ETV Bharat / state

ವೇಗ ಪಡೆಯದ ಗೋ ಶಾಲೆಗಳ ನಿರ್ಮಾಣ ಕಾಮಗಾರಿ.. ಈವರೆಗೆ ಕೇವಲ 6 ಗೋ ಶಾಲೆ ಕಾರ್ಯಾರಂಭ!

author img

By

Published : Oct 10, 2022, 9:22 AM IST

ಹಸುಗಳ ರಕ್ಷಣೆಗಾಗಿ ರಾಜ್ಯದಲ್ಲಿ 'ಗೋ ಹತ್ಯೆ ನಿಷೇಧ‌ ಕಾಯ್ದೆ' ಜಾರಿಗೆ ತರಲಾಗಿದೆ. ಕಾಯ್ದೆ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.‌ ಕಾಯ್ದೆ ಜಾರಿಯಾಗಿ ಒಂದು ಮುಕ್ಕಾಲು ವರ್ಷ ಕಳೆದಿದ್ದು, ಈವರೆಗೆ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೋ ಶಾಲೆಗಳು ಕಾರ್ಯಾರಂಭವಾಗಿವೆ.‌ ಗೋಶಾಲೆ ನಿರ್ಮಾಣದ ಸ್ಥಿತಿಗತಿ ಹೇಗಿದೆ ಎಂಬ ಸಮಗ್ರ ವರದಿ ಇಲ್ಲಿದೆ.

Cowshed construction work delayed
ಗೋಶಾಲೆ ನಿರ್ಮಾಣ ಕಾಮಗಾರಿ ವಿಳಂಬ

ಬೆಂಗಳೂರು: ಬಿಜೆಪಿ ಸರ್ಕಾರ ಗೋವುಗಳ ರಕ್ಷಣೆಗಾಗಿ ವಿಶೇಷ ಕಾಳಜಿಯೊಂದಿಗೆ 'ಗೋ ಹತ್ಯೆ ನಿಷೇಧ‌ ಕಾಯ್ದೆ'ಯನ್ನು 2021 ಫೆಬ್ರವರಿಯಿಂದ ಜಾರಿಗೆ ತಂದಿದೆ. ಆದರೆ ಕಾಯ್ದೆ ಬಂದು ಒಂದು ಮುಕ್ಕಾಲು ವರ್ಷ ಕಳೆದಿದ್ದು, ಗೋವುಗಳ ರಕ್ಷಣೆಗಾಗಿ ಸರ್ಕಾರಿ ಗೋ ಶಾಲೆಗಳ ನಿರ್ಮಾಣ ಕಾರ್ಯ ಮಾತ್ರ ತೆವಳುತ್ತ ಸಾಗುತ್ತಿದೆ. ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೋ ಶಾಲೆಗಳು ಕಾರ್ಯಾರಂಭವಾಗಿವೆ. ಉಳಿದಂತೆ 24 ಜಿಲ್ಲೆಗಳ ಗೋಶಾಲೆ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲೇ ಇದೆ.

ಆಮೆಗತಿಯಲ್ಲಿ ಸರ್ಕಾರಿ ಗೋ ಶಾಲೆಗಳ ನಿರ್ಮಾಣ: ಗೋ ಹತ್ಯೆ ನಿಷೇಧ ಕಾಯ್ದೆಯನ್ನೇನೋ ಬಿಜೆಪಿ ಸರ್ಕಾರ ಅತೀ ಉತ್ಸಾಹದಿಂದ ಜಾರಿಗೆ ತಂದಿತು. ಆದರೆ ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಇರಬೇಕಾದ ಆಸಕ್ತಿಯನ್ನು ತೋರುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

  • 2021-22 ಸಾಲಿನಲ್ಲಿ 31 ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಈಗಾಗಲೇ ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕೆ ಸರ್ಕಾರ ಈವರೆಗೆ 30 ಕೋಟಿ ರೂ.‌ ಬಿಡುಗಡೆ ಮಾಡಿದೆ. ಈ ಪೈಕಿ 11.87 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.
  • 2022-23 ನೇ ಸಾಲಿನ ಆಯವ್ಯಯದಲ್ಲಿ ಗೋಶಾಲೆಗಳನ್ನು 100ಕ್ಕೆ ಹೆಚ್ಚಿಸಲಾಗುದು ಎಂದು ಘೋಷಿಸಲಾಗಿತ್ತು. ಅದರಂತೆ ಪ್ರತಿ ಜಿಲ್ಲೆಗಳಲ್ಲಿ 70 ಹೆಚ್ಚುವರಿ ಗೋ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
  • ಈ ಪೈಕಿ ವಿವಿಧ ಜಿಲ್ಲೆಗಳಲ್ಲಿ 12 ಗೋ ಶಾಲೆಗಳಿಗೆ ಜಮೀನು ಮಂಜೂರು ಮಾಡಲಾಗಿದೆ. 40 ಗೋ ಶಾಲೆಗಳಿಗಾಗಿ ಜಮೀನು ಗುರುತಿಸಲಾಗಿದೆ. 18 ಗೋ ಶಾಲೆಗಳಿಗೆ ಇನ್ನೂ ಜಮೀನನ್ನು ಗುರುತಿಸಲಾಗಿಲ್ಲ.

ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲ, ಗ್ರಾಮಗಳಲ್ಲಿ ಗೋಶಾಲೆ ಆರಂಭಿಸಿ : ಹೈಕೋರ್ಟ್

ಕಾರ್ಯಾರಂಭವಾಗಿರುವ ಗೋ ಶಾಲೆಗಳು:

  1. ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ 11 ಎಕರೆ ಜಮೀನಿನಲ್ಲಿ ಗೋಶಾಲೆ ಕಾರ್ಯಾರಂಭಗೊಂಡಿದೆ.
  2. ವಿಜಯಪುರ ತಾಲೂಕಿನಲ್ಲಿ 10 ಎಕರೆ
  3. ಹಾಸನದ ಅರಸೀಕೆರೆ ತಾಲೂಕಿನ 25 ಎಕರೆ
  4. ಮೈಸೂರಿನ ವರುಣಾ ಹೋಬಳಿಯಲ್ಲಿ 10 ಎಕರೆ
  5. ತುಮಕೂರಿನ ಶಿರಾ ತಾಲೂಕಿನಲ್ಲಿ 9.20 ಎಕರೆ
  6. ಕೋಲಾರದ ಕೆಜಿಎಫ್ ತಾಲೂಕಿನಲ್ಲಿ 9.36 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಸರ್ಕಾರಿ ಗೋ ಶಾಲೆಗಳು ಕಾರ್ಯಾರಂಭಗೊಂಡಿವೆ.

ಇನ್ನೂ ಪ್ರಗತಿ ಹಂತದಲ್ಲಿರುವ ಗೋ ಶಾಲೆಗಳು:

ಜಿಲ್ಲೆ ಸ್ಥಳಜಮೀನು ವಿಸ್ತೀರ್ಣ
ಬೆಂಗಳೂರು ನಗರದೊಡ್ಡಬಳ್ಳಾಪುರ ತಾಲೂಕು 35.22 ಎಕರೆ
ಬೆ.ಗ್ರಾಮಾಂತರನೆಲಮಂಗಲ ತಾಲೂಕು 10 ಎಕರೆ
ಚಿಕ್ಕಬಳ್ಳಾಪುರಶಿಡ್ಲಘಟ್ಟ ತಾಲೂಕು 9.38 ಎಕರೆ
ಬಾಗಲಕೋಟೆ ಬೀಳಗಿ ತಾಲೂಕು 25 ಎಕರೆ
ದ.ಕನ್ನಡ ಕಡಬ ತಾಲೂಕು98.45 ಎಕರೆ
ರಾಯಚೂರು ರಾಯಚೂರು ತಾಲೂಕು 6 ಎಕರೆ
ಹಾವೇರಿ ಗುತ್ತಲ‌ಕುರಿ 25 ಎಕರೆ
ಗದಗ ಹರ್ತಿ ಗ್ರಾಮ 10 ಎಕರೆ
ಬಳ್ಳಾರಿ/ವಿಜಯನಗರಹಗರಿಬೊಮ್ಮನ ಹಳ್ಳಿ ತಾಲೂಕು 9.88 ಎಕರೆ
ಕೊಪ್ಪಳಯಲಬುರ್ಗಾ ತಾಲೂಕು 10 ಎಕರೆ
ದಾವಣಗೆರೆ ದಾವಣಗೆರೆ ತಾಲೂಕು 7 ಎಕರೆ
ಚಾಮರಾಜನಗರ ಚಾಮರಾಜನಗರ ತಾಲೂಕು 9 ಎಕರೆ
ಚಿತ್ರದುರ್ಗಚಳ್ಳಕೆರೆ ತಾಲೂಕು 9.36 ಎಕರೆ
ರಾಮನಗರಚನ್ನಪಟ್ಟಣ ತಾಲೂಕು 8 ಎಕರೆ
ಬೆಳಗಾವಿ ಹುಕ್ಕೇರಿ ತಾಲೂಕು 19.04 ಎಕರೆ
ಮಂಡ್ಯಮದ್ದೂರು ತಾಲೂಕು 10 ಎಕರೆ
ಕೊಡಗು ಮಡಿಕೇರಿ ತಾಲೂಕು 8 ಎಕರೆ
ಧಾರವಾಡಮದನಬಾವಿ ಗ್ರಾಮ 10 ಎಕರೆ
ಉಡುಪಿಹೆಬ್ರಿ ತಾಲೂಕು 13.24 ಎಕರೆ
ಉ.ಕನ್ನಡ ಹಳಿಯಾಳ ತಾಲೂಕು 20 ಎಕರೆ
ಕಲಬುರ್ಗಿ ಕಲಬುರಗಿ ತಾಲೂಕು 25 ಎಕರೆ
ಯಾದಗಿರಿಯಾದಗಿರಿ ತಾಲೂಕು 25 ಎಕರೆ
ಶಿವಮೊಗ್ಗಸಾಗರ ತಾಲೂಕು 46 ಎಕರೆ
ಬೀದರ್ಔರಾದ್ ತಾಲೂಕು 10 ಎಕರೆ

ಇದನ್ನೂ ಓದಿ: ರಾಜ್ಯದ ಮೊಟ್ಟ ಮೊದಲ ಗೋಶಾಲೆ ಲೋಕಾರ್ಪಣೆ; ದತ್ತು ಪಡೆಯುವ ಪ್ರಕ್ರಿಯೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.