ETV Bharat / state

ಮದ್ಯಪಾನದ ಚಟಕ್ಕೆ ದುಬಾರಿ ಸೈಕಲ್ ಕದಿಯುತ್ತಿದ್ದವನ ಬಂಧನ - cycle thief arrested by suddagunte police

ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಾಲರಾಜ್‌ನನ್ನು ಬಂಧಿಸಿದ್ದಾರೆ. ಒಟ್ಟು 54 ಸೈಕಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ತಿಳಿಸಿದ್ದಾರೆ..

cycle-thief-arrested-by-suddagunte-police
ಮದ್ಯಪಾನದ ಚಟಕ್ಕೆ ದುಬಾರಿ ಸೈಕಲ್ ಕದಿಯುತ್ತಿದ್ದವನ ಬಂಧನ
author img

By

Published : May 28, 2022, 4:02 PM IST

ಬೆಂಗಳೂರು : ಮದ್ಯಪಾನದ ಚಟಕ್ಕೆ ಹಣ ಹೊಂದಿಸಲು ಸೈಕಲ್ ಕದಿಯುತ್ತಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಾಲರಾಜ್ ಎಂದು ಗುರುತಿಸಲಾಗಿದೆ.

ಮದ್ಯಪಾನದ ಚಟಕ್ಕೆ ದಾಸನಾಗಿದ್ದ ಆರೋಪಿ ಸೈಕಲ್‌ಗಳನ್ನ ಕದ್ದರೆ ಯಾರೂ ದೂರು ಕೊಡುವುದಿಲ್ಲವೆಂದು ಭಾವಿಸಿ ಸೈಕಲ್ ಕಳ್ಳತನಕ್ಕೆ ಇಳಿದಿದ್ದ. ದುಬಾರಿ ಬೆಲೆಯ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಬಳಿಕ ಕೇವಲ 2 ರಿಂದ 3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಮಾರಾಟ ಮಾಡಿ ಬಂದ ಹಣದಿಂದ ಮದ್ಯಪಾನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಬಾಲರಾಜ್‌ನನ್ನು ಬಂಧಿಸಿದ್ದಾರೆ. ಒಟ್ಟು 54 ಸೈಕಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ತಿಳಿಸಿದ್ದಾರೆ.

ಓದಿ : ವುಡ್‌ ಕಟ್ಟರ್​ನಿಂದ ಪತ್ನಿ ಮಕ್ಕಳ ಕತ್ತು ಸೀಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.