ಬೆಂಗಳೂರು: ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಇಂದು 5,722 ಜನರಲ್ಲಿ ಸೋಂಕು ದೃಢಪಟ್ಟಿದೆ.
ಈ ಪೈಕಿ ಬೊಮ್ಮನಹಳ್ಳಿ-610, ದಾಸರಹಳ್ಳಿ-223, ಬೆಂಗಳೂರು ಪೂರ್ವ-837, ಮಹಾದೇವಪುರ-946, ಆರ್‌ಆರ್ ನಗರ-431, ಬೆಂಗಳೂರು ದಕ್ಷಿಣ-536, ಬೆಂಗಳೂರು ಪಶ್ಚಿಮ-415, ಯಲಹಂಕದಲ್ಲಿ 483 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆ ನಗರದಲ್ಲಿ 7,494 ಪ್ರಕರಣಗಳು ಪತ್ತೆಯಾಗಿದ್ದು, 362 ಮಂದಿ ಮೃತಪಟ್ಟಿದ್ದರು. ಈವರೆಗೆ 2,55,842 ಸಕ್ರಿಯ ಪ್ರಕರಣಗಳಿವೆ. ಮೇ 22 ರಂದು 47,438 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 32.29% ಇದ್ದು, ಮರಣ ಪ್ರಮಾಣ 1.36% ಇದೆ.
ಇದನ್ನೂ ಓದಿ: ತಾಯಿ ಮೃತಪಟ್ಟ ನಾಲ್ಕೇ ದಿನಕ್ಕೆ ಮಗನೂ ಕೊರೊನಾಗೆ ಬಲಿ: ಬೆಳಗಾವಿ ವೈದ್ಯ ಕುಟುಂಬದ ಕಣ್ಣೀರ ಕಹಾನಿ