ETV Bharat / state

ಆಕ್ಸಿಜನ್ ಸಿಗಲ್ಲ, ಬೆಡ್ ಇಲ್ಲ ಅಂತ‌ ಕಾದು ಕೂರಲಿಲ್ಲ.. ಬೆಂಗಳೂರಿನ ಈ ಅಪಾರ್ಟ್​ಮೆಂಟ್​ನಲ್ಲೇ ಸಿದ್ಧವಾಯ್ತು ಮಿನಿ ಕೋವಿಡ್ ಕೇರ್ ಸೆಂಟರ್

ಸದ್ಯ ಕೊರೊನಾ ಹಾವಳಿ ಮಿತಿ ಮೀರುತ್ತಿದೆ. ಬೆಂಗಳೂರಂತು ಕೊರೊನಾ ಹಾಟ್​ಸ್ಪಾಟ್​ ಆಗಿದೆ. ಹೀಗಾಗಿ ವೈದ್ಯಕೀಯ ಆಕ್ಸಿಜನ್​, ಆಸ್ಪತ್ರೆಗಳಲ್ಲಿ ಬೆಡ್​ಗಳ ಸಮಸ್ಯೆ ಕಾಣಿಸಿಕೊಂಡಿದೆ. ಇವೆಲ್ಲ ಸಮಸ್ಯೆಗಳನ್ನು ಅರಿತ ಅಪಾರ್ಟ್​ಮೆಂಟ್​ವೊಂದರ​ ನಿವಾಸಿಗಳು ತಾವಿರುವಲ್ಲಿಯೇ ಕೋವಿಡ್​ ಕೇರ್ ಸೆಂಟರ್​ ಆರಂಭಿಸಿದ್ದಾರೆ. ​

covid care center in apartment
ಅಪಾರ್ಟ್​ಮೆಂಟ್​ನಲ್ಲಿ ಕೋವಿಡ್​ ಕೇರ್​ ಸೆಂಟರ್​
author img

By

Published : May 6, 2021, 5:09 PM IST

Updated : May 6, 2021, 5:31 PM IST

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ದೊರಕದೆ ದಿನೇ ದಿನೆ ಕೋವಿಡ್​ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಸಹ ಆ್ಯಂಬುಲೆನ್ಸ್ ನಲ್ಲೇ ಹಾಗೂ ನಡುಬೀದಿ ಹೀಗೆ ಎಲ್ಲೆಂದರಲ್ಲಿ ಪ್ರಾಣ ಬಿಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈ ಮಧ್ಯೆ ನಗರದ ಅಪಾರ್ಟ್​ಮೆಂಟ್​ ನಿವಾಸಿಗಳು ತಮಗೂ ಇದೇ ರೀತಿ ಸಮಸ್ಯೆ ಎದುರಾಗಬಾರದು ಎಂದು ಒಂದೊಳ್ಳೆ ಐಡಿಯಾ ಮಾಡಿದ್ದಾರೆ.

ಆಕ್ಸಿಜನ್‌ ಹಾಗೂ ಬೆಡ್ ಗಾಗಿ ಕಾದು ಕುಳಿತರೆ ಪ್ರಾಣಪಕ್ಷಿ ಹಾರಿ ಹೋಗುವ ಆತಂಕದಿಂದ ಇಲ್ಲಿನ‌ ಅಪಾರ್ಟ್ ವೊಂದರಲ್ಲಿ ಮಿನಿ ಕೊರೊನಾ‌ ಕೇರ್ ಸೆಂಟರ್ ಆರಂಭಿಸಲಾಗಿದೆ. ಯಶವಂತಪುರದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್​ಮೆಂಟ್​ ನಿವಾಸಿಗಳು ಒಗ್ಗೂಡಿ ಮನೆಯಂಗಳದಲ್ಲಿ ಐದು ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯವಿರುವ ಕೋವಿಡ್​ ಕೇರ್ ಸೆಂಟರ್ ನಿರ್ಮಿಸಿದ್ದಾರೆ.

covid care center in apartment
ಅಪಾರ್ಟ್​ಮೆಂಟ್​ನಲ್ಲಿ ನಿರ್ಮಾಣವಾದ ಕೋವಿಡ್​ ಕೇರ್​ ಸೆಂಟರ್​

ಈ ಅಪಾರ್ಟ್​ಮೆಂಟ್​ನಲ್ಲಿ ಒಟ್ಟು 520 ಫ್ಲ್ಯಾಟ್ ಗಳಿದ್ದು, 20 ಪ್ಲಾಟ್ ಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಬೆಡ್ ಸಿಗಲಿದೆ ಎಂದು ಕಾಯದೆ ಕೇರ್ ಸೆಂಟರ್ ತೆರೆಯಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ 40ಕ್ಕೂ ಹೆಚ್ಚು ವೈದ್ಯರಿದ್ದಾರೆ. ಪ್ರತಿನಿತ್ಯ ಒಬ್ಬರಂತೆ ಕೋವಿಡ್ ಕೇರ್ ಸೆಂಟರ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಸೋಂಕಿತರ ಪೈಕಿ ಕೆಲವರಿಗೆ ವಯೋಸಹಜ ಕಾಯಿಲೆಯಿದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್​ಮೆಂಟ್​ನ ಕ್ಲಬ್ ಏರಿಯಾದಲ್ಲಿ ಕೇರ್ ಸೆಂಟರ್ ತೆರೆಯಲಾಗಿದೆ.

ಇದನ್ನೂ ಓದಿ- ಬೆಂಗಳೂರಿನ ಆಸ್ಪತ್ರೆಗಳು ಫುಲ್: ಬೆಡ್ ಸಿಗದೆ ಜೀವ ಬಿಡುತ್ತಿರುವ ಕೋವಿಡ್ ಸೋಂಕಿತರು!

Last Updated : May 6, 2021, 5:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.