ಬೆಂಗಳೂರು: ಕೊರೊನಾಗೆ ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯಲಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಕೆಲ ಖಾಸಗಿ ಆಸ್ಪತ್ರೆಗಳು ಈ ಕುರಿತು ಒಡಂಬಡಿಕೆ ಮಾಡಿಕೊಂಡಿವೆ. ಸರ್ಕಾರದ ಪ್ಯಾಕೇಜ್ ಆಧಾರದಲ್ಲಿ ಈ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವಿರಲಿದೆ. ರಾಜ್ಯದಲ್ಲಿ ಒಟ್ಟು 518 ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ನಿಗದಿ ಆಗಿದ್ದು, ಬೆಂಗಳೂರಿನಲ್ಲಿ 44 ಆಸ್ಪತ್ರೆಗಳು ಚಿಕಿತ್ಸೆಗೆ ಸಿದ್ಧವಿದೆ.
![ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಅಧಿಸೂಚನೆ](https://etvbharatimages.akamaized.net/etvbharat/prod-images/7705190_187_7705190_1592720136962.png)
ಇನ್ನು ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಆದರೆ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ, ಆಯಾ ವ್ಯಾಪ್ತಿಯ ಪಾಲಿಕೆ ಆಯುಕ್ತರು, ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿರಲಿದೆ.
ಸೋಂಕಿತರು ಆಸ್ಪತ್ರೆಗೆ ಬಂದ ಕೂಡಲೇ ಬಿಬಿಎಂಪಿ ಅಥವಾ ಆರೋಗ್ಯ ಇಲಾಖೆ ಮಾಹಿತಿ ಚಿಕಿತ್ಸೆಯ ಕುರಿತು ಕ್ಷಣಕ್ಷಣದ ಮಾಹಿತಿ ಒದಗಿಸಬೇಕು. ಇತ್ತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೂಚಿಸಿದ 16 ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ದೊರೆಯಲಿದೆ.
![ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಅಧಿಸೂಚನೆ](https://etvbharatimages.akamaized.net/etvbharat/prod-images/7705190_433_7705190_1592712320605.png)
ಈ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ:
ಸರ್.ಸಿ.ವಿ.ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಇ.ಡಿ.ಆಸ್ಪತ್ರೆ, ಇಎಸ್ ಐ ಇಂದಿರಾನಗರ, ರಾಜಾಜಿನಗರ, ಪೀಣ್ಯ, ಕಮಾಂಡ್ ಆಸ್ಪತ್ರೆ, ಕೆ.ಆರ್. ಪುರಂ ಜನರಲ್ ಆಸ್ಪತ್ರೆ, ಯಲಹಂಕ, ಆನೇಕಲ್, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಜನರಲ್ ಆಸ್ಪತ್ರೆಗಳು, ಕುಷ್ಠರೋಗ ಆಸ್ಪತ್ರೆ ಮಾಗಡಿ ರಸ್ತೆಗಳ ಒಟ್ಟು 16 ಆಸ್ಪತ್ರೆಗಳು.
ಒಟ್ಟು ಲಭ್ಯವಿರುವ ಹಾಸಿಗೆಗಳು- 2,984
ಕೋವಿಡ್ ಗಾಗಿ ನಿಗದಿಯಾದ ಹಾಸಿಗೆ - 2330
ಆಕ್ಸಿಜನ್ ಹಾಸಿಗೆ - 527
ಐಸಿಯು ಕೋವಿಡ್ ಹಾಸಿಗೆ - 167
ವೆಂಟಿಲೇಟರ್ ಇರುವ ಕೋವಿಡ್ ಬೆಡ್- 92
ಬೆಂಗಳೂರಿನಲ್ಲಿ ಮೂರು ಕೋವಿಡ್ ಕೇರ್ ಸೆಂಟರ್ಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಲ್ಲಿ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗುತ್ತಿದೆ.