ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಅಸ್ಪತ್ರೆಗಳಲ್ಲಿ ಬೆಡ್ ಒದಗಿಸಲು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರದ ಕೋರಮಂಗಲ ಬಳಿ ಇರುವ ಸೇಂಟ್ ಜಾನ್ ಆಸ್ಪತ್ರೆಯ ಮುಂದೆ ರೋಗಿಗಳನ್ನು ಹೊತ್ತು ತಂದ ಆ್ಯಂಬುಲೆನ್ಸ್‌ಗಳ ಸಾಲು ಕಂಡುಬಂತು. ಒಬ್ಬನಿಗೆ ಬೆಡ್ ಬೇಕು ಅಂದರೆ ಒಳಗಿರುವ ರೋಗಿ ಡಿಸ್ಚಾರ್ಜ್ ಆಗಬೇಕು, ಇಲ್ಲವೇ ಸಾವನ್ನಪ್ಪಬೇಕು ಎನ್ನುವ ಪರಿಸ್ಥಿತಿ ಇದೆ.
ಕೊರೊನಾ ಸಾಂಕ್ರಾಮಿಕ ರೋಗ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಂತೆ ನಗರದಲ್ಲಿ ಬೆಡ್ ಮತ್ತು ಆಕ್ಸಿಜನ್ ಸಮಸ್ಯೆಯೂ ಉಲ್ಬಣವಾಗುತ್ತಿದೆ. ಸರ್ಕಾರವೂ ಸಹ ಅನೇಕ ರೀತಿಯಲ್ಲಿ ಕೋವಿಡ್ ರೋಗಿಗಳು ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದ್ರೂ ಸಹ ಸಮಸ್ಯೆ ಹತೋಟಿಗೆ ಬಾರದೇ ಮತಷ್ಟು ಹೆಚ್ಚುತ್ತಿರುವುದು ಸರ್ಕಾರ ಮತ್ತಷ್ಟು ತಲೆನೋವಾಗಿ ಪರಿಣಮಿಸುತ್ತಿದೆ.