ಬೆಂಗಳೂರು: ಕಳೆದೊಂದು ವಾರದಿಂದ ದಿನಕ್ಕೆ 20 ರಿಂದ 30 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಅದರ ಸಂಖ್ಯೆ ಇಳಿಮುಖವಾಗಿದ್ದು, ಮಧ್ಯಾಹ್ನದ ವೇಳೆಗೆ ನಾಲ್ಕು ಹೊಸ ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 388 ಕ್ಕೆ ಏರಿದೆ. ರಾಜ್ಯದಲ್ಲಿ ಕೊರೊನಾ ವೈರಸ್ನಿಂದಾಗಿ ಒಟ್ಟು14 ಮಂದಿ ಸಾವನ್ನಪ್ಪಿದ್ದು, 105 ಮಂದಿ ಗುಣಮುಖರಾಗಿದ್ದಾರೆ.
ಟ್ರಾವೆಲ್ ಹಿಸ್ಟರಿ
ರೋಗಿ - 385 - ಮೈಸೂರಿನ 46 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಮೈಸೂರಿನಲ್ಲೇ ಚಿಕಿತ್ಸೆ ಮುಂದುವರಿದೆ.
ರೋಗಿ - 386 - ಮೈಸೂರಿನ 20 ವರ್ಷದ ಯುವಕನಿಗೂ ಸೋಂಕು. ಈತನೂ ದೆಹಲಿಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ - 387 - ನಂಜನಗೂಡಿನ 39 ವರ್ಷದ ವ್ಯಕ್ತಿಗೆ ಸೋಂಕು. P-52 ರ ದ್ವಿತೀಯ ಸಂಪರ್ಕ ಹೊಂದಿದ್ದು, ಮೈಸೂರಿನಲ್ಲಿ ಚಿಕಿತ್ಸೆ.
ರೋಗಿ - 388 - ನಂಜನಗೂಡಿನ 23 ವರ್ಷದ ಮಹಿಳೆಗೆ ಸೋಂಕು. P- 319 ರ ಸಂಪರ್ಕಹೊಂದಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದೆ.