ETV Bharat / state

ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್​ಗೆ ತೆರೆ.. ಬೃಹತ್​ ವಾಹನಗಳ ಪ್ರದರ್ಶನ

ಅರಮನೆ ಮೈದಾನದ ಗಾಯತ್ರಿ ವಿಹಾರ್​ನಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಡ್ರೋನ್ ಪ್ರದರ್ಶನವನ್ನು ಸಹ ಯೋಜಿಸಲಾಗಿತ್ತು. ಸಮಾವೇಶದ ಜೊತೆಗೆ ಮೂರು ದಿನಗಳ ಸಾರ್ವಜನಿಕ ಎಕ್ಸ್ ಪೋ ನಡೆಸಲಾಯಿತು.

Three days highway expo manthan
ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್
author img

By

Published : Sep 9, 2022, 7:21 PM IST

ಬೆಂಗಳೂರು: ಕಣ್ಣಾಯಿಸಿದಲ್ಲೆಲ್ಲ ಬೃಹತ್ ಗಾತ್ರದ ಜೆಸಿಬಿ, ಬುಲ್ಡೋಜರ್, ಪೋಕ್ ಲೈನ್, ಇಟಾಚಿಗಳೇ ತುಂಬಿಕೊಂಡಿತ್ತು. ಬೃಹತ್ ಗಾತ್ರದ ಹೆದ್ದಾರಿ ನಿರ್ಮಾಣ ವಾಹನಗಳು, ವಿದ್ಯುತ್ ವಾಹನಗಳ ಆವಿಷ್ಕಾರದ ಲೋಕವೇ ಅಲ್ಲಿ ಅನಾವರಣಗೊಂಡಿತ್ತು. ಭವಿಷ್ಯದ ರಸ್ತೆ, ಪರಿಸರ ಸ್ನೇಹಿ ವಾಹನಗಳಿಗೆ ರಾಷ್ಟ್ರ ಮಟ್ಟದಲ್ಲಿ ಉತ್ತೇಜನ ನೀಡುವ ಪ್ರಯತ್ನ ಅಲ್ಲಿ ನಡೆಯಿತು.

ನಗರದ ಅರಮನೆ ಮೈದಾನದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆಯೋಜಿಸಿದ್ದ ಮೂರು ದಿನಗಳ ಆಹ್ವಾನಿತರ ಸಮಾವೇಶ ಮತ್ತು ಸಾರ್ವಜನಿಕ ಎಕ್ಸ್ ಪೋ ಮಂಥನ್​ಗೆ ತೆರೆ ಬಿದ್ದಿದೆ. ಹೆದ್ದಾರಿ ನಿರ್ಮಾಣಕ್ಕೆ ಬಳಸುವ ವಾಹನ, ಸಲಕರಣೆಗಳು, ಇವಿಗಳು ಪ್ರದರ್ಶನದ ಕೇಂದ್ರ ಬಿಂದುಗಳಾಗಿದ್ದವು.

ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್

ಎಕ್ಸ್ ಪೋನಲ್ಲಿ ರಸ್ತೆಗಳು, ಸಾರಿಗೆ ಮತ್ತು ಸಾಗಾಟ ವಲಯದಲ್ಲಿನ ಅನೇಕ ಸಮಸ್ಯೆಗಳು ಮತ್ತು ಅವಕಾಶಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುವ ಗುರಿಯ ಬಗ್ಗೆ ಚರ್ಚಿಸಲಾಯಿತು. ಉತ್ತಮ ರೂಢಿಗಳು, ನೀತಿ ಬೆಂಬಲ ಮತ್ತು ಸಾಮರ್ಥ್ಯ ವರ್ಧನೆ ಹಂಚಿಕೊಳ್ಳಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಉದ್ಯಮದ ಇತರ ಪ್ರಮುಖ ಬಾಧ್ಯಸ್ಥರೊಂದಿಗೆ ತೊಡಗಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

Three days highway expo manthan
ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್

ಪಿಡಬ್ಲ್ಯೂಡಿ, ಸಾರಿಗೆ ಮತ್ತು ಕೈಗಾರಿಕಾ ಖಾತೆಗಳನ್ನು ಹೊಂದಿರುವ ಹಲವಾರು ರಾಜ್ಯ ಸಚಿವರು ಮತ್ತು ಈ ಸಚಿವಾಲಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಇದಲ್ಲದೇ, ಉದ್ಯಮದ ದಿಗ್ಗಜರು ಮತ್ತು ತಜ್ಞರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜತೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎನ್​ಎಚ್ಎಐನ ಹಿರಿಯ ಅಧಿಕಾರಿಗಳು, ನೀತಿ ಯೋಜಕರು, ಪರಿಣತರು, ಸಾಂಸ್ಥಿಕ ನಾಯಕರು ಮತ್ತು ತಂತ್ರಜ್ಞರು ಸಹ ಈ ಸಮಾಲೋಚನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Three days highway expo manthan
ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್

ಚರ್ಚೆಗಳು ಮೂರು ವಿಶಾಲ ಕ್ಷೇತ್ರಗಳಲ್ಲಿ ನಡೆದವು, ಮೊದಲನೆಯದಾಗಿ, ರಸ್ತೆಗಳು, ರಸ್ತೆ ಅಭಿವೃದ್ಧಿ, ಹೊಸ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಮತ್ತು ರಸ್ತೆ ಸುರಕ್ಷತೆ. ಎರಡನೆಯದಾಗಿ, ಸಾರಿಗೆ ವಲಯದಲ್ಲಿ, ಇವಿಗಳು ಮತ್ತು ವಾಹನ ಸುರಕ್ಷತೆಯನ್ನು ಒಳಗೊಂಡಿತ್ತು. ಮತ್ತು ಮೂರನೆಯದಾಗಿ, ರೋಪ್ ವೇಗಳು, ಬಹುಮಾದರಿ ಸಾಗಣೆ ಪಾರ್ಕ್​ಗಳು, ಪರ್ವತಮಾಲಾ ಮತ್ತು ಡಿಜಿಟಲ್ ಮಧ್ಯಸ್ಥಿಕೆಗಳನ್ನು ಒಳಗೊಂಡ ಪರ್ಯಾಯ ಮತ್ತು ಭವಿಷ್ಯದ ಚಲನಶೀಲತೆ ಒಳಗೊಂಡಿತ್ತು. ಇದಲ್ಲದೆ, ಸಾರಿಗೆ ಅಭಿವೃದ್ಧಿ ಮಂಡಳಿಯ 41ನೇ ಸಭೆಯನ್ನು ಕಾರ್ಯಕ್ರಮದ ಸಮಯದಲ್ಲಿ ಆಯೋಜಿಸಲಾಗಿತ್ತು. ನೆಕ್ಸ್ಟ್-ಜೆನ್ (ಮುಂದಿನ ಪೀಳಿಗೆಯ) ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

Three days highway expo manthan
ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್

ಕಳೆದ ರಾತ್ರಿ ಅರಮನೆ ಮೈದಾನದ ಗಾಯತ್ರಿ ವಿಹಾರ್​ನಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಡ್ರೋನ್ ಪ್ರದರ್ಶನವನ್ನು ಸಹ ಯೋಜಿಸಲಾಗಿತ್ತು. ಸಮಾವೇಶದ ಜೊತೆಗೆ ಮೂರು ದಿನಗಳ ಸಾರ್ವಜನಿಕ ಎಕ್ಸ್ ಪೋ ನಡೆಸಲಾಯಿತು. ಹೆದ್ದಾರಿ ಅಭಿವೃದ್ಧಿಯಲ್ಲಿ ತಂತ್ರಜ್ಞಾನಗಳು ಮತ್ತು ಸಾಮಗ್ರಿಗಳನ್ನು ಮತ್ತು ಭಾರತ ಮಾಲಾ, ಪರ್ವತಮಾಲಾ ಮತ್ತು ಇವಿಗಳಂತಹ ಹೊಸ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

Three days highway expo manthan
ಮೂರು ದಿನಗಳ ಹೆದ್ದಾರಿ ಎಕ್ಸ್ ಪೋ ಮಂಥನ್

ಹ್ಯುಂಡೈ ಕನ್​ಸ್ಟ್ರಕ್ಷನ್, ಜೆಸಿಬಿ, ಎಸಿಇ, ವೋಲ್ವೊ, ಟಾಟಾ ಹಿಟಾಚಿ, ಕಟಾಲಿನ್, 3ಎಂ, ಟಿಕಿ ಟಾರ್ ಮತ್ತು ಶೆಲ್, ಟಿವಿಎಸ್ ಮೋಟಾರ್ಸ್, ಟಾಟಾ ಮೋಟಾರ್ಸ್, ಟೊಯೊಟಾ ಕಿರ್ಲೋಸ್ಕರ್, ಕಟಾಲೈನ್, ರಿಟ್ಜೆನ್ ಇಂಡಿಯಾ, ಐಸಿಇಎಂಎ, ಅಮ್ಮನ್ ಇಂಡಿಯಾ, ಇಂಡಿಯನ್ ರೋಡ್ ಸರ್ವೇ ಸೇರಿದಂತೆ 65ಕ್ಕೂ ಹೆಚ್ಚು ಪ್ರದರ್ಶಕರು ಸಾರ್ವಜನಿಕ ಎಕ್ಸ್ ಪೋದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಕಳಪೆ ಕಾಮಗಾರಿ ಆರೋಪ: ಗಡ್ಕರಿ ಜೊತೆ ಸಿಎಂ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.