ಬೆಂಗಳೂರು: ರಾಜ್ಯದಲ್ಲಿ ಇನ್ನೂ ಕೊರೊನಾ ಮಹಾಮಾರಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿಲ್ಲವೆಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಕೊರೊನಾ ಪರಿಸ್ಥಿತಿಯ ಕುರಿತು ಮಾಹಿತಿ ಕಲೆಹಾಕಲು ಬಂದಿದ್ದ ಕೇಂದ್ರದ ವಿಶೇಷ ತಂಡದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಇನ್ನೂ ಒಂದು ಹಾಗೂ ಎರಡನೇ ಹಂತದಲ್ಲಿದ್ದು, ಮೂರನೇ ಸ್ಟೇಜ್ ಗೆ ಹೋಗಿಲ್ಲ. ಕೇಂದ್ರದ ತಂಡದವರು ಸಮುದಾಯಕ್ಕೆ ಸೋಂಕು ಹಬ್ಬದಂತೆ ಕ್ರಮ ಕೈಗೊಳ್ಳಿ ಅಂತ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿಲ್ಲ: ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ
ಕೊರೊನಾ ಸಮುದಾಯಕ್ಕೆ ಹರಡಿಲ್ಲವೆಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದ ಅವರು, ದಯಮಾಡಿ ಮುಷ್ಕರ ಮಾಡಬೇಡಿ ಎಂದು ಮನವಿ ಮಾಡಿದರು.
ಸಚಿವ ಶ್ರೀರಾಮುಲು.
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಕೊರೊನಾ ಮಹಾಮಾರಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿಲ್ಲವೆಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಕೊರೊನಾ ಪರಿಸ್ಥಿತಿಯ ಕುರಿತು ಮಾಹಿತಿ ಕಲೆಹಾಕಲು ಬಂದಿದ್ದ ಕೇಂದ್ರದ ವಿಶೇಷ ತಂಡದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಇನ್ನೂ ಒಂದು ಹಾಗೂ ಎರಡನೇ ಹಂತದಲ್ಲಿದ್ದು, ಮೂರನೇ ಸ್ಟೇಜ್ ಗೆ ಹೋಗಿಲ್ಲ. ಕೇಂದ್ರದ ತಂಡದವರು ಸಮುದಾಯಕ್ಕೆ ಸೋಂಕು ಹಬ್ಬದಂತೆ ಕ್ರಮ ಕೈಗೊಳ್ಳಿ ಅಂತ ಸೂಚಿಸಿದ್ದಾರೆ ಎಂದು ತಿಳಿಸಿದರು.
ದಯವಿಟ್ಟು ಮುಷ್ಕರ ಮಾಡಬೇಡಿ: ಆಶಾ ಕಾರ್ಯಕರ್ತೆಯರಿಂದ ಮುಷ್ಕರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಹೇಳುತ್ತೇನೆ ಎಂದ ಸಚಿವರು, ದಯಮಾಡಿ ಮುಷ್ಕರ ಕೈಬಿಡಿ. ನಿಮ್ಮ ಬೇಡಿಕೆ ಬಗ್ಗೆ ಕುಳಿತು ಚರ್ಚೆ ಮಾಡೋಣವೆಂದು ಭರವಸೆ ನೀಡಿದರು.

Last Updated : Jul 7, 2020, 3:27 PM IST