ಬೆಂಗಳೂರು: ರಾಜ್ಯದಲ್ಲಿಂದು 32,277 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,042 ಮಂದಿಗೆ ಸೋಂಕು ದೃಢಪಟ್ಟಿದೆ. 1,704 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 39,64,998 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 11,403 ಏರಿಕೆಯಾಗಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ. 6.32 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 6.30 ಇದೆ. ಇಲ್ಲಿಯವರೆಗೂ ಪರೀಕ್ಷಿಸಲಾದ ಒಟ್ಟು ಸಂಖ್ಯೆ 679,66,892. ವಾರದ ಸಾವಿನ ಪ್ರಮಾಣ ಶೇ. 0.09 ರಷ್ಟಿದೆ.
ವಿಮಾನ ನಿಲ್ದಾಣದಿಂದ ತಪಾಸಣೆಗೆ ಯಾರೂ ಒಳಗಾಗಿಲ್ಲ. ಇದುವರೆಗೂ 13,20,782 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿಂದು 1,309 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,42,569 ಕ್ಕೆ ಏರಿಕೆ ಆಗಿದೆ. ಇಂದು 1,175 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 18,17, 254 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 8,338 ಇದೆ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,976 ರಷ್ಟಿದೆ.
ಇದನ್ನೂ ಓದಿ: ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ