ETV Bharat / state

ಕೊರೊನಾ ಎಫೆಕ್ಟ್​: ಗಣರಾಜ್ಯೋತ್ಸವದಂದು ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ರದ್ದು..! - Lal Bagh flower show

ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದ ಲಾಲ್​ಬಾಗ್ ಮೇಲಿನ ಕೊರೊನಾ ಕರಿಛಾಯೆ ಸರಿದಂತೆ ಕಾಣುತ್ತಿಲ್ಲ. ಈ ಬಾರಿ ಗಣರಾಜ್ಯೋತ್ಸವ ದಿನದೊಂದು ಲಾಲ್​ಬಾಗ್ ನಲ್ಲಿ ಫಲ-ಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿದೆ.

corona-effect-lal-baghs-flower-show-canceled-on-republic-day-dot
ಕೊರೊನಾ ಎಫೆಕ್ಟ್​: ಗಣರಾಜ್ಯೋತ್ಸವದಂದು ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ರದ್ದು..!
author img

By

Published : Jan 21, 2021, 10:58 AM IST

ಬೆಂಗಳೂರು‌: ಕೊರೊನಾ ಸಾಂಕ್ರಾಮಿಕ ತಗ್ಗಿದಂತಾಗುತ್ತಿದ್ದಂತೆ ಜನ ಭಯ ಬದಿಗಿಟ್ಟು ಎಂದಿನಂತೆ ಸಹಜ ಜೀವನ ನಡೆಸುತ್ತಿದ್ದಾರೆ. ಆದರೆ, ಸಿಲಿಕಾನ್ ಸಿಟಿಯ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದ ಲಾಲ್​ಬಾಗ್ ಮೇಲಿನ ಕೊರೊನಾ ಕರಿಛಾಯೆ ಸರಿದಂತೆ ಕಾಣುತ್ತಿಲ್ಲ. ಹೂವುಗಳಿಂದಲೇ ಲಕ್ಷಾಂತರ ಜನರನ್ನು ರಂಜಿಸುತ್ತಿದ್ದ ಫಲಪುಷ್ಪ ಪದರ್ಶನಕ್ಕೂ ಕುತ್ತು ಎದುರಾಗಿದೆ.

ಕೊರೊನಾ ಎಫೆಕ್ಟ್​: ಗಣರಾಜ್ಯೋತ್ಸವದಂದು ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ರದ್ದು..!

ಕಳೆದ ಹಲವು ದಿನಗಳಿಂದ ಗಣರಾಜ್ಯೋತ್ಸವ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಮಾಡಬೇಕಾ ಬೇಡವಾ ಎಂಬುದರ ಬಗ್ಗೆ ಗೊಂದಲಗಳಿದ್ದವು.‌ ಇದೀಗ ಕೊನೆಗೂ ಈ ಗೊಂದಲಕ್ಕೆ ತೆರೆ ಬಿದ್ದಿದ್ದು, ಈ ಬಾರಿಯ ಫಲ ಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿದೆ.

ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಂದು ಲಾಲ್​ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವುದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ, ಕೊರೊನಾ ಅಟ್ಟಹಾಸಕ್ಕೆ ಐತಿಹಾಸಿಕ ಫಲಪುಷ್ಪ ಪ್ರದರ್ಶನವೇ ಮಾಯಾವಾಗಿ ಬಿಟ್ಟಿದೆ. ಈ ಹಿಂದೆ ಕೊರೊನಾ ಕಾರಣದಿಂದಾಗಿ ಆಗಸ್ಟ್‌ನ ಫಲ ಪುಷ್ಪ ಪ್ರದರ್ಶನ ಕೂಡ ರದ್ದುಗೊಳಿಸಲಾಗಿತ್ತು. ಇದಾದ ನಂತರ ಈ ವರ್ಷದ ಮೊದಲ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡದೇ ಇರುವ ಕಾರಣ ರದ್ದು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.