ETV Bharat / state

ಕೋರ್ಟ್​ಗೆ ಹಾಜರಾದ ಕೊರೊನಾ ಸೋಂಕಿತ: ನ್ಯಾಯಾಧೀಶರಿಗೆ ಕ್ವಾರಂಟೈನ್ - Quarantine to Judge

ಜೂನ್. 1ರಂದು ನ್ಯಾಯಾಲಯಕ್ಕೆ ಕೊರೊನಾ ಪೀಡಿತ ಆರೋಪಿ ಆಗಮಿಸಿದ್ದ ಹಿನ್ನೆಲೆ, ಮೇಯೋ ಹಾಲ್ ಕೋರ್ಟ್​ನ 10ನೇ ಎಸಿಎಂಎಂ ನ್ಯಾಯಾಧೀಶರು, ಬೆಂಚ್ ಕ್ಲರ್ಕ್​, ಕೇಸ್ ವರ್ಕಸ್​​ ಹಾಗೂ ಇಬ್ಬರು ವಕೀಲರನ್ನು ಕಡ್ಡಾಯ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಮೇಯೋ ಹಾಲ್​ನ ನಗರ ಸಿವಿಲ್​​ ನ್ಯಾಯಾಲಯ
ಮೇಯೋ ಹಾಲ್​ನ ನಗರ ಸಿವಿಲ್​​ ನ್ಯಾಯಾಲಯ
author img

By

Published : Jun 9, 2020, 9:06 PM IST

ಬೆಂಗಳೂರು: ನಗರದ ಮೇಯೋ ಹಾಲ್​ನ ನಗರ ಸಿವಿಲ್​​ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದ, ಆರೋಪಿಗೆ ಕೊರೊನಾ ಪತ್ತೆಯಾದ ಹಿನ್ನೆಲೆ ನ್ಯಾಯಾಧೀಶರು ಹಾಗೂ ಕೋರ್ಟ್ ಸಿಬ್ಬಂದಿಯನ್ನು ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಜೂನ್. 1ರಂದು ನ್ಯಾಯಾಲಯಕ್ಕೆ ಕೊರೊನಾ ಪೀಡಿತ ಆರೋಪಿ ಆಗಮಿಸಿದ್ದ ಹಿನ್ನೆಲೆ ಮೇಯೋ ಹಾಲ್ ಕೋರ್ಟ್​ನ 10ನೇ ಎಸಿಎಂಎಂ ನ್ಯಾಯಾಧೀಶರು, ಬೆಂಚ್ ಕ್ಲರ್ಕ್​ಗಳು, ಕೇಸ್ ವರ್ಕಸ್​​ ಹಾಗೂ ಇಬ್ಬರು ವಕೀಲರನ್ನು ಕಡ್ಡಾಯ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಈ ಕುರಿತು ಬೆಂಗಳೂರು ವಕೀಲರ ಸಂಘ ತನ್ನ ಸದಸ್ಯ ವಕೀಲರಿಗೆ ಎಚ್ಚರಿಕೆಯಿಂದ ಮತ್ತು ಸುರಕ್ಷತೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಜೂನ್. 1 ರಂದು ಬೆಂಗಳೂರಿನ ಮೇಯೋ ಹಾಲ್ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ 10ನೇ ಎಸಿಎಂಎಂ ಕೋರ್ಟ್​ಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಜೀವನ್‌ ಭೀಮಾ ನಗರ ಠಾಣೆ ಪೊಲೀಸರು ಹಾಜರುಪಡಿಸಿದ್ದರು.

ಕೆಲ ಕಾಲ ಅಲ್ಲಿಯೇ ಇದ್ದ ಆರೋಪಿಯನ್ನು ಕೋರ್ಟ್ ಅಂತಿಮವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದಕ್ಕೂ ಮುನ್ನ ಆರೋಪಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆರೋಪಿಯ ಈ ವೈದ್ಯಕೀಯ ವರದಿ ಹೊರಬಂದಾಗ ಆತನಿಗೆ ಸೋಂಕು ಇರುವುದು ದೃಢಪಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.