ETV Bharat / state

ಕೊರೊನಾದಿಂದ ಕಪ್ಪು - ಬಿಳುಪಾದ ಕಲಾವಿದರ ಬಣ್ಣ, ಬಣ್ಣದ ಬದುಕು! - Kannada cinema industry'

ಸಿನಿಮಾದ ಲೈಟ್​​​ಮ್ಯಾನ್​​ಗಳು ಜಾಸ್ತಿ ಹಣ ಗಳಿಸುವುದಿಲ್ಲ. ₹ 500-600 ದಿನಕ್ಕೆ ಗಳಿಸುತ್ತಿದ್ದರು. 12 ಗಂಟೆಗಳ ಕೆಲಸ ಇರುತ್ತಿತ್ತು. ನೃತ್ಯ ಕಲಾವಿದರು, ಪ್ರೊಡಕ್ಷನ್ ಕೆಲಸದವರು, ಮೇಕಪ್ ಮಾಡುವವರು, ಚಾಲಕರ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು.

corona lockdown on Kannada cinema industry
ಕೊರೊನಾ ಲಾಕ್​ಡೌನ್ ಎಫೆಕ್ಟ್​​
author img

By

Published : Dec 2, 2020, 10:50 PM IST

ಬೆಂಗಳೂರು: ಕೊರೊನಾ ಎಫೆಕ್ಟ್ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಅದಕ್ಕೆ ಸಿನಿಮಾ ರಂಗ ಹೊರತಾಗಿಲ್ಲ. ಕೊರೊನಾಗೂ ಮುನ್ನ ಇದ್ದ ಸಿನಿಮಾ ಹಾಗೂ ನಾಟಕ ಕ್ಷೇತ್ರದ ಸಾವಿರಾರು ಕಲಾವಿದರ ಬಣ್ಣ ಬಣ್ಣದ ಬದುಕು ಕೋವಿಡ್​ ನಂತರ ಕಪ್ಪು- ಬಿಳುಪಾಗಿದೆ. ಇತ್ತ ತಮ್ಮ ನೇರ ಪ್ರದರ್ಶನಗಳ ಮೂಲಕ ಜೀವನ ಸಾಗಿಸುತ್ತಿದ್ದ ಸಂಗೀತ ಪ್ರದರ್ಶಕರು ಮತ್ತು ಇತರರ ಜೀವನೋಪಾಯ ಅನ್​ಲಾಕ್​ ನಂತರವೂ ಕೆಟ್ಟ ಸ್ಥಿತಿಯಲ್ಲೇ ಮುಂದುವರೆದಿದೆ.

ಜೀವನದಲ್ಲಿ ಅದೆಷ್ಟೋ ಕಷ್ಟಗಳಿದ್ದರೂ ರಂಗಭೂಮಿಯಲ್ಲಿ ಅದೆಲ್ಲಾ ನೋವು ಬದಿಗಿಟ್ಟು ಎಲ್ಲರನ್ನೂ ರಂಜಿಸುವ ಮೂಲಕ ಕಲೆಯನ್ನು ಪ್ರದರ್ಶಿಸುತ್ತಿದ್ದ ಕಲಾವಿದರು ಲಾಕ್​ಡೌನ್ ಸಮಯದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಿಸಿದ್ದಾರೆ. ಅನ್​ಲಾಕ್​ ನಂತರ ಚಿತ್ರರಂಗ, ಸಂಗೀತ ಕ್ಷೇತ್ರ, ನಾಟಕ ಕ್ಷೇತ್ರದಲ್ಲೂ ಕೆಲಸಗಳು ನಿಧಾನವಾಗಿ ಆರಂಭಗೊಂಡಿವೆ. ಆದರೂ ಅವರ ಬದುಕು ಇನ್ನೂ ಅತಂತ್ರವಾಗಿಯೇ ಇದೆ.

ಸಿನಿಮಾದ ಲೈಟ್​​​ಮ್ಯಾನ್​​ಗಳು ಜಾಸ್ತಿ ಹಣ ಗಳಿಸುವುದಿಲ್ಲ. ₹500-600 ದಿನಕ್ಕೆ ಗಳಿಸುತ್ತಿದ್ದರು. 12 ಗಂಟೆಗಳ ಕೆಲಸ ಇರುತ್ತಿತ್ತು. ನೃತ್ಯ ಕಲಾವಿದರು, ಪ್ರೊಡಕ್ಷನ್ ಕೆಲಸದವರು, ಮೇಕಪ್ ಮಾಡುವವರು, ಚಾಲಕರ ಪರಿಸ್ಥಿತಿ ಇನ್ನೂ ಶೋಚನೀಯವಾಗಿತ್ತು. ಇತ್ತ ದೊಡ್ಡ ದೊಡ್ಡ ಸಿನಿಮಾಗಳಿಗೆ ಕೋಟಿ, ಕೋಟಿ ಸುರಿದಿರುವ ನಿರ್ಮಾಪಕರ ಪಾಡು ಮತ್ತಷ್ಟು ಘೋರವಾಗಿದೆ. ಹಾಕಿರುವ ಬಂಡವಾಳ ವಾಪಸ್ ಬರುತ್ತದೋ ಇಲ್ಲವೋ ಎಂಬ ಭೀತಿಯಲ್ಲಿದ್ದಾರೆ.

ಸಿನಿಮಾ ಕ್ಷೇತ್ರದ ಮೇಲೆ ಕೊರೊನಾ ಪರಿಣಾಮ

ಸ್ಯಾಂಡಲ್​ವುಡ್​​ನ ಮುಂದಾಳತ್ವ ವಹಿಸಿಕೊಂಡಿರುವ ನಟ ಶಿವರಾಜ್​ಕುಮಾರ್ ನೇತೃತ್ವದಲ್ಲಿ ಪ್ರಮುಖ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಿರಿಯ ಕಲಾವಿದರು ಕನ್ನಡ ಚಿತ್ರರಂಗದ ಕಾರ್ಮಿಕರ ಸಂಕಷ್ಟಕ್ಕೆ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರದಿಂದ ಅಷ್ಟು ಸ್ಪಂದನೆ ಸಿಗಲಿಲ್ಲ. ಚಿತ್ರೀಕರಣಕ್ಕೆ ಅನುಮತಿ ದೊರೆತಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಚಿತ್ರಮಂದಿರಗಳಲ್ಲಿ ಟಿಕೆಟ್ ಕೊಡುವವರು, ಕಸ ಗುಡಿಸುವವರು ಪರಿಸ್ಥಿತಿ ಚಿಂತಾಜನಕವಾಗಿದೆ. ಚಿತ್ರಮಂದಿರಗಳಿಗೆ ಪ್ರದರ್ಶನದ ಅವಕಾಶ ನೀಡಿದ್ದರೂ, ಕೋವಿಡ್​ನಿಂದ ಜನ ಬರುತ್ತಿಲ್ಲ.

ಹುಬ್ಬಳ್ಳಿಯ ಕೆಬಿಆರ್ ಡ್ರಾಮಾ ಕಂಪನಿ ಸೇರಿದಂತೆ ಕರ್ನಾಟಕದ ಒಟ್ಟು 27 ಡ್ರಾಮಾ ಕಂಪನಿಗಳ ಕಲಾವಿದರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಹಲವು ಕಲಾವಿದರು ಗೌಂಡಿ ಸೇರಿದಂತೆ ಅನೇಕ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಂಗಭೂಮಿಯನ್ನು ಪ್ರಾರಂಭಿಸಲಾಗಿದೆ. ಆದರೆ, ಸರ್ಕಾರ ಅನೇಕ ಷರತ್ತುಗಳನ್ನು ವಿಧಿಸಿದೆ. ಅದಲ್ಲದೇ ಅಗ್ನಿಶಾಮಕ ಪರವಾನಗಿಗೆ ಸುಮಾರು 50 ಸಾವಿರ ಠೇವಣಿ ಕಟ್ಟಿಸಿಕೊಳ್ಳುತ್ತಿದೆ. ಮೊದಲೇ ಸಂಕಷ್ಟದಲ್ಲಿರುವ ನಾಟಕ ಕಂಪನಿಗಳಿಗೆ ಇದು ಹೆಚ್ಚಿನ ಹೊರೆಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.