಗಳೂರು: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣದ ಮತ್ತೋರ್ವ ಆರೋಪಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಪ್ರಕರಣ ಆರೋಪಿಯಾಗಿರುವ ಕಾರ್ಪೊರೇಟರ್ ಜಾಕೀರ್ ಹುಸೇನ್ ಗಾಗಿ ಒಂದೆಡೆ ಸಿಸಿಬಿ ಹುಡುಕಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕುಟುಂಬದವರನ್ನೂ ವಿಚಾರಣೆ ಸಹ ನಡೆಯುತ್ತಿದೆ.
ವಿಚಾರಣೆ ವೇಳೆ ಜಾಕೀರ್ ತಾಯಿ ಹಾಗೂ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ. ಆತ ಹೀಗೆ ಮಾಡಬಾರದಿತ್ತು. ನಮ್ಮ ಜೊತೆ ಆತ ಸಂಪರ್ಕದಲ್ಲಿ ಇಲ್ಲ. ಎಲ್ಲಿ ಹೋಗಿದ್ದಾನೆ ಅನ್ನೋದು ಗೊತ್ತಾಗುತ್ತಿಲ್ಲ. ಅವನು ಹೀಗೆ ಮಾಡಿರುವುದು ದೊಡ್ಡ ತಪ್ಪು. ಒಂದು ವೇಳೆ ಮನೆಗೆ ಬಂದರೆ ನಾನೆ ಸರೆಂಡರ್ ಮಾಡಿಸ್ತೀನಿ ಎಂದು ಜಾಕೀರ್ ತಾಯಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ.
ಸಹೋದರ ಮಾತನಾಡಿ ನಮಗೆ ಇಷ್ಟು ದೊಡ್ಡ ಅನಾಹುತ ಆಗಿದೆ ಅಂತ ಗೊತ್ತಿಲ್ಲ. ನಮಗೆ ಅಷ್ಟು ತಿಳುವಳಿಕೆ ಇಲ್ಲ, ಅವನೆಲ್ಲಿದ್ದಾನೆ ಅಂತಾನೂ ಗೊತ್ತಾಗುತ್ತಿಲ್ಲ. ನನ್ನನ್ನು ನಂಬಿ ಅವನು ಮನೆಗೆ ಬಂದರೆ ನಾನೇ ಸಿಸಿಬಿ ಮುಂದೆ ಶರಣಾಗಿಸ್ತಿನಿ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.
ಓದಿ:ನಟಿ ಸಂಜನಾ ಆರೋಗ್ಯದ ವರದಿ ಕೇಳಿದ ಹೈಕೋರ್ಟ್
ಈ ಹಿಂದೆ ಜಾಕೀರ್ ಎಲ್ಲಿದ್ದಾನೆ ಅನ್ನೋದನ್ನ ಪತ್ತೆ ಹಚ್ಚೋಕೆ ಸಹೋದರನನ್ನ ಸಿಸಿಬಿ ಮುಂದಿಟ್ಟಿತ್ತು. ಮೊದಲ ನೋಟಿಸ್ ತಲುಪಿಸುವಾಗ ಸಹೋದರನ ಮೆಸೇಜ್ ಮೂಲಕ ತಿಳಿಸಿದ್ದರು. ಈಗ ಸಹೋದರನ ಮೂಲಕ ಮೆಸೇಜ್ ಮಾಡಿಸಿದ್ದರೂ ನೋಡಿಲ್ಲ. ಅಕೌಂಟ್ ಟ್ರಾನ್ಸ್ಯಾಕ್ಷನ್ ಕೂಡ ಆಗಿಲ್ಲ. ಸದ್ಯ ಎಲ್ಲೆಲ್ಲಿ ಹೋಗಿರಬಹುದೆಂದು ಸಿಸಿಬಿ ಪೊಲೀಸರು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ.