ETV Bharat / state

Bengaluru crime: ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನು ಅಪಹರಿಸಿದ ತಂದೆಯ ಬಂಧನ - ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನು ಅಪಹರಿಸಿದ ತಂದೆಯ ಬಂಧನ

ಸಂಗಾತಿಯ ಮೇಲಿನ ಸಿಟ್ಟಿಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಗುವನ್ನು ಅಪಹರಿಸಿದ ತಂದೆಯನ್ನ ಪೊಲೀಸರು‌ ಬಂಧಿಸಿದ್ದಾರೆ.

crime-father-arrested-for-abducting-child-out-of-anger-at-spouse-in-bengaluru
ಸಂಗಾತಿ ಮೇಲಿನ ಕೋಪಕ್ಕೆ ಮಗುವನ್ನು ಅಪಹರಿಸಿದ ತಂದೆ ಬಂಧನ
author img

By

Published : Jun 24, 2023, 4:02 PM IST

ಬೆಂಗಳೂರು: ಸಂಗಾತಿಯ ಮೇಲಿನ ಸಿಟ್ಟಿಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಿನಿಮೀಯ ಮಾದರಿಯಲ್ಲಿ ಮಗುವನ್ನು ಅಪಹರಿಸಿದ ತಂದೆಯನ್ನ ಕೊಡಿಗೆಹಳ್ಳಿ‌ ಠಾಣಾ ಪೊಲೀಸರು‌ ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಉದ್ಯಮಿ ಹರಿಕೃಷ್ಣ ಬಂಧಿತ ಆರೋಪಿ. ಜೂನ್​ 16ರಂದು ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಿಕೆವಿಕೆ ಬಳಿ ಬಂದಿದ್ದ ಆರೋಪಿ ತಮ್ಮ ಸಂಗಾತಿಯ ಕೈಯಲ್ಲಿದ್ದ ಆರು ವರ್ಷದ ಮಗನನ್ನ ಅಪಹರಿಸಿಕೊಂಡು ಹೋಗಿದ್ದರು.

ದೂರುದಾರಳೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದ ಆರೋಪಿ ಸಂಗಾತಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಇಬ್ಬರಿಗೂ ಆರು ವರ್ಷದ ಗಂಡು ಮಗುವಿದ್ದು, ಮಗು ವಿಚಾರವಾಗಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾಯಿ ಮಗುವನ್ನು ಕರೆದೊಯ್ಯಬಹುದು ಎಂದಿದ್ದ ನ್ಯಾಯಾಲಯ ಮಗುವನ್ನು ತಾಯಿಯ ಸುಪರ್ದಿಗೆ ನೀಡಿತ್ತು. ಆದರೆ ತಾಯಿ ತನ್ನ ಮಗನನ್ನ ಶಾಲೆಗೆ ಬಿಡಲು ತೆರಳಿದ್ದಾಗ ಆಟೋದಲ್ಲಿ ಹಿಂಬಾಲಿಸಿ ಆಕೆಯ ಕೈಯಿಂದ ಮಗುವನ್ನ ಕಿತ್ತುಕೊಂಡು ತಾನು ಬಂದಿದ್ದ ಆಟೋದಲ್ಲಿ ಆರೋಪಿ ಪರಾರಿಯಾಗಿದ್ದಾರೆ ದೂರು ದಾಖಲಾಗಿದೆ.

ಮಗುವಿನ ತಾಯಿ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೆಹಳ್ಳಿ ಪೊಲೀಸರು ಸತತ 7 ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಮಗನೊಂದಿಗೆ ಬಳ್ಳಾರಿ, ಕಲಬುರಗಿ ನಂತರ ಗೋವಾ ಅಂತಾ ಹರಿಕೃಷ್ಣ ಸುತ್ತಾಡಿದ್ದರು. ಹಲವು ಆಯಾಮದಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೆ ಗೋವಾದಲ್ಲಿ ಹರಿಕೃಷ್ಣನನ್ನ ಪತ್ತೆಹಚ್ಚಿದ್ದಾರೆ. ಬಳಿಕ ತಂದೆ - ಮಗ ಇಬ್ಬರನ್ನೂ ಬೆಂಗಳೂರಿಗೆ ಕರೆತಂದಿದ್ದಾರೆ‌. ವಿಚಾರಣೆ ವೇಳೆ ಆರೋಪಿ ಹರಿಕೃಷ್ಣ 2020ರಲ್ಲಿ ತಲಘಟ್ಟಪುರದಲ್ಲಿ ತಮ್ಮ ತಂದೆಯನ್ನ ಹತ್ಯೆಗೈದ ಪ್ರಕರಣದಲ್ಲಿ‌ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡವಳಿಕೆ ಸರಿಯಿಲ್ಲ ಎಂದು ಪತ್ನಿಗೆ ಚಾಕುವಿನಿಂದ ಇರಿದ ಪತಿ: ಪತ್ನಿ ನಡವಳಿಕೆ ಸರಿಯಿಲ್ಲ ಎಂದು ಹಾಡಹಗಲೇ ಪತಿ ಆಕೆಗೆ ಚಾಕು ಇರಿದಿರುವ ಘಟನೆ ಜೂ.21 ರಂದು ಸಂಜೆ ಬಾಣಸವಾಡಿಯ ಸೆಂಟ್ ಜೋಸೆಫ್ ಚರ್ಚ್ ಬಳಿ ನಡೆದಿತ್ತು. ನಿಖಿತಾ (30) ತನ್ನ ಗಂಡ ದಿವಾಕರ್​ನಿಂದ ಚಾಕು ಇರಿತಕ್ಕೊಳಗಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕು ಇರಿದ ದಿವಾಕರ್ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಚಿಕ್ಕಪ್ಪನ ಮಗ ಪ್ರತೀಭ್​ನನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಿಖಿತಾ ಹಾಗೂ ದಿವಾಕರ್ 9 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಅತಿಯಾದ ಮದ್ಯಪಾನದ ಚಟ ಹೊಂದಿದ್ದ ದಿವಾಕರನಿಂದ ದೂರವಾಗಿದ್ದ ನಿಖಿತಾ ಲಿಂಗರಾಜಪುರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇತ್ತೀಚಿಗೆ ಪುನಃಶ್ಚೇತನ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ದಿವಾಕರ್ ತನ್ನ ಚಿಕ್ಕಪ್ಪನ ಮಗ ಪ್ರತೀಭ್ ಮನೆಯ ಸಮೀಪದಲ್ಲಿ ವಾಸವಿದ್ದ. ಪತ್ನಿಯ ನಡವಳಿಕೆ ಸರಿಯಿಲ್ಲ ಎಂದು ಅನುಮಾನ ಹೊಂದಿದ್ದ ದಿವಾಕರ್ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ದಿವಾಕರ್, ನಿಖಿತಾಳ ಕುತ್ತಿಗೆ, ಹೊಟ್ಟೆ, ಎದೆ ಸೇರಿದಂತೆ ಐದು ಕಡೆ ಚಾಕು‌ ಇರಿದಿದ್ದ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಇದನ್ನೂ ಓದಿ: ಬರೋಬ್ಬರಿ 44 ದ್ವಿಚಕ್ರ ವಾಹನಗಳನ್ನು ಕದ್ದು ಪೊಲೀಸರ ಅತಿಥಿಗಳಾದ ಅಪ್ರಾಪ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.