ETV Bharat / state

Bengaluru crime: ಸ್ನೇಹಿತರನ್ನು ಮನೆಗೆ ಕರೆತಂದು ಡ್ರಗ್ಸ್ ಪಾರ್ಟಿ.. ಮಾಡಿ ಪತ್ನಿಗೆ ಟಾರ್ಚರ್ ಕೊಡುತ್ತಿದ್ದ ಆರೋಪದಡಿ ಪತಿ ಅರೆಸ್ಟ್​ - ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸರು

ಮನೆಗೆ ಸ್ನೇಹಿತರನ್ನು ಕರೆತಂದು ಡ್ರಗ್ಸ್​​ ಪಾರ್ಟಿ ಮಾಡಿ ಪತ್ನಿಗೆ ಟಾರ್ಚರ್ ಕೊಡುತ್ತಿದ್ದ ಪತಿಯನ್ನು ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಪಾರ್ಟಿ ಮಾಡಿ ಪತ್ನಿಗೆ ಟಾರ್ಚರ್ ಕೊಡುತ್ತಿದ್ದ ಪತಿ ಬಂಧನ

author img

By

Published : Jun 29, 2023, 7:04 PM IST

ಬೆಂಗಳೂರು : ಡ್ರಗ್ಸ್‌ ನಶೆಯಲ್ಲಿ ಪತ್ನಿಗೆ‌ ಕಿರುಕುಳ ನೀಡಿದ ಆರೋಪದಡಿ ಪತಿ ಸೇರಿ ಬಾಮೈದುನ ಇಬ್ಬರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಪತಿ‌ ಅಖಿಲೇಶ್ ಹಾಗೂ ಸಹೋದರ ಅಭಿಲಾಷ್ ನನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಅಖಿಲೇಶ್ ಸ್ನೇಹಿತರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

ಹೆಚ್​ಎಸ್​ಆರ್ ಲೇಔಟ್​ನಲ್ಲಿ ದಂಪತಿ ವಾಸ: ಆಂಧ್ರದ ಕಾಕಿನಾಡ ಮೂಲದ ಅಖಿಲೇಶ್ ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಪತಿಯ ಸಹೋದರ ಅಭಿಲಾಶ್ ಸಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮ್ಯಾಟ್ರಿಮೋನಿ ಜಾಲತಾಣದಲ್ಲಿ ವಧುವಿಗಾಗಿ ಶೋಧ‌ ನಡೆಸುವಾಗ ಮಹಿಳೆ ಪರಿಚಯವಾಗಿ ನಂತರ ಪ್ರೀತಿಗೆ ತಿರುಗಿತ್ತು. ಪೋಷಕರಿಗೆ ವಿಷಯ ತಿಳಿಸಿ 2019ರಲ್ಲಿ ಜಯನಗರದಲ್ಲಿ ವಿವಾಹ ಮಾಡಿಕೊಂಡು ಹೆಚ್​ಎಸ್​ಆರ್ ಲೇಔಟ್​ನಲ್ಲಿ ದಂಪತಿ ವಾಸವಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು.‌‌

ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ : ಮದ್ಯಪಾನ ಹಾಗೂ ಡ್ರಗ್ಸ್ ಚಟಕ್ಕೆ ದಾಸನಾಗಿದ್ದ ಅಖಿಲೇಶ್ ಕಾಲಕ್ರಮೇಣ ಮನೆಗೆ ಮಾದಕ ವಸ್ತು ತಂದು ಸೇವನೆ ಮಾಡುತ್ತಿದ್ದ‌ರು. ನಶೆಯಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಕೆಲ ದಿನಗಳ ಬಳಿಕ ಸ್ನೇಹಿತರನ್ನ ಮನೆಗೆ ಕರೆತಂದು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು.‌ ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದರು. ಮಾದಕ ಗುಂಗಿನಲ್ಲಿ ಅವರ ಸ್ನೇಹಿತರು ನನ್ನ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತನೆ ತೋರುತ್ತಿದ್ದರೂ‌‌ ಪತಿ ಏನೂ ಮಾತನಾಡದೆ ಸಹಕರಿಸುವಂತೆ ಹೇಳುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ನವೆಂಬರ್​ನಲ್ಲಿ‌ ಪೊಲೀಸರಿಗೆ ದೂರು: ದಿನನಿತ್ಯ ಕಿರುಕುಳ ಹೆಚ್ಚಾಗುತ್ತಿದ್ದಂತೆ ರೋಸಿ ಹೋಗಿದ್ದ ಪತ್ನಿಯ ಖಾಸಗಿ ವಿಡಿಯೋವನ್ನ ಗುಪ್ತವಾಗಿ ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದರು. ಈತನ‌ ಕಿರುಕುಳ‌ ತಾಳಲಾರದೆ ಪತ್ನಿಯೂ ತವರು ಮನೆ ಸೇರಿಕೊಂಡಿದ್ದರು. ಈ ಮಧ್ಯೆ ಮನೆಗೆ ಬರುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದರು. ಮನೆಗೆ ಬರದಿದ್ದರೆ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಪತಿ ಹಾಗೂ‌ ಆತನ ಸ್ನೇಹಿತರು ಧಮ್ಕಿ ಹಾಕಿದ್ದರಂತೆ. ಈ ಬಗ್ಗೆ ಕಳೆದ‌ ನವೆಂಬರ್​ನಲ್ಲಿ‌ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದರು.

ಗಂಡ ಹಾಗೂ ಬಾಮೈದುನನ್ನು ಬಂಧಿಸಿದ ಪೊಲೀಸರು: ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಮೂರು, ನಾಲ್ಕು ಬಾರಿ ಮಹಿಳೆಗೆ ನೋಟಿಸ್​ ಜಾರಿ ಮಾಡಿದ್ದರೂ ಮಹಿಳೆ ಮಾತ್ರ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಅಂತಿಮವಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆದ ಬಳಿಕ‌ ಇಂದು ಬೆಳಗ್ಗೆ ಮಹಿಳೆಯ ಗಂಡ ಹಾಗೂ ಬಾಮೈದುನನ್ನು ಬಂಧಿಸಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗದಲ್ಲಿದ್ದ ಪತ್ನಿಗೆ ಕಿರುಕುಳ: ಪತಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.