ಬೆಂಗಳೂರು: ದೇಶದಲ್ಲೇ ಎರಡನೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿಂದು 8,244 ಮಂದಿಗೆ ಕೊರೊನಾ ದೃಢವಾಗಿದ್ದು 119 ಜನರನ್ನ ಬಲಿ ಪಡೆದಿದೆ.
ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 7,384ಕ್ಕೆ ಏರಿದರೆ, 4,67,689ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. ಇನ್ನು ಇಂದು 8865 ಗುಣಮುಖರಾಗಿದ್ದು, 3,61,823 ಮಂದಿ ಈವರೆಗೆ ಡಿಸ್ಜಾರ್ಜ್ ಆಗಿದ್ದಾರೆ.
ಸದ್ಯ 98,463 ಸಕ್ರಿಯ ಪ್ರಕರಣಗಳು ಇದ್ದು, 800 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. 5,10,282 ಹೋಂ ಕ್ವಾರೈಂಟನ್ನಲ್ಲಿ ಇದ್ದಾರೆ. 38,46,937 ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಪ್ರಾಥಮಿಕವಾಗಿ 5,97,127 ದ್ವಿತೀಯ 5,38,582 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ.