ಬೆಂಗಳೂರು: ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರ್ಭಟಿಸುತ್ತಿದೆ. ಹೊಸ ಪ್ರಬೇಧದ ಹಾವಳಿ ಹೆಚ್ಚಾಗಿದೆ. ಕಳೆದ 2 ವಾರಗಳಿಂದ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಆಗ್ತಿದ್ದು, ನಿಯಂತ್ರಣ ಮೀರಿ ಹೋಗಿದೆ. ಒಂದು ಕಡೆ ಸೋಂಕಿತರ ಸಂಖ್ಯೆ ಏರಿಕೆ ಆಗಿದ್ದರೂ ಇತ್ತ ಸಾವಿನ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿದೇ ಇರುವುದು ನೆಮ್ಮದಿಯ ಸಂಗತಿ.
ಹಲವು ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಸೋಂಕಿತರು ಪತ್ತೆಯಾಗಿದ್ದರು. ಯಾವುದೇ ಸಾವಿನ ವರದಿಯಾಗಿಲ್ಲ. ಕಳೆದ 10 ದಿನಗಳಿಂದ 19 ಜಿಲ್ಲೆಗಳಲ್ಲಿ ಕೊರೊನಾ ಡೆತ್ ಫ್ರೀ ಆಗಿದೆ. ಅದೇ ಕಳೆದ 10 ದಿನಗಳಲ್ಲಿ ಬೆಂಗಳೂರು ಒಂದರಲ್ಲೇ 24 ಸೋಂಕಿತರು ಮೃತಪಟ್ಟಿದ್ದಾರೆ.
ಮಂಡ್ಯ- 1, ತುಮಕೂರು-2, ಉತ್ತರಕನ್ನಡ 2, ದಕ್ಷಿಣ ಕನ್ನಡ 4, ಚಿತ್ರದುರ್ಗ-1, ಹಾಸನ-1, ಕಲಬುರ್ಗಿ-1 ಬಳ್ಳಾರಿ-1 ಹಾಗೂ ಮೈಸೂರು 1,ರಾಮನಗರದಲ್ಲಿ 1 ಒಟ್ಟು ರಾಜ್ಯಾದ್ಯಂತ 10 ದಿನದಲ್ಲಿ 39 ಸೋಂಕಿತರು ಮೃತರಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟ ಶೇಕಡಾವಾರು ಪ್ರಮಾಣ 0.03% ರಷ್ಟಿದೆ.
ಕೋವಿಡ್ ಸಾವು ಮುಕ್ತ ಜಿಲ್ಲೆಗಳು:
1)ಬಾಗಲಕೋಟೆ
2)ಬೆಳಗಾವಿ
3)ಬೆಂಗಳೂರು ಗ್ರಾಮಾಂತರ
4)ಬೀದರ್
5)ಚಾಮರಾಜನಗರ
6)ಚಿಕ್ಕಬಳ್ಳಾಪುರ
7)ಚಿಕ್ಕಮಗಳೂರು
8)ದಾವಣಗೆರೆ
9)ಧಾರವಾಡ
10)ಗದಗ
11)ವಿಜಯಪುರ
12)ಹಾವೇರಿ
13)ಕೊಡಗು
14)ಕೋಲಾರ
15)ಕೊಪ್ಪಳ
16)ಶಿವಮೊಗ್ಗ
17)ರಾಯಚೂರು
18)ಯಾದಗಿರಿ
19) ಉಡುಪಿ
ಕೊರೊನಾ ಮಟ್ಟಹಾಕಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗು ಸ್ವಚ್ಚತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಇತ್ತ ಇದರ ಮುಂದುವರೆದ ಭಾಗವಾಗಿ ರಾಮಬಾಣವಾಗಿ ಬಂದಿದ್ದು ಕೋವಿಡ್ ಲಸಿಕೆ. ಕೋವಿಡ್ ಸೋಂಕಿನಿಂದ ಹಾಗು ಅದರಿಂದಾಗುವ ಸಾವಿನ ಪ್ರಮಾಣವೂ ಕಡಿಮೆಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಸಮರ್ಥಿಸಿಕೊಂಡ JDS ಶಾಸಕ ಜಿ ಟಿ ದೇವೇಗೌಡ