ETV Bharat / state

ಸ್ನೇಹಿತರ ಜಾಲಿ ರೈಡ್​ಗೆ ಫುಡ್ ಡೆಲಿವರಿ ಬಾಯ್​​ ಬಲಿ.. ಅಪಘಾತ ಎಸಗಿ ಮೃತದೇಹ 100 ಮೀಟರ್​ ಎಳೆದೊಯ್ದರು!

author img

By

Published : Jun 19, 2023, 9:40 AM IST

Updated : Jun 19, 2023, 12:17 PM IST

ಮದ್ಯಪಾನದ ಮತ್ತಿನಲ್ಲಿದ್ದರು ಎನ್ನಲಾದ ಸ್ನೇಹಿತರ ಕಾರು ಚಲಾವಣೆಯಿಂದ ಅಮಾಯಕ ಯುವಕ ಬಲಿಯಾಗಿರುವ ಘಟನೆ ಆರ್.ಆರ್.ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಮೃತ ಪ್ರಸನ್ನ ಕುಮಾರ್​ ಮತ್ತು ಅಪಘಾತವೆಸೆಗಿದ ಕಾರು

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಅಪಘಾತವೆಸಗಿದ ಕಾರು ಸ್ಥಳೀಯರಿಂದ ಧ್ವಂಸ

ಬೆಂಗಳೂರು: ಸ್ನೇಹಿತರ ಎಡವಟ್ಟಿಗೆ ಅಮಾಯಕ ಫುಡ್ ಡೆಲಿವರಿ ಬಾಯ್​ ಬಲಿಯಾಗಿರುವ ಘಟನೆ ತಡರಾತ್ರಿ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​ ಆರ್​​​ ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ ಮಾಡಿಕೊಂಡಿದ್ದ ಹೆಚ್.ಡಿ.ಕೋಟೆ ಮೂಲದ ಪ್ರಸನ್ನ ಕುಮಾರ್ ಮೃತ ದುರ್ದೈವಿ.

ಹೌದು ಮದ್ಯಪಾನದ ಮತ್ತಿನಲ್ಲಿದ್ದರು ಎನ್ನಲಾಗಿರುವ ಸ್ನೇಹಿತರು ಅಜಾಗರೂಕತೆಯಿಂದ ಕಾರನ್ನು ಓಡಿಸಿ ಬೈಕ್​ನಲ್ಲಿ ಹೋಗುತ್ತಿದ್ದ ಪ್ರಸನ್ನ ಕುಮಾರ್​ಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣರಾಗಿದ್ದಾರೆ. ಅಪಘಾತದ ನಂತರ ರಕ್ತದ ಮಡುವಿನಲ್ಲಿ ಬಿದ್ದವನನ್ನು ಬಿಟ್ಟು ಪರಾರಿಯಾಗುತ್ತಿದ್ದ ನಾಲ್ವರ ಪೈಕಿ ಚಾಲಕ ವಿನಾಯಕ್ ಎಂಬಾತನನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರು ಚಾಲಕ ಆರೋಪಿ ವಿನಾಯಕ್​
ಕಾರು ಚಾಲಕ ಆರೋಪಿ ವಿನಾಯಕ್​

ಘಟನೆ ವಿವರ: ವಿಜಯನಗರ ನಿವಾಸಿಯಾದ ವಿನಾಯಕ್​ ರಾಜಾಜಿನಗರ ಮಹೀಂದ್ರ ಕಾರ್ ಶೋ ರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ವಿನಾಯಕ್​ಗೆ ಇನ್ಸೆಂಟಿವ್ ಹಣ ಬಂದಿತ್ತು ಎನ್ನಲಾಗಿದೆ. ಅದೇ ಹಣದಲ್ಲಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಕೂಡಾ ಮಾಡಿದ್ದರು. ಪಾರ್ಟಿ ನಂತರ ಮದ್ಯಪಾನದ ಅಮಲಿನಲ್ಲೇ ಅಜಾಗರೂಕತೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ಮಧ್ಯೆ ಒಬ್ಬ ಸ್ನೇಹಿತನನ್ನು ಡ್ರಾಪ್ ಮಾಡಲು ಆರ್.ಆರ್. ನಗರದ ಕಡೆ ತೆರಳುತ್ತಿದ್ದರು ಎನ್ನಲಾಗಿದೆ.

ಅಪಘಾತದಿಂದ ಹಾನಿಗೊಳಗಾಗಿರುವ ಬೈಕ್​ ಚಿತ್ರ
ಅಪಘಾತದಿಂದ ಹಾನಿಗೊಳಗಾಗಿರುವ ಮೃತ ಪ್ರಸನ್ನ ಕುಮಾರ್​ ಚಲಾಯಿಸುತ್ತಿದ್ದ ಬೈಕ್​

ಈ ವೇಳೆ ಮುಂದೆ ಬೈಕಿನಲ್ಲಿ ತೆರಳುತ್ತಿದ್ದ ಪ್ರಸನ್ನ ಕುಮಾರ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಬಳಿಕ ಕಾರನ್ನು ನಿಲ್ಲಿಸದೇ ಪ್ರಸನ್ನ ಕುಮಾರ್​ನ ದೇಹವನ್ನು ಸುಮಾರು 100 ಮೀಟರ್ ದೂರ ಕಾರಿನಡಿ ಎಳೆದೊಯ್ದಿದ್ದಾರೆ. ಆದರೂ ಸ್ಥಳದಲ್ಲಿ ಕಾರು ನಿಲ್ಲಿಸದ ಆರೋಪಿಗಳು ಎಸ್ಕೇಪ್ ಆಗಿದ್ದರು.

ಈ ವೇಳೆ ಸುಮಾರು ಒಂದು ಕಿಲೋ ಮೀಟರ್​ನಷ್ಟು ದೂರ ಚೇಸ್ ಮಾಡಿಕೊಂಡು ಬಂದ ಇತರ ವಾಹನ ಸವಾರರು ಆರ್.ಆರ್. ನಗರ ಮೆಟ್ರೊ ನಿಲ್ದಾಣದ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಅಷ್ಟೊತ್ತಿಗಾಗಲೇ ಕಾರಿಲ್ಲಿದ್ದ ಮೂವರು ಯುವತಿಯರು, ಒಬ್ಬ ಯುವಕ ಕಾರಿಂದ ಇಳಿದು ಎಸ್ಕೇಪ್ ಆಗಿದ್ದಾರೆ.

ಈ ವೇಳೆ ಕಾರಿನ ಗಾಜು ಪುಡಿಪುಡಿಗೊಳಿಸಿದ ಸ್ಥಳೀಯರು ಚಾಲಕ ವಿನಾಯಕ್​ನನ್ನು ಥಳಿಸಿ ನಂತರ ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ಚಾಲಕ‌ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತ: ನಿನ್ನೆ (ಭಾನುವಾರ) ಬೆಳಗ್ಗೆ ಟರ್ಮಿನಲ್​ 2 ರಿಂದ ಟರ್ಮಿನಲ್​ 1 ಕ್ಕೆ ಪ್ರಯಾಣಿಕರನ್ನು ಶಿಪ್ಟ್​ ಮಾಡುತ್ತಿದ್ದ ಶೆಟಲ್​ ಬಸ್​ ಟಿ2 ಪಿಲ್ಲರ್​ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 15 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿತ್ತು. ಗಾಯಾಳುಗಳನ್ನು ತಕ್ಷಣ ವಿಮಾನ ನಿಲ್ದಾಣದ ಆಸ್ಟರ್​ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಪಘಾತದಲ್ಲಿ ಹೆಚ್ಚು ಗಾಯಗೊಂಡ 5-6 ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ: ವ್ಹೀಲಿಂಗ್ ಮಾಡುತ್ತಿದ್ದ 26 ಮಂದಿ ವಿರುದ್ಧ ಕ್ರಮ

Last Updated : Jun 19, 2023, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.