ETV Bharat / state

ಪ್ರತಿಪಕ್ಷಗಳ ಮುಂದುವರಿದ ಧರಣಿ: ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ; ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ನಿರ್ಧಾರ

ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ಮಾತನಾಡಲು ಅವಕಾಶ ನಿರಾಕರಣೆಯಾದ ಹಿನ್ನೆಲೆ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ಮುಂದುವರಿಸಿದ್ದು, ಅದನ್ನ ಅಹೋರಾತ್ರಿ ಧರಣಿಗೆ ಬದಲಿಸಿಕೊಂಡಿದ್ದಾರೆ.

council
ಪರಿಷತ್
author img

By

Published : Feb 16, 2022, 5:29 PM IST

ಬೆಂಗಳೂರು: ಕೆಂಪು ಕೋಟೆಯಲ್ಲೂ ಕೇಸರಿ ಬಾವುಟ ಹಾರಿಸುತ್ತೇವೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಸಂವಿಧಾನ ಬಾಹಿರ ಎಂದು ಪ್ರತಿಪಕ್ಷ ಕಾಂಗ್ರೆಸ್​ ಇಂದು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಿತು. ಸಚಿವರನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಈ ವಿಚಾರವಾಗಿ ಸದನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಹೀಗಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಸದನವನ್ನ ಕೆಲಕಾಲ ಮುಂದೂಡಿದರು. ಕೆಲ ನಿಮಿಷಗಳ ಬಳಿಕ ಸಭೆ ಆರಂಭವಾದಾಗಲೂ ಗದ್ದಲ ಏರ್ಪಟ್ಟಿದ್ದರಿಂದ ಸದನವನ್ನು ನಾಳೆಗೆ ಮುಂದೂಡಲಾಯಿತು.

ಇನ್ನು ವಿಧಾನ ಪರಿಷತ್​ನಲ್ಲೂ ಇದೇ ಗದ್ದಲ ಮುಂದುವರೆಯಿತು. ವಿಧಾನ ಪರಿಷತ್ ಕಲಾಪದ ಭೋಜನ ವಿರಾಮದ ಬಳಿಕ ಸಭಾಪತಿಗಳು ಪ್ರಶ್ನೋತ್ತರ ಅವಧಿಗೆ ಮುಂದಾದ ಸಂದರ್ಭ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಬೆಳಗ್ಗೆ ತಿರಸ್ಕರಿಸಲಾದ ನಿಲುವಳಿ ಸೂಚನೆ ಮೇಲೆ ಚರ್ಚಿಸಲು ಇನ್ನೊಮ್ಮೆ ಅವಕಾಶ ನೀಡಿ ಎಂದರು. ದೇಶದ್ರೋಹದ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಅವರನ್ನು ಜೈಲಿಗೆ ಕಳುಹಿಸಬೇಕು.‌ ಚರ್ಚೆ ಆಗಲೇಬೇಕಾಗಿದೆ ಎಂದರು.

ಇದರಿಂದ ಚರ್ಚೆಗೆ ಅವಕಾಶ ನೀಡಿ, ಇಲ್ಲಾ ಸಿಎಂ ಸದನಕ್ಕೆ ಆಗಮಿಸಿ ಉತ್ತರ ನೀಡಲಿ. ಇಲ್ಲವಾದರೆ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ. ಸಚಿವರ ಮೂಲಕ ಲಭಿಸಿದ ಸರ್ಕಾರದ ಉತ್ತರ ಬಗ್ಗೆ ನಮಗೆ ವಿರೋಧ ಇದೆ. ಪ್ರಶ್ನೋತ್ತರ ಸೇರಿದಂತೆ ಕಲಾಪದಲ್ಲಿ ಯಾವುದೇ ಚಟುವಟಿಕೆ ಬೇಡ ಎಂದರು.

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭಾಪತಿಗಳನ್ನು ಉದ್ದೇಶಿಸಿ ಮಾತನಾಡಿ, ಎರಡೂ ಕಡೆಯ ಮಾತು ಆಲಿಸಿ, ಸದನದ ನಿಯಮ ಮೀರಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಪೀಠದಿಂದ ತೀರ್ಪು ಬಂದಿದೆ. ಈ ಮಧ್ಯೆ ಮತ್ತೆ ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ. ಚರ್ಚೆ ಅನಗತ್ಯ. ಪೀಠದ ತೀರ್ಮಾನ ಅಂತಿಮ. ಯಾವುದೇ ರೀತಿ ವಿಚಾರ ಮುಂದುವರಿಗೆ ಬೇಡ ಅಂದರು.

ಸಭಾಪತಿಗಳು 2. 40 ಗಂಟೆ ಅವಧಿ ಚರ್ಚೆ ಆಗಿದೆ. ಕಾಲಾವಕಾಶ ಅನಗತ್ಯ. ಮತ್ತೆ ಚರ್ಚೆಗೆ ಅವಕಾಶ ಇಲ್ಲ. ಕಾಂಗ್ರೆಸ್ ನಾಯಕರು ಮತ್ತೆ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದರು. ಘೋಷಣೆ ಕೂಗಿದರು. ಇವರ ಪ್ರತಿಭಟನೆ ಮಧ್ಯೆಯೇ ಪ್ರಶ್ನೋತ್ತರ ಅವಧಿ ನಡೆಯಿತು.

ಕಲಾಪ ಮುಂದೂಡಿಕೆ: ಪರಿಷತ್ ಸದಸ್ಯರ ಗದ್ದಲದ ನಡುವೆಯೇ ಪ್ರಶ್ನೋತ್ತರ ಅವಧಿ ಮುಗಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಸದನ ಸಮರ್ಪಕ ರೀತಿಯಲ್ಲಿ ಕಾರಣ ನೀಡಿ ಕಲಾಭವನ ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದರು.

ಅಹೋರಾತ್ರಿ ಧರಣಿಗೆ ನಿರ್ಧಾರ: ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ಮಾತನಾಡಲು ಅವಕಾಶ ನಿರಾಕರಣೆಯಾದ ಹಿನ್ನಲೆ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ಮುಂದುವರಿಸಿದ್ದು, ಅದನ್ನ ಅಹೋರಾತ್ರಿ ಧರಣಿಗೆ ಬದಲಿಸಿಕೊಂಡಿದ್ದಾರೆ. ಹಿಂದೂ ವಿಧಾನಪರಿಷತ್ ಬಾವಿಯಲ್ಲೇ ಕುಳಿತು ಧರಣಿ ಮುಂದುವರಿಸುವ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನಿಸಿದ್ದಾರೆ.

ಸಚಿವ ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿರುವ ತಮ್ಮ ಹೋರಾಟಕ್ಕೆ ಯಶಸ್ಸು ಸಿಗುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಪ್ರತಿಪಕ್ಷ ನಾಯಕರು ತಿಳಿಸಿದ್ದಾರೆ.

ಓದಿ: ಮಾ.3 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ - ಪುರಾಣಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.