ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಎಸ್ವೈ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಬಹುಮತ ಪಡೆಯಲು ಸಾಧ್ಯವಾಗದಿದ್ದರೂ ಸರ್ಕಾರ ರಚಿಸಿ ಸಿಎಂ ಹುದ್ದೆಗೇರಿದ್ದರು. ಆದರೆ, ಬಿಎಸ್ವೈ ಅಧಿಕಾರಕ್ಕೆ ಬರುತ್ತಲೇ ಸಾಲು ಸಾಲು ಸವಾಲುಗಳೇ ಎದುರಾಗಿದ್ದವು. ಅದರಲ್ಲೂ ಕೊರೊನಾ ಸೋಂಕು ಬಿಜೆಪಿ ಸರ್ಕಾರಕ್ಕೆ ಮುಳುವಾಗಿತ್ತಾದರೂ ಕೇಂದ್ರದಿಂದಲೂ ಬಿಎಸ್ವೈ ಆಡಳಿತಕ್ಕೆ ಶಹಬ್ಬಾಸ್ ಗಿರಿ ಸಿಕ್ಕಿತ್ತು.
ಕಣ್ಣಿಗೆ ಕಾಣದ ವೈರಸ್ ಕಾಲಿಟ್ಟಾಗ ಆರಂಭದಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದರೂ ನಂತರ ದಿನಗಳಲ್ಲಿ ಹಲವಾರು ಕ್ರಮಗಳನ್ನ ಜಾರಿ ಮಾಡಿ ನಿಯಂತ್ರಣಕ್ಕೆ ಸಮಾರೋಪಾದಿಯಲ್ಲಿ ಮುಂದಾಗಲಾಗಿತ್ತು. ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಆರಂಭಿಸಿ, ಆರೈಕೆ ಮಾಡಿದರು.
ವೈದ್ಯಕೀಯ ಸೌಲಭ್ಯ ವಂಚಿತವಾಗಿದ್ದ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾಸ್ಪತ್ರೆಗಳು ಎಲ್ಲವೂ ಸಕಾಲದಲ್ಲಿ ಸೌಲಭ್ಯ ಪಡೆಯುವಂತಾಗಿತ್ತು.
ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸೂಚಿಸುವ ಮೊದಲೇ ಲಾಕ್ಡೌನ್, ಕರ್ಫ್ಯೂ ಜಾರಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೊರೊನಾ ರೋಗಿಗಳ ಮೇಲೆ ನಿಗಾವಹಿಸಲು ಕೊರೊನಾ ವಾಚ್ ಎಂಬ ಆ್ಯಪ್ ಅನ್ನೂ ಬಿಡುಗಡೆ ಮಾಡಲಾಗಿತ್ತು. ಕೋವಿಡ್ನ ಕ್ಷಣ ಕ್ಷಣದ ಮಾಹಿತಿಗಾಗಿ ಡಿಜಿಟಲ್ ಡ್ಯಾಶ್ ಬೋರ್ಡ್, ನಂತರ ದಿನಗಳಲ್ಲಿ ಕೋವಿಡ್ ಬೆಡ್, ಮೆಡಿಸನ್, ಆಕ್ಸಿಜನ್ ಹೀಗೆ ಎಲ್ಲಾ ಮಾಹಿತಿ ಕುರಿತು ವಾರ್ ರೂಮು ಕೂಡ ಸ್ಥಾಪಿಲಾಗಿತ್ತು.
ಕೋವಿಡ್ ಕೇರ್ ಸೆಂಟರ್ನಲ್ಲಿ ರೋಬೊಟ್ ಬಳಕೆ ಪ್ರಯೋಗ, ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರಿಂದ 5,000 ಪ್ರೋತ್ಸಾಹ ಧನದಂತಹ ಕಾರ್ಯವನ್ನು ಮಾಡಲಾಗಿತ್ತು.
ದೇಶದಲ್ಲೇ ಹಲವು ಯೋಜನೆಗಳ ಮೊದಲುಗಳಿಗೆ ಸಾಕ್ಷಿಯಾಗಿತ್ತು ಕರ್ನಾಟಕ
ಇನ್ನು ಕರ್ನಾಕಟದಲ್ಲಿ ಕೊರೊನಾ ಕಂಟ್ರೋಲ್ಗಾಗಿ ಹಲವು ಕಾರ್ಯಗಳಲ್ಲಿ ಕರ್ನಾಟಕವೇ ಮೊದಲಾಗಿತ್ತು. ಕೊರೊನಾ ರೋಗದ ಅನುಮಾನಗಳು ನಿರ್ವಹಣೆಗಾಗಿ ಆಪ್ತಮಿತ್ರ ಸಹಾಯವಾಣಿ 14,410 ತೆರೆದಿದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ, ಕೋವಿಡ್ ಹಾಗೂ ನಾನ್ ಕೋವಿಡ್ನ ರಿಯಲ್ ಟೈಂ ಮಾಹಿತಿ ತಿಳಿಯಲು ಡ್ಯಾಶ್ ಬೋರ್ಡ್ ವ್ಯವಸ್ಥೆ ಮಾಡಲಾಗಿತ್ತು. ಹಾಗೇ ಹಾಸಿಗೆ ವ್ಯವಸ್ಥೆಗಾಗಿ 108 ಸಹಾಯವಾಣಿಯನ್ನು ಬಳಸುವ ಅವಕಾಶ ಕಲ್ಪಿಸಲಾಗಿತ್ತು.
104 ಸಹಾಯವಾಣಿ
ಕೊರೊನಾದಿಂದ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವವರಿಗಾಗಿ ತಜ್ಞರ ಸಹಾಯ ಕಲ್ಪಿಸಲು 104 ಸಹಾಯವಾಣಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಲಕ್ಷಾಂತರ ಜನರು ಈ ಸೇವೆಯನ್ನ ಬಳಿಸಿಕೊಂಡರು. ಇನ್ನು ಜ್ವರ, ಕೆಮ್ಮು ಕಾಣಿಸಿಕೊಂಡವರಿಗೆ ಆಸ್ಪತ್ರೆಗೆ ಹೋಗಲು ಆಗದವರಿಗೆ ಫೀವರ್ ಕ್ಲಿನಿಕ್ ಅನ್ನು ಸ್ಥಾಪಿಸಲಾಗಿತ್ತು.
ಹೋಮ್ ಕ್ವಾರಂಟೈನ್ನಲ್ಲಿ ಇರುವವರ ಮೇಲೆ ಹದ್ದಿನ ಕಣ್ಣಿಡಲು ಹಾಗೂ ಪಾಸಿಟಿವ್ ಇರುವವರು ಮನೆ ಅಕ್ಕ - ಪಕ್ಕ ಇದ್ದರೆ ಅದರ ಅಲರ್ಟ್ ಮಾಡಲು ಸಹ ಆರೋಗ್ಯ ಸೇತು ಆ್ಯಪ್ ಅನ್ನ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿ ಮಾಡಲಾಯಿತು.
ಹಾಗೇ ಕೊರೊನಾ ಬಗೆಗಿನ ನಿಖರ ಮಾಹಿತಿ ತಿಳಿಯಲು ವಾಟ್ಸ್ಆ್ಯಪ್ನಲ್ಲಿ HI ಅಂತ ಟೈಪ್ ಮಾಡಿದರೆ ಸಂಪೂರ್ಣ ಮಾಹಿತಿ ತರುವ ವ್ಯವಸ್ಥೆಯನ್ನು ಮಾಡಿದ್ದರು. ಬಹುಬೇಗ ಕೊರೊನಾ ಪತ್ತೆಗಾಗಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, ಆರ್ಟಿಪಿಸಿಆರ್ ಲ್ಯಾಬ್ ಹೆಚ್ಚು ಮಾಡಿ ಕೋವಿಡ್ ಅನ್ನ ನಿರ್ವಹಣೆ ಮಾಡಲಾಗಿತ್ತು. ಸ್ವಾಬ್ ಕಲೆಕ್ಟಿಂಗ್ ಬೂತ್, ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಶಿಬಿರ ಹೀಗೆ ಹಲವು ಕಾರ್ಯಗಳಲ್ಲಿ ತೊಡಗಿದ್ದು ಉಂಟು.
2ನೇ ಆರಂಭದಲ್ಲೇ ಕೊರೊನಾ ಕೈತಪ್ಪಿತ್ತು. ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಲಸಿಕೆ ಕೊರತೆಯಂತಹ ಸವಾಲುಗಳು ಸರ್ಕಾರಕ್ಕೆ ಮುಳುವಾದವು. ಮೊದಲನೇ ಅಲೆ ಯಶಸ್ವಿಯಾಗಿ ಎದುರಿಸಿದ್ದ ನಂತರ 2ನೇ ಅಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿತ್ತು.
ಇದನ್ನೂ ಓದಿ: ಬಿಎಸ್ವೈ ಸಂಪುಟದಲ್ಲಿದ್ದ ಅರ್ಧದಷ್ಟು ಮಂದಿಗೆ ರೀ ಎಂಟ್ರಿ ಡೌಟ್..? ಹೊಸಬರಿಗೆ ಮಣೆ ಸಾಧ್ಯತೆ