ಬೆಂಗಳೂರು: ಕೊರೊನಾ ಭೀತಿ ರಾಜ್ಯದಲ್ಲಿ ಹೆಚ್ಚುತ್ತಲೇ ಇರುವ ಕಾರಣ ಜನರಲ್ಲಿ ಕೊರೊನಾ ಆತಂಕ ಕೂಡ ಜಾಸ್ತಿಯಾಗುತ್ತಿದೆ.
ನೇರವಾಗಿ ವೈದ್ಯರ ಜೊತೆಗೆ ಜನರು ಕೊರೊನಾ ಬಗ್ಗೆ ಮಾಹಿತಿ ಪಡೆಯುವ ಸೌಲಭ್ಯವನ್ನು ಈಗ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದಿಂದ ನೂತನ ಹೆಲ್ಪ್ ಲೈನ್ ಸ್ಥಾಪನೆ ಆಗಿದ್ದು, ಈ ಸಂಖ್ಯೆಗೆ ಕರೆ ಮಾಡಿ ನೇರವಾಗಿ ವೈದ್ಯರ ಬಳಿ ಮಾತನಾಡಲು ಅವಕಾಶವಿದೆ.
ಕೊರೊನಾ ಬಗೆಗಿನ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ನೂತನ ಹೆಲ್ಪ್ ಲೈನ್ ಇದಾಗಿದ್ದು, ಇದುವರೆಗೆ 104 ಗೆ ಕರೆ ಮಾಡಿ ಜನರು ಮಾಹಿತಿ ಪಡೆಯುತ್ತಿದ್ದರು.
ರೋಗ, ಲಕ್ಷಣಗಳು, ಚಿಕಿತ್ಸೆ, ಸರ್ಕಾರದ ಸೌಲಭ್ಯ, ಪರೀಕ್ಷಾ ವಿಧಾನ ಮುಂತಾದವುಗಳ ಬಗ್ಗೆ ನೇರವಾಗಿ ವೈದ್ಯರೊಂದಿಗೆ ಚರ್ಚೆ ಮಾಡಬಹುದು.
ಕೊರೊನಾ ಹೆಲ್ಪ್ ಲೈನ್ ನಂಬರ್: 97456-97456 ಗೆ ಕರೆ ಮಾಡಿ ಕೊರೊನಾ ಬಗೆಗಿನ ಅನುಮಾನಗಳಿಗೆ ತೆರೆ ಎಳೆಯಬಹುದಾಗಿದೆ.