ಬೆಂಗಳೂರು: ಮಾರ್ಚ್ 16 ರಂದು ದಾವಣಗೆರೆಯಿಂದ ಬೆಂಗಳೂರಿಗೆ ಶತಾಬ್ದಿ ರೈಲು ಹಾಗೂ ಮಾರ್ಚ್ 18 ರಂದು ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಇಬ್ಬರು ಕೊರೊನಾ ಸೋಂಕಿತರು ಪ್ರಯಾಣ ಮಾಡಿದ್ದು, ಅಂದು ಆ ರೈಲಿನಲ್ಲಿ ಸಂಚಾರ ಮಾಡಿರುವ ಪ್ರಯಾಣಿಕರು ಸಹಾಯವಾಣಿಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚಾರ ಮಾಡಿದ್ದ ಕೇಸ್ :
89, ಕೇಸ್ 90, ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ರೋಗಿಗಳು. ಮಾರ್ಚ್ 16 ರಂದು ಶತಾಬ್ದಿ ರೈಲಿನ ಕೋಚ್ D1 ರ ಸೀಟ್ 39,40 ರಲ್ಲಿ ಕೊರೊನಾ ಪಾಸಿಟಿವ್ ರೋಗಿ 89 ಮತ್ತು 90 ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ನಂತರ ಮಾರ್ಚ್ 18 ರಂದು ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನ ಕೋಚ್ S1 ರ ಸೀಟ್ ಸಂಖ್ಯೆ 70, 72 ರಲ್ಲಿ ತೆರಳಿದ್ದರು, ಈ ಹಿನ್ನೆಲೆಯಲ್ಲಿ ಆ ರೈಲಿನಲ್ಲಿ ಪ್ರಯಾಣ ಮಾಡಿದವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದು, ಸಹಾಯವಾಣಿ 104ಕ್ಕೆ ಕರೆ ಮಾಡುವಂತೆ ಅಥವಾ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇನ್ನು ಕೊರೊನಾ ಶಂಕೆ ಹಿನ್ನೆಲೆ ಇಂದು ಹೊಸದಾಗಿ 2318 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 45,247 ತಲುಪಿದೆ. 14 ದಿನಗಳ ನಿಗಾ ಇಂದು ಪೂರ್ಣಗೊಳಿಸಿದವರ ಸಂಖ್ಯೆ 4,228 ಆಗಿದ್ದು ಈವರೆಗೆ 37,261 ಜನ ಪೂರ್ಣಗೊಳಿಸಿದಂತಾಗಿದೆ, ಇಂದು 1680 ಜನರಿಗೆ ಹೋಂ ಕ್ವಾರಂಟೈನ್ ಸ್ಟಾಂಪ್ ಮಾಡಿದ್ದು,ಈವರೆಗೆ 25,382 ಜನರಿಗೆ ಸ್ಟ್ಯಾಂಪ್ ಮಾಡಲಾಗಿದೆ.ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇಂದು 43 ಜನರನ್ನು ಇರಿಸಿದ್ದು ಒಟ್ಟು 256 ಜನರನ್ನು ಐಸೋಲೇಷನ್ ನಲ್ಲಿ ಇರಿಸಿದಂತಾಗಿದೆ, ಇಂದು ಪರೀಕ್ಷೆಗೆ 206 ಜನರ ಮಾದರಿ ಸಂಗ್ರಹ ಮಾಡಿದ್ದು ಈವರೆಗೆ 3,535 ಮಾದರಿ ಸಂಗ್ರಹ ಮಾಡಿದಂತಾಗಿದೆ.ಇಂದು 198 ವರದಿಗಳು ಕೊರೊನಾ ನೆಗಟಿವ್ ಬಂದಿದ್ದು ಈವರೆಗೆ 3,297ವರದಿ ನೆಗಟಿವ್ ಬಂದಿದೆ, ಇಂದು 13 ವರದಿ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 101 ಕ್ಕೆ ತಲುಪಿದೆ.
ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು:
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 5 ,ಬೆಂಗಳೂರಿನ ಇತರ ಆಸ್ಪತ್ರೆಯಲ್ಲಿ 41, ತುಮಕೂರು 34, ಕಲಬುರಗಿ 32,ದಕ್ಷಿಣ ಕನ್ನಡದಲ್ಲಿ 27,ಉಡುಪಿ 26,ಮೈಸೂರು 14,ಬಳ್ಳಾರಿ 13,ಬೀದರ್ 10,ಉತ್ತರ ಕನ್ನಡ 10, ಚಿಕ್ಕಬಳ್ಳಾಪುರ 10, ಗದಗ 8, ಹಾಸನ 5, ಧಾರವಾಡ 4, ದಾವಣಗೆರೆ 4, ಶಿವಮೊಗ್ಗ 3, ವಿಜಯಪುರ 2, ಕೊಡಗು 2, ರಾಮನಗರ 2, ಚಿತ್ರದುರ್ಗ 1, ಯಾದಗಿರಿ 1, ಹಾವೇರಿ 1, ಕೋಲಾರ 1 ಸೇರಿ ಒಟ್ಟು 256 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ, 43 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು 1,28,315 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆ ಸಹಕಾರಿ ನೀಡಿ ಎಂದು ಮನವಿ ಮಾಡಿದೆ.
ಜನರು ನೀಡುವ ದೂರುಗಳನ್ನು ಆಧರಿಸಿ ಹೋಂ ಕ್ವಾರಂಟೈನ್ ಜಾರಿ ಪಡೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದವರನ್ನು ನಿಗದಿತ ಸಂಸ್ಥೆಗಳಲ್ಲಿನ ಕ್ವಾರಂಟೈನ್ ಗ ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದ್ದು, ಹೊಸದಾಗಿ 49 ಜನರನ್ನು ಸ್ಥಳಾಂತರ ಮಾಡಲಾಗಿದೆ ಈವರೆಗೂ 193 ಜನರನ್ನು ಈ ರೀತಿ ಸ್ಥಳಾಂತರ ಮಾಡಿದಂತಾಗಿದೆ.
ಇನ್ನು ಕ್ವಾರಂಟೈನ್ ನಂತಹ ಪ್ರತ್ಯೇಕ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಸಂಯಮದಿಂದ ಇರಲು ಮಾನಸಿಕ ಸ್ಥೈರ್ಯದ ಅಗತ್ಯವಿದ್ದು, ಅಂತಹ 1082 ರೋಗಿಗಳಿಗೆ ಮತ್ತು ಸಂಪರ್ಕಿತರಿಗೆ ಹೊಸದಾಗಿ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆ ನಡೆಸಿದ್ದು, ಇಲ್ಲಿಯವರೆಗೆ ಒಟ್ಟು 14,817 ಜನರಿಗೆ ಕೌನ್ಸೆಲಿಂಗ್ ನಡೆಸಲಾಗಿದೆ.
ಈ ದಿನ ಇದೇ ರೈಲಿನಲ್ಲಿ ಪ್ರಯಾಣಿಸಿದ್ರೆ ಸಹಾಯವಾಣಿ ಸಂಪರ್ಕಿಸಿ...! - corona helpline
ಮಾರ್ಚ್ 16 ರಂದು ದಾವಣಗೆರೆಯಿಂದ ಬೆಂಗಳೂರಿಗೆ ಶತಾಬ್ದಿ ರೈಲು ಹಾಗೂ ಮಾರ್ಚ್ 18 ರಂದು ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಇಬ್ಬರು ಕೊರೊನಾ ಸೋಂಕಿತರು ಪ್ರಯಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.