ಬೆಂಗಳೂರು: ಕೊರೊನಾ ಸೋಂಕು ಜಗತ್ತನ್ನು ಬೆಚ್ಚಿ ಬೀಳಿಸಿದೆ. ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಬಗ್ಗೆ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ.
![online food companies gave hand washes](https://etvbharatimages.akamaized.net/etvbharat/prod-images/6311275_thumnbnail_3x2_c.jpg)
ಇನ್ನೊಂದು ಕಡೆ ಸ್ವಚ್ಛತೆ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮನೆ ಬಾಗಿಲಿಗೆ ಆಹಾರ ಪೊಟ್ಟಣ ವಿತರಿಸುವ ಆನ್ಲೈನ್ ಮಾರುಕಟ್ಟೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ.
ಆನ್ಲೈನ್ ಮಾರುಕಟ್ಟೆಯ ಆಹಾರ ಸರಕುಗಳ ಜೊತೆಗೆ ಹ್ಯಾಂಡ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಗ್ರಾಹಕರನ್ನು ಒಲಿಸಿಕೊಳ್ಳುವ ಜೊತೆಗೆ ಗ್ರಾಹಕರ ಆರೋಗ್ಯ ಕಾಳಜಿಯನ್ನು ತೋರ್ಪಡಿಸಿವೆ.
ಸದ್ಯ ಇಂತಹ ಕ್ರಮಗಳನ್ನು ಕಂಪನಿಗಳು ಪ್ರೋತ್ಸಾಹಿಸುತ್ತಿವೆ. ಕೋವಿಡ್ 19ಯಿಂದ ಏನೆಲ್ಲ ಬದಲಾವಣೆಗೆ ನಾಂದಿಯಾಗುತ್ತಿದೆ ಎಂದು ನೋಡಬೇಕಿದೆ.