ETV Bharat / state

ಗ್ಯಾರಂಟಿಗಳ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬದಲಿಸುತ್ತಿದೆ: ಸಿ. ಟಿ. ರವಿ - ಬಿಲ್ ಮುಖ್ಯಮಂತ್ರಿಗಳಿಗೆ ಕಳಿಸಿ ಎನ್ನಬೇಕು

ಬಿಜೆಪಿ ಆಡಳಿತದ ಅವಧಿಯಲ್ಲಿ ಹಗರಣ ಆಗಿದ್ದರೆ ತನಿಖೆ ನಡೆಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಆಗ್ರಹಿಸಿದ್ದಾರೆ.

ct-ravi-reaction-on-congress-gurentees
ಗ್ಯಾರಂಟಿಗಳ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬದಲಿಸುತ್ತಿದೆ: ಸಿ.ಟಿ.ರವಿ
author img

By

Published : May 21, 2023, 7:37 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದ ಮೊದಲ ದಿನಕ್ಕೇ ತನ್ನ ಗ್ಯಾರಂಟಿಗಳ ವಿಚಾರದಲ್ಲಿ ಬಣ್ಣ ಬದಲಿಸುತ್ತಿದೆ‌ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದಿನ ಕಳೆದಂತೆ ಅದ್ಯಾವ ರೀತಿ ಬಣ್ಣ ಬದಲಿಸಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಲಿದೆ. ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ ಎಂದು ಕಾಂಗ್ರೆಸ್‍ನವರು ಹೇಳಿದ್ದರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಹಲವಾರು ಭಾಷಣಗಳಲ್ಲಿ ಎಲ್ಲ ನಿರುದ್ಯೋಗಿ ಯುವಕರಿಗೆ 3 ಸಾವಿರ ಎಂದಿದ್ದರು. ಐಟಿಐ ಆದವರಿಗೆ 1,500 ರೂ. ಎಂದಿದ್ದರು. ಈಗ 2022-23ರಲ್ಲಿ ಪದವಿ ಪಡೆದವರಿಗೆ ಮಾತ್ರ ಎಂದು ಹೇಳುತ್ತಿದ್ದಾರೆ. ಖಾಸಗಿ ನೌಕರಿ ಮಾಡುತ್ತಿದ್ದರೆ ಭತ್ಯೆ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಯಾರೂ ಕರೆಂಟ್​ ಬಿಲ್ ಕಟ್ಟಬಾರದು: ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ಗೃಹಿಣಿಯರಿಗೆ 2 ಸಾವಿರ ನೀಡಲೇಬೇಕು. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಕೊಡಲೇಬೇಕು. ಮಹಿಳೆಯರಿಗೆ ಬಸ್ ಚಾರ್ಜ್ ಉಚಿತ ಎಂದಿದ್ದೀರಿ, ಅದನ್ನು ಕೊಡಲೇಬೇಕು. ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ಕೊಡಲೇಬೇಕು. ಮುಖ್ಯಮಂತ್ರಿಗಳೇ ಹೇಳಿದ ಮೇಲೆ ಯಾರೋ ಬಿಲ್ ಕಲೆಕ್ಟರ್ ಬಂದು ಬಿಲ್ ಕೇಳಿದರೆ, ಆ ಧೈರ್ಯ ಮಾಡಿದರೆ ಅದು ಸಿಎಂ ಆದೇಶಕ್ಕೆ ವಿರುದ್ಧವಾಗುತ್ತದೆ. ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹುಷಾರ್, ಬಿಲ್ ಮುಖ್ಯಮಂತ್ರಿಗಳಿಗೆ ಕಳಿಸಿ ಎನ್ನಬೇಕು. ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ತಿಳಿಸಿದರು.

ಹಗರಣ ಆದರೆ ತನಿಖೆ ಮಾಡಲಿ: ಬಿಜೆಪಿ ಆಡಳಿತದ ಅವಧಿಯಲ್ಲಿ ಹಗರಣ ಆಗಿದ್ದರೆ ಅದನ್ನೂ ತನಿಖೆ ನಡೆಸಿ. ಕೆಂಪಣ್ಣ ಆಯೋಗ ಈಗಾಗಲೇ ಕೊಟ್ಟಿರುವ ವರದಿ ಆಧಾರದಲ್ಲಿ ಎಫ್‍ಐಆರ್ ದಾಖಲಿಸಿ. ಯಾರು 8 ಸಾವಿರ ಕೋಟಿ ನಷ್ಟ ಆಗಲು ಹೊಣೆಗಾರರು ಎಂದು ರಾಜ್ಯದ ಜನರಿಗೆ ಗೊತ್ತಾಗಲಿ. ಅಲ್ಲದೆ, ಅವರಿಗೆ ಶಿಕ್ಷೆಯಾಗಲಿ. 8 ಸಾವಿರ ಕೋಟಿ ಹಣ ವಾಪಸ್ ಬರಲಿ ಎಂದು ಆಗ್ರಹಿಸಿದರು. ಸಮಯದ ಗಡುವಿನೊಳಗೆ ತನಿಖೆ ಮಾಡಲಿ. ಆ ತರಹದ ಹಗರಣ ನಡೆದಿದ್ದರೆ ಮೂರು ತಿಂಗಳಲ್ಲಿ ತನಿಖೆ ಮಾಡಲಿ. ಆಗ ಸತ್ಯ ಗೊತ್ತಾಗುತ್ತದೆ. ಬಿಜೆಪಿ ಅವಧಿಯ ತನಿಖೆಗಳಷ್ಟೇ ಅಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

ನೀವು ಈಗಾಗಲೇ ಹಲವಾರು ಭಾಗ್ಯಗಳನ್ನು ಘೋಷಿಸಿದ್ದೀರಿ. ಹಣಕಾಸಿನ ಸಂಕಷ್ಟ ಇದೆ. 8 ಸಾವಿರ ಕೋಟಿ ಬಂದರೆ ಕೋಟ್ಯಂತರ ಜನರಿಗೆ ನೆರವು ನೀಡಲು ಸಾಧ್ಯವಿದೆ. ತಪ್ಪಿತಸ್ಥರನ್ನು ಜೈಲಿಗೂ ಕಳಿಸಬಹುದು. ನಿಮ್ಮ ಪ್ರಾಮಾಣಿಕತೆಯೂ ಸಾಬೀತಾಗುತ್ತದೆ. 8 ಸಾವಿರ ಕೋಟಿ ವಿಚಾರದಲ್ಲಿ ಮೊದಲು ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ಸಿಗರಿಗೆ ವಿನಂತಿ ಮಾಡುವುದಾಗಿ ತಿಳಿಸಿದರು.

ಅವರು ಸಂವಿಧಾನದ ವಿರುದ್ಧ, ಬಲವಂತದ ಮತಾಂತರದ ಪರ, ಗೋಹತ್ಯೆಯ ಪರ ಎಂಬುದು ಸ್ಪಷ್ಟಗೊಳ್ಳಲಿ. ಈಗ ನಾವು ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ. ಅವರು ಅದನ್ನು ರದ್ದು ಮಾಡುವುದಾದರೆ ಅದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ. ನಾವು ಬಲವಂತದ ಮತಾಂತರದ ವಿರುದ್ಧ ಕಾಯ್ದೆ ತಂದಿದ್ದೇವೆ. ಅದನ್ನು ರದ್ದು ಮಾಡಿದರೆ ಇವರು ಬಲವಂತದ ಮತಾಂತರದ ಪರ ಎಂದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕೆ ವಿಧಾನಸೌಧದಲ್ಲಿ ಸಿದ್ಧತೆ: ಮೇ 24ಕ್ಕೆ ನೂತನ ಸ್ಪೀಕರ್ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.