ETV Bharat / state

Student murder case: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿ ಹತ್ಯೆ ಕೇಸ್; ರೌಡಿಶೀಟರ್ ಸೇರಿ 6 ಆರೋಪಿಗಳ ಬಂಧನ - ಕಾಲೇಜು ವಿದ್ಯಾರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ

Hennur college student murder case probe: ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

arrest
ಬಂಧನ
author img

By

Published : Jul 28, 2023, 1:03 PM IST

ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್

ಬೆಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾಗಿದ್ದ ಆರು ಜನ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ಯೊಹಾನ್, ಡ್ಯಾನಿಯಲ್ ಆ್ಯಂಟನಿ ಹಾಗೂ ಶ್ರೀಕಾಂತ್ ಬಂಧಿತರು.

ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಮಾರ್ವೇಶ್ (19) ಎಂಬಾತ ಬುಧವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಎಂದಿನಂತೆ ಕಾಲೇಜಿನ ಬಳಿ ಬಂದಿದ್ದ ಮಾರ್ವೇಶ್, ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದ. ತಕ್ಷಣ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದ. ಹೆಣ್ಣೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : 2 ವರ್ಷಗಳ ಹಿಂದೆ ನಡೆದ ಹಲ್ಲೆಯ ವಿಡಿಯೋ ಈಗ ವೈರಲ್​.. ಸರಪಂಚ್​ನ ಪತಿ ಸೇರಿ ಮೂವರ ಬಂಧನ

ಅಂದು ನಡೆದಿದ್ದೇನು? : ಮಾರ್ವೇಶ್‌ನ ಸ್ನೇಹಿತನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದ. ಇದೇ ವಿಚಾರವನ್ನು ಆಕೆ ತನ್ನ ಸ್ನೇಹಿತ ಶ್ರೀಕಾಂತ್ ಬಳಿ ಹೇಳಿದ್ದಳು. ಇದನ್ನು ಶ್ರೀಕಾಂತ್ ತನ್ನ ಸ್ನೇಹಿತರ ಬಳಿ ಚರ್ಚಿಸಿದಾಗ ಮಾರ್ವೇಶ್‌ನ ಮೂಲಕ ಆತನನ್ನ ಕರೆಸಲು ಮುಂದಾಗಿದ್ದರು. ಅದರಂತೆ ಶ್ರೀಕಾಂತ್​ನ ಸ್ನೇಹಿತರಾದ ಯೊಹಾನ್ ಹಾಗೂ ಡೇನಿಯಲ್ ಬುಧವಾರ ಬೆಳಗ್ಗೆ ಕಾಲೇಜು ಬಳಿಯಿಂದ ಮಾರ್ವೇಶ್‌ನನ್ನು ಮಾತನಾಡುವುದಾಗಿ ಕರೆದೊಯ್ದಿದ್ದರು. ಬಳಿಕ, ಆತನನ್ನು ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್​ನ ವಶಕ್ಕೊಪ್ಪಿಸಿದ್ದರು.

ಆರೋಪಿಗಳು 'ನಿನ್ನ ಸ್ನೇಹಿತನಿಗೆ ಕರೆ ಮಾಡಿ ಇಲ್ಲಿಗೆ ಬರಲು ಹೇಳು' ಎಂದು ಮಾರ್ವೇಶ್‌ನ ಮೇಲೆ ಪೈಪ್ ಗಳಿಂದ ಹಲ್ಲೆ ಮಾಡಿದ್ದರು. ಆತ ಕರೆ ಸ್ವೀಕರಿಸದಿದ್ದಾಗ ಮಾರ್ವೇಶ್‌ನನ್ನು ಕಾಲೇಜು ಬಳಿ ಬಿಟ್ಟು ವಾಪಸ್ಸಾಗಿದ್ದರು. ತೀವ್ರ ಗಾಯಗೊಂಡಿದ್ದ ಮಾರ್ವೇಶ್, ಸ್ಥಳದಲ್ಲಿ ಕುಸಿದು ಬಿದ್ದಿದ್ದ. ಬಳಿಕ, ಸ್ನೇಹಿತರು ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಂತರಿಕ ಗಾಯಗಳಿಂದ ಮಾರ್ವೇಶ್ ಸಾವನ್ನಪ್ಪಿದ್ದ.

ಇದನ್ನೂ ಓದಿ : ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಐವರ ಬಂಧನ : ಪೊಲೀಸ್​ ಕಮಿಷನರ್ ಸಂತೋಷ ಬಾಬು

ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಠಾಣೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ‌. ಎಲ್ಲರೂ ಸಹ 20-25 ವರ್ಷ ಆಸುಪಾಸಿನವರು. ಅವರಲ್ಲಿ ಪ್ರಮುಖ ಆರೋಪಿ ಕಾರ್ತಿಕ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ರೌಡಿ ಪಟ್ಟಿ ಹೆಸರಿದೆ. ಚುನಾವಣೆ ಸಂದರ್ಭದಲ್ಲಿ ಮುಚ್ಚಳಿಕೆ ಸಹ ಬರೆಸಿಕೊಂಡಿರುವುದು ತಿಳಿದು ಬಂದಿದೆ. ಅಭಿಷೇಕ್ ಹಾಗೂ ನೆಲ್ಸನ್ ವಿರುದ್ಧವೂ ಕೊಲೆಯತ್ನ ಪ್ರಕರಣಗಳಿದ್ದು, ಅವರಿಬ್ಬರ ವಿರುದ್ಧವೂ ಮುಂದಿನ ದಿನಗಳಲ್ಲಿ ರೌಡಿ‌ಪಟ್ಟಿ ತೆರೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ‌.

ಇದನ್ನೂ ಓದಿ : Doddaballapur Crime : ಕುಡಿದು ಬಂದು ನಿತ್ಯ ಕಿರುಕುಳ, ತಾಯಿ ಮೇಲೆ ಹಲ್ಲೆ.. ಪುತ್ರನನ್ನು ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಂದ ತಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.