ಬೆಂಗಳೂರು: ರಾಜ್ಯದಲ್ಲಿಂದು 43,925 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 181 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,43,506 ಕ್ಕೆ ಏರಿಕೆ ಆಗಿದೆ.
ಪಾಸಿಟಿವ್ ದರವೂ ಶೇ.0.41ರಷ್ಟಿದೆ. ಇತ್ತ 260 ಸೋಂಕಿತರು ಗುಣಮುಖರಾಗಿದ್ದು, ಈ ತನಕ ಒಟ್ಟು 39,00,688 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,764 ರಷ್ಟಿದೆ. ಸೋಂಕಿಗೆ ಮೂವರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 40,016 ಏರಿಕೆ ಕಂಡಿದೆ. ಡೆತ್ ರೇಟ್ ಶೇ.1.65ರಷ್ಟಿದೆ. ವಿಮಾನ ನಿಲ್ದಾಣದಿಂದ 1,930 ಪ್ರಯಾಣಿಕರು ಆಗಮಿಸಿದ್ದಾರೆ.
ಇದನ್ನೂ ಓದಿ: 'ದೇಶದಲ್ಲಿ ಕೊರೊನಾಗೆ 41 ಲಕ್ಷ ಜನ ಸತ್ತಿಲ್ಲ': ಲ್ಯಾನ್ಸೆಟ್ ಜರ್ನಲ್ ವರದಿ ಅಲ್ಲಗಳೆದ ಭಾರತ
ಬೆಂಗಳೂರಿನಲ್ಲಿ 122 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,80,137 ಕ್ಕೆ ಏರಿಕೆ ಆಗಿದೆ. 164 ಮಂದಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿ ತನಕ 17,60,966 ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,942 ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,228 ರಷ್ಟಿದೆ.
ರೂಪಾಂತರಿ ವೈರಸ್ ಬಗ್ಗೆ ಮಾಹಿತಿ:
ಅಲ್ಪಾ- 156
ಬೇಟಾ-08
ಡೆಲ್ಟಾ ಸಬ್ ಲೈನ್ ಏಜ್- 4431
ಇತರೆ- 286
ಒಮಿಕ್ರಾನ್-1115
BAI.1.529- 807
BA1- 89
BA2-219
ಒಟ್ಟು- 5996