ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಮೈಕೋ ಲೇಔಟ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಒಂದೇ ರಸ್ತೆಯ ಎಂಟು ಮನೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮೈಕೋ ಲೇಔಟ್ನ 10ನೇ ಎ ಕ್ರಾಸ್ನಲ್ಲಿ 8 ಮನೆಗಳಲ್ಲಿನ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಸಂಪೂರ್ಣ ರಸ್ತೆಯನ್ನ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಶೇ.50 ಹಾಸಿಗೆ ಮೀಸಲಿರಿಸಲು ಖಾಸಗಿ ಆಸ್ಪತ್ರೆಗಳ ಒಪ್ಪಿಗೆ: ಸಚಿವ ಸುಧಾಕರ್
ಆ ಬೀದಿಯಲ್ಲಿರುವ ಎಲ್ಲರ ಸ್ಯಾಂಪಲ್ ಸಂಗ್ರಹ ಮಾಡಿರುವ ಬಿಬಿಎಂಪಿ ಸಿಬ್ಬಂದಿ, ಈವರೆಗೆ 50ಕ್ಕೂ ಹೆಚ್ಚು ಜನರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.