ETV Bharat / state

ಜನಾರ್ದನ ರೆಡ್ಡಿ ವಿರುದ್ಧದ ಬೇನಾಮಿ ಪ್ರಕರಣ ಮುಕ್ತಾಯಗೊಳಿಸಿದ ನ್ಯಾಯಾಲಯ

ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬೇನಾಮಿ ಆಸ್ತಿ ವಹಿವಾಟುಗಳ ಕಾಯಿದೆ ಸೆಕ್ಷನ್​ 3(2) ಅಡಿ ದಾಖಲಾಗಿದ್ದ 4 ಪ್ರಕರಣಗಳನ್ನು ಮುಕ್ತಾಯಗೊಳಿಸಿ ಕೋರ್ಟ್ ಆದೇಶಿಸಿದೆ.

court-closed-undocumented-property-case-against-janardhan-reddy
ಜನಾರ್ದನ ರೆಡ್ಡಿ ವಿರುದ್ಧದ ಬೇನಾಮಿ ಪ್ರಕರಣ ಮುಕ್ತಾಯಗೊಳಿಸಿದ ನ್ಯಾಯಾಲಯ
author img

By

Published : Dec 7, 2022, 9:19 PM IST

Updated : Dec 7, 2022, 10:35 PM IST

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧದಲ್ಲಿ ಬೇನಾಮಿ ಆಸ್ತಿಗಳ ವಹಿವಾಟುಗಳ ಕಾಯಿದೆ ಸೆಕ್ಷನ್​ (2) ಅಡಿಯಲ್ಲಿ ದಾಖಲಿಸಿಕೊಂಡಿದ್ದ 4 ಪ್ರಕರಣಗಳನ್ನು ನಗರದ ನ್ಯಾಯಾಲಯ ಮುಕ್ತಾಯಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರು ಜ್ಞಾಪನಾ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರ ಮತ್ತು ಮೆಸೆಸ್​ ಡಿಕ್ಲೊಮಾ ಪ್ರೈವೇಟ್​ ಲಿಮಿಡೆಟ್​ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಬೇನಾಮಿ ರಸ್ತೆ ವಹಿವಾಟು ಕಾಯಿದೆ 1988ರ ಸೆಕ್ಷನ್​ 3(2) ಅಸಾಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇಧ 20(1)ಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿತ್ತು.

ಈ ಆದೇಶದಂತೆ ಆರೋಪಿತರ ವಿರುದ್ಧ ಬೇನಾಮಿ ವಹಿವಾಟು ಕಾಯಿದೆಯಲ್ಲಿ ಪ್ರಕರಣ ಮುಂದುವರೆಸಲು ಅವಕಾಶವಿಲ್ಲ ಎಂದು ವಕೀಲರು ತಮ್ಮ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿದ್ದರು.

ಇದನ್ನೂ ಓದಿ: ಕೊಪ್ಪಳ: ಜನಾರ್ದನ ರೆಡ್ಡಿ ವಾಸ್ತವ್ಯಕ್ಕೆ ಸಿದ್ಧವಾಯ್ತು ಭವ್ಯ ಬಂಗಲೆ!

ಅಲ್ಲದೆ, ಆರೋಪಿತರ ವಿರುದ್ಧ ಮೂರನೇ ವ್ಯಕ್ತಿಯೊಂದಿಗೆ 2009ರಲ್ಲಿ ಬೇನಾಮಿ ವ್ಯವಹಾರ ಮಾಡಲಾಗಿದೆ ಎಂದು 2021ರಲ್ಲಿ ಪ್ರಕರಣ ದಾಖಲಾಗಿದೆ. ಆದರೆ, 2016ರಲ್ಲಿ ಬೇನಾಮಿ ಆಸ್ತಿಗಳ ಕಾಯಿದೆ ತಿದ್ದುಪಡಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಪೂರ್ವಾನ್ವಯವಾಗಿ ಪರಿಗಣಿಸುವುದಕ್ಕೆ ಅವಕಾಶವಿರುವುದಿಲ್ಲ ಎಂಬುದಾಗಿ ಮನವಿ ಮಾಡಿದ್ದರು.

ಈ ಅಂಶವನ್ನು ದಾಖಲಿಸಿಕೊಂಡಿರುವ ನಗರದ 47ನೇ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶರಾದ ಇ.ಚಂದ್ರಕಲಾ ಅವರು ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಮಾಲಾಧಾರಣೆ ಮಾಡಿ ಗಂಗಾವತಿಗೆ ಅಧಿಕೃತ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ

Last Updated : Dec 7, 2022, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.