ETV Bharat / state

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ವೈರಸ್ ಸೋಂಕಿತರ ಸಂಖ್ಯೆ

ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರು ಹಾಗೂ ಶಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ವಿದೇಶದಿಂದ ಬಂದಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ, 6,248 ಜನರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ, 1150 ಪ್ರಾಥಮಿಕ ಸಂಪರ್ಕಿತರು, 7287 ದ್ವಿತೀಯ ಸಂಪರ್ಕಿತರನ್ನು ನಿಗಾದಲ್ಲಿ ಇರಿಸಲಾಗಿದೆ. ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ‌ ಇಂದು‌ 133 ಜನರನ್ನು ಇರಿಸಿದ್ದು ಒಟ್ಟು 367 ಜನರನ್ನು ಐಸೋಲೇಷನ್​​ನಲ್ಲಿ ಇರಿಸಿದಂತಾಗಿದೆ.

corona cases rising in karnataka
ಕೊರೊನಾ: ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ವೈರಸ್ ಸೋಂಕಿತರ ಸಂಖ್ಯೆ
author img

By

Published : Apr 1, 2020, 11:21 PM IST

ಬೆಂಗಳೂರು: ಕೋವಿಡ್-19 ವಿರುದ್ಧ ಲಾಕ್​​ಡೌನ ನಂತಹ ಕಠಿಣ ನಿಯಮ ಜಾರಿಗೊಳಿಸಲಾಗಿದ್ದರೂ ಸೋಂಕಿತರು ಹಾಗೂ ಶಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ತುಮಕೂರು, ಕಲಬುರಗಿ, ದಕ್ಷಿಣ ಕನ್ನಡ ,ಉಡುಪಿ, ಮೈಸೂರು, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಎಂದಿನಂತೆ ಇಂದು ಕೂಡ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಮಾಡಿದ್ದು, ವಿದೇಶದಿಂದ ಬಂದಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ, 6,248 ಜನರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ, 1150 ಪ್ರಾಥಮಿಕ ಸಂಪರ್ಕಿತರು, 7287 ದ್ವಿತೀಯ ಸಂಪರ್ಕಿತರನ್ನು ನಿಗಾದಲ್ಲಿ ಇರಿಸಲಾಗಿದೆ.

corona cases rising in karnataka
ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ವೈರಸ್ ಸೋಂಕಿತರ ಸಂಖ್ಯೆ

ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ‌ ಇಂದು‌ 133 ಜನರನ್ನು ಇರಿಸಿದ್ದು, ಒಟ್ಟು 367 ಜನರನ್ನು ಐಸೋಲೇಷನ್​​ನಲ್ಲಿ ಇರಿಸಿದಂತಾಗಿದೆ.

ಇಂದು ಪರೀಕ್ಷೆಗೆ 244 ಜನರ ಮಾದರಿ ಸಂಗ್ರಹ ಮಾಡಿದ್ದು‌ ಈವರೆಗೆ 3,799 ಮಾದರಿ ಸಂಗ್ರಹ ಮಾಡಿದಂತಾಗಿದೆ. 182 ವರದಿಗಳು ಕೊರೊನಾ ನೆಗೆಟಿವ್ ಬಂದಿದ್ದು ಈವರೆಗೆ 3479 ವರದಿ ನೆಗಟಿವ್ ಬಂದಿದೆ, ಇಂದು 9 ವರದಿ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 110 ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 8 , ಬೆಂಗಳೂರಿನ ಇತರ ಆಸ್ಪತ್ರೆಯಲ್ಲಿ 78, ತುಮಕೂರು 45, ಕಲಬುರಗಿ 30, ದಕ್ಷಿಣ ಕನ್ನಡದಲ್ಲಿ 43, ಉಡುಪಿ 26, ಮೈಸೂರು 17, ಬಳ್ಳಾರಿ 13, ಬೀದರ್ 34, ಉತ್ತರ ಕನ್ನಡ 9, ಚಿಕ್ಕಬಳ್ಳಾಪುರ 10, ಗದಗ 12, ಹಾಸನ 4, ಧಾರವಾಡ 6, ದಾವಣಗೆರೆ 3, ಶಿವಮೊಗ್ಗ 4, ವಿಜಯಪುರ 3, ಕೊಡಗು 5, ರಾಮನಗರ 1, ಚಿತ್ರದುರ್ಗ 2, ಯಾದಗಿರಿ 4,ಹಾವೇರಿ 1, ಕೋಲಾರ 9, ಬಾಗಲಕೋಟೆ 1 ಸೇರಿ ಒಟ್ಟು 367 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ, 133 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.