ಬೆಂಗಳೂರು: ರಾಜ್ಯದಲ್ಲಿ 8 ತಿಂಗಳಿನಿಂದ ಕಾಡಿದ್ದ, ಕಾಡುತ್ತಿರುವ ಕೊರೊನಾ ಸೋಂಕು ಕಳೆದ ಮೂರು ದಿನದಿಂದ ಹತೋಟಿಗೆ ಬರುತ್ತಿದೆ. 10 ಸಾವಿರ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ ಕ್ರಮೇಣ ಹಂತ ಹಂತವಾಗಿ ಇಳಿಕೆಯ ದಾರಿ ಕಂಡಿದೆ. ಇತ್ತ ಕೊರೊನಾ ಕಂಟ್ರೋಲ್ಗೆ ಪರೀಕ್ಷೆ ಮಾಡಿಸುತ್ತಿರುವುದೇ ಕಾರಣವಾಗಿದೆ. ಹೀಗಾಗಿ ಕೊರೊನಾ ಸೋಂಕು ಹತೋಟಿಗೆ ಬಂತು ಅಂತ ಪರೀಕ್ಷೆಗಳ ಪ್ರಮಾಣ ಕಡಿಮೆ ಮಾಡುವಂತಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೋಂಕಿತರ ಸಂಖ್ಯೆಯ ಜೊತೆ ಜೊತೆಗೆ ಸಾವಿನ ಸಂಖ್ಯೆಯು ಕಡಿಮೆ ಆಗುತ್ತಿದ್ದು, ಕೊಂಚ ಸಮಾಧಾನಕರವಾಗಿದೆ. ಹಿಂದಿನ ಜೀವನ ಶೈಲಿ ಮತ್ತೆ ವಾಪಸ್ ಬರುವ ಕ್ಷಣಕ್ಕೆ ಜನರು ಕಾತುರರಾಗಿದ್ದಾರೆ.
ಕೊರೊನಾ ತೀವ್ರತೆ - ಹತ್ತು ಸಾವಿರ ಗಡಿ ದಾಟಿದ್ದ ಕಾಲ, ದಿನಾಂಕ-ಸೋಂಕಿತರ ಸಂಖ್ಯೆ
29-9-2020- 10,453
1-10-2020- 10,070
4-10-2020- 10,145
7-10-2020- 10,947
8-10-2020- 10,704
9-10-2020- 10,913
10-10-2020- 10,517
ಸೆಪ್ಟೆಂಬರ್ ತಿಂಗಳ ಅಂತ್ಯ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿತ್ತು. ಪ್ರತಿ ದಿನವೂ 10 ಸಾವಿರ ಗಡಿದಾಟುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಸಾಕಷ್ಟು ಆತಂಕ ಮೂಡಿಸಿತ್ತು. ಇದೆಕ್ಕೆಲ್ಲ ರಾಜ್ಯ ಸರ್ಕಾರ ಅನ್ಲಾಕ್ ಮಾಡಿದ್ದೇ ಕಾರಣ ಅಂತಲೂ ಆರೋಪ ಕೇಳಿ ಬರ್ತಿತ್ತು. ಆದರೆ ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ಕೊರೊನಾ ಕಂಟ್ರೋಲ್ಗೆ ಬರಬೇಕು ಅಂದರೆ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡಬೇಕು ಅಂತ ಶಿಫಾರಸು ನೀಡಿತ್ತು. ಪರಿಣಾಮ ಆರೋಗ್ಯ ಇಲಾಖೆ ರಾಜ್ಯದಲ್ಲಿ ದಿನಕ್ಕೆ ಒಂದು ಲಕ್ಷದವರೆಗೆ ಕೊರೊನಾ ಪರೀಕ್ಷೆ ಕೈಗೊಂಡಿತು. ಹೀಗಾಗಿ ಅಕ್ಟೋಬರ್ನಲ್ಲಿ ಎದ್ದಿದ್ದ ಅಲೆ ಮಧ್ಯ ಭಾಗದಲ್ಲಿ ಕಡಿಮೆ ಆಗಲು ಶುರುವಾಗಿದೆ.
ಇದೀಗ ನವೆಂಬರ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ಅದರ ಅಂಕಿ-ಅಂಶ ಅಚ್ಚರಿ ಮೂಡಿಸುತ್ತಿದೆ. 10 ಸಾವಿರ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ ಒಂದು ಸಾವಿರಕ್ಕೆ ಇಳಿಕೆ ಕಾಣುತ್ತಿದೆ. ಅದರ ಅಂಕಿ-ಅಂಶಗಳನ್ನು ನೋಡುವುದಾದರೆ..
ಕೊರೊನಾ ತೀವ್ರತೆ ನಾಲ್ಕು ಪಟ್ಟು ಕಮ್ಮಿ:
ದಿನಾಂಕ - ಸೋಂಕಿತರ ಸಂಖ್ಯೆ
9-11-2020 - 1963
15-11-2020- 1565
16-11-2020- 1157
17-11-2020- 1336
ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಕಡಿಮೆ ಆಗಿದೆ. ಮೊದಲ ಬಾರಿಗೆ ಕೊರೊನಾ ತೀವ್ರತೆ ನಾಲ್ಕು ಪಟ್ಟು ಕಮ್ಮಿ ಆಗಿದ್ದು, ನವೆಂಬರ್ 11ರಿಂದ ಸೋಂಕಿತರ ಸಂಖ್ಯೆ ಕ್ರಮೇಣ ಕಡಿಮೆ ಆಗಿದೆ. ಸದ್ಯ ಈವರೆಗೆ ಇಳಿಕೆಯಾದ ಅಂಕಿ-ಅಂಶದಲ್ಲಿ 1157 ಸೋಂಕಿತರ ಸಂಖ್ಯೆ ಅತೀ ಕಡಿಮೆ ಆಗಿದ್ದು, ಈ ಸಂಖ್ಯೆಯು ಮುಂದಿನ ದಿನದಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ.
ಕೊರೊನಾ ಸೋಂಕಿತರ ಸಂಖ್ಯೆಯಷ್ಟೇ ಮೃತರ ಸಂಖ್ಯೆಯೂ ಇಳಿಕೆ:
ಸೋಂಕಿತರ ಸಂಖ್ಯೆಯಷ್ಟೇ ಅಲ್ಲದೇ ಇದೀಗ ಮೃತರ ಸಂಖ್ಯೆಯೂ ಇಳಿಕೆಯಾಗಿದೆ. ನಿತ್ಯ ನೂರರ ಗಡಿ ದಾಟುತ್ತಿದ್ದ ಸಾವಿನ ಸಂಖ್ಯೆ ಇದೀಗ 12ಕ್ಕೆ ಇಳಿಕೆ ಆಗಿದೆ.
ತಿಂಗಳು ಸಾವು
ಮಾರ್ಚ್- 03
ಏಪ್ರಿಲ್ - 18
ಮೇ - 30
ಜೂನ್ - 195
ಜುಲೈ - 2,068
ಆಗಸ್ಟ್- 3,066
ಸೆಪ್ಟೆಂಬರ್- 3187
ಅಕ್ಟೋಬರ್- 2304
ನವೆಂಬರ್- 389( 17ನೇ ತಾರೀಖಿನವರೆಗೆ)
ನವೆಂಬರ್ನಲ್ಲಿ ಗಣನೀಯ ಇಳಿಕೆ ಕಂಡ ಸಾವಿನ ಸಂಖ್ಯೆ:
ದಿನಾಂಕ- ಸಾವಿನ ಸಂಖ್ಯೆ
1-11-2020- 24
2-11-2020- 29
3-11-2020- 26
4-11-2020- 34
5-11-2020- 31
6-11-2020- 35
7-11-2020- 22
8-11-2020- 22
9-11-2020- 19
10-11-2020-20
11-11-2020-23
12-11-2020-21
13-11-2020-17
14-11-2020-17
15-11-2020- 21
16-11-2020- 12
17-11-2020- 16
ಸೋಂಕಿನ ಇಳಿಕೆಗೆ ಕಾರಣವೇನು?
1. ಆಹಾರ ಕ್ರಮ ಬದಲಾವಣೆ.
2.ಪೌಷ್ಟಿಕಾಹಾರ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ.
3. ಕೊರೊನಾ ಜಾಗೃತಿ.
4. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಪ್ರಮಾಣ ಹೆಚ್ಚಳ.
5. ಸಾವಿನ ಸಂಖ್ಯೆ ಕಡಿಮೆ ಆಗಲು ಮುಖ್ಯ ಕಾರಣ ಸೋಂಕು ಬರುವ ಮುನ್ನವೇ ಪರೀಕ್ಷೆಗೆ ಒಳಪಟ್ಟಿದ್ದು ಹಾಗೂ ಬಹುಬೇಗ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದು.