ETV Bharat / state

ಐಟಿಬಿಟಿ ಕ್ಷೇತ್ರದಲ್ಲಿ 'ನಾನ್ ಕನ್ನಡಿಗರು,'ನಾನು ಕನ್ನಡಿಗ' ಆಗಬೇಕು : ಶಾಸಕ ಲಿಂಬಾವಳಿ

ಮಹದೇವಪುರ ಕ್ಷೇತ್ರದಲ್ಲಿ ಸಾಫ್ಟ್​​ವೇರ್​ ಕಂಪನಿಗಳು ಹೆಚ್ಚಾಗಿರುವುದರಿಂದ ಕನ್ನಡೇತರರು ಜಾಸ್ತಿ ಇದ್ದಾರೆ. ಇವರಿಗೆಲ್ಲಾ ಕನ್ನಡ ಕಲಿಸುವ ಕೆಲಸ ಆಗಬೇಕು..

cycle jatha during kannada rajyostava celebration
ಕನ್ನಡ ರಾಜ್ಯೋತ್ಸವ
author img

By

Published : Nov 1, 2020, 4:58 PM IST

ಬೆಂಗಳೂರು : ಐಟಿಬಿಟಿ ಕೇಂದ್ರವಾದ ಮಹದೇವಪುರ ಕ್ಷೇತ್ರದಲ್ಲಿ ವಾಸಿಸುವ ಅನ್ಯಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಲು ಪ್ರತಿದಿನ ಒಂದೊಂದು ಪದಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ರು.

ಕನ್ನಡ ರಾಜ್ಯೋತ್ಸವ

ಕ್ಷೇತ್ರದ ಹದಗೂರು ಮತ್ತು ಕಾಡುಗೋಡಿ ವಾರ್ಡ್​ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಒಂದೊಂದು ವಾರ್ಡಿನಲ್ಲೂ 300ಕ್ಕೂ ಹೆಚ್ಚು ಜನ ಪಾಲ್ಗೊಂಡು, ಕನ್ನಡ ಭಾಷೆಯನ್ನು ಮಾತನಾಡುವಂತೆ ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಉಳಿಸುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಈ ಕಾರ್ಯಕ್ರಮದ ಉದ್ದೇಶ'ನಾನ್ ಕನ್ನಡಿಗರು,ನಾವು ಕನ್ನಡಿಗರು' ಆಗಬೇಕು ಎಂಬುದು ಎಂದು ಹೇಳಿದರು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ.

ಶಾಸ್ತ್ರೀಯ ಸ್ಥಾನಮಾನ ಕನ್ನಡಕ್ಕೆ ದೊರೆತಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಕಲಿಯುವಂತೆ ಮನವಿ ಮಾಡಿದರು. ಮಹದೇವಪುರ ಕ್ಷೇತ್ರದಲ್ಲಿ ಸಾಫ್ಟ್​​ವೇರ್​ ಕಂಪನಿಗಳು ಹೆಚ್ಚಾಗಿರುವುದರಿಂದ ಕನ್ನಡೇತರರು ಜಾಸ್ತಿ ಇದ್ದಾರೆ. ಇವರಿಗೆಲ್ಲಾ ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಟರಾಜ್, ಮುಖಂಡರಾದ ರಾಜೇಶ್, ಚನ್ನಸಂದ್ರ ಚಂದ್ರಶೇಖರ್,ವೀರಸ್ವಾಮಿರೆಡ್ಡಿ, ಪ್ರಶಾಂತ್, ಮತ್ತಿತರರು ಸೈಕಲ್​ ಜಾಥಾ ಮಾಡುವ ಮೂಲಕ ಅನ್ಯ ಭಾಷಿಕರು ನಮ್ಮ ಭಾಷೆಯಾದ ಕನ್ನಡ ಕಲಿಯಿರಿ ಎಂದು ಸಂದೇಶಗಳನ್ನು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.