ಬೆಂಗಳೂರು: ಬಂಡಾಯ ಏಳಿಸುವ ಸಂಚಿನ ಪಾತ್ರದಾರರು ಸಿದ್ದರಾಮಯ್ಯನವರು ಎಂದು ಸಚಿವ ಸಿ.ಟಿ ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ ರವಿ, ಪಕ್ಷದಲ್ಲಿನ ಬಂಡಾಯ ತಣಿಸಲು ಆಗಲಿಲ್ಲ, ಅವರಲ್ಲೇ ಬಣ ರಾಜಕೀಯ ಜೋರಾಗಿದೆ. ಖರ್ಗೆ, ಮುನಿಯಪ್ಪ ಸೇರಿ ಹಿರಿಯ ನಾಯಕರು ಬಂಡಾಯ ಎದ್ದಿದ್ದಾರೆ. ಅದನ್ನು ಮೊದಲು ಸಿದ್ದರಾಮಯ್ಯ ನೋಡಿಕೊಳ್ಳಲಿ. ನಮ್ಮಲ್ಲಿ ಬಂಡಾಯ ಏಳಿಸೋ ನಿಮ್ಮ ಕೆಲಸ ಹುಸಿಯಾಗುತ್ತದೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆನೂ ಆಗಬಹುದು ಎಂದು ಇದೇ ವೇಳೆ ತಿಳಿಸಿದರು. ಯಾರಿಗೆ ಯಾವ ಖಾತೆ ಕೊಡುತ್ತಾರೆಂಬುದು ಸಿಎಂಗೆ ಬಿಟ್ಟ ವಿಚಾರ. ಖಾತೆಗಾಗಿ ನಾವು ಖ್ಯಾತೆ ತೆಗೆಯಲ್ಲ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ವಿರುದ್ಧ ಸಿ.ಟಿ ರವಿ ಕಿಡಿ: ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಟಿ ರವಿ, ಕನಕಪುರದಲ್ಲಿ ಪ್ರಜಾಪ್ರಭುತ್ವ ಇದೆಯಾ?.ಅಲ್ಲಿ ನಡೀತಿರೋದು ಹಣದ ಅಧಿಕಾರದ ಸರ್ವಾಧಿಕಾರ ಎಂದು ಕಿಡಿ ಕಾರಿದರು.
ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಸೋನಿಯಾ, ರಾಹುಲ್ ಗಾಂಧಿ ಎಷ್ಟು ವರ್ಷಗಳ ಅಧಿಕಾರ, ಅವ್ರು ಮಾಡಿರೋದ್ರಾದ್ರೂ ಏನು, ಪ್ರಜಾಪ್ರಭುತ್ವ ಅವರ ಪಕ್ಷದಲ್ಲಿದೆಯೇ, ತುರ್ತು ಪರಿಸ್ಥತಿ ಜಾರಿ ಮಾಡಿ ಪ್ರಜಾಪ್ರಭುತ್ವ ಬಗ್ಗೆ ಮಾತನಾಡೋ ನೈತಿಕತೆ ಅವರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ರಪಡಿಸಿದ್ರು.