ಬೆಂಗಳೂರು: ರಾಜ್ಯದ ಜನರು ಕೊರೊನಾ ಮೊದಲ ಹಾಗೂ ಎರಡನೇ ಅಲೆ ಭೀಕರತೆ ಕಂಡಿದ್ದಾರೆ. ಇನ್ನೇನು ಸಹಜ ಸ್ಥಿತಿಗೆ ಮರಳುತ್ತೇವೆ ಎಂದುಕೊಳ್ಳುತ್ತಿರುವಾಗಲೇ ಮೂರನೇ ಅಲೆಯ ಬಗ್ಗೆ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ ಅಂತ್ಯದಲ್ಲಿ ಮೂರನೇ ಅಲೆ ಭೀತಿ ಕುರಿತು ಮಾಹಿತಿ ನೀಡಿರುವ ತಜ್ಞರು, ಯಾವ್ಯಾವ ಜಿಲ್ಲೆಗಳಿಗೆ ಹೆಚ್ಚು ಬಾಧಿಸಲಿದೆ ಅನ್ನುವುದರ ಕುರಿತು ಅಂದಾಜಿಸಿದ್ದಾರೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚು ಸೋಂಕು ತಗುಲದ ಪ್ರದೇಶಗಳಲ್ಲೇ ಮೂರನೇ ಅಲೆ ಆರ್ಭಟ ಎನ್ನಲಾಗುತ್ತಿದೆ. ಇದಕ್ಕಾಗಿ, ತಜ್ಞರ ತಂಡ ಕರ್ನಾಟಕದಲ್ಲಿ ಸದ್ಯ ನಾಲ್ಕು ರೀತಿಯ ಅಂಶಗಳನ್ನೊಳಗೊಂಡ ವಿಶ್ಲೇಷಣೆಯನ್ನು ಮಾಡಿದೆ.
ಆ ನಾಲ್ಕು ಅಂಶಗಳು ಯಾವುವು?
- ಕಡಿಮೆ ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಕಡಿಮೆ ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಕಡಿಮೆ ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಹೆಚ್ಚು ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಹೆಚ್ಚು ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಕಡಿಮೆ ಪ್ರತಿರೋಧಕ ಶಕ್ತಿ ಇರುವ ಜಿಲ್ಲೆಗಳು
- ಹೆಚ್ಚು ಪ್ರಮಾಣದ ವ್ಯಾಕ್ಸಿನೇಷನ್ ಹಾಗೂ ಹೆಚ್ಚು ಪ್ರತಿರೋಧಕ ಶಕ್ತಿ ಹೊಂದಿರುವ ಜಿಲ್ಲೆಗಳು
ಇದರ ಅನ್ವಯ ಯಾವ್ಯಾವ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ ಆಗಬಹುದು ಅಂತ ಅಂದಾಜಿಸಬಹುದಾಗಿದೆ ಅಂತ ತಜ್ಞರು ತಿಳಿಸಿದ್ದಾರೆ. ಯಾವ ಭಾಗದಲ್ಲಿ ಕಡಿಮೆ ಪ್ರಮಾಣ ವ್ಯಾಕ್ಸಿನೇಷನ್ ಆಗಿದ್ಯೋ ಹಾಗೇ ಕಡಿಮೆ ಪ್ರತಿರೋಧಕ ಶಕ್ತಿ ಹೊಂದಿರುವ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ಆರೋಗ್ಯ ಇಲಾಖೆ ಸೆರೋ ಸರ್ವೆ ಕೂಡ ಆರಂಭಿಸಿದೆ.
ಜಿಲ್ಲೆಗಳ ಹೆಸರು | ವ್ಯಾಕ್ಸಿನೇಷನ್ ಪ್ರಮಾಣ ((9/8/2021 ರವರೆಗೆ) |
ಹಾವೇರಿ | 33.65% |
ಕಲಬುರಗಿ | 34.63% |
ರಾಯಚೂರು | 35.68% |
ಯಾದಗಿರಿ | 37.90% |
ವಿಜಯಪುರ | 39.24% |
ದಾವಣಗೆರೆ | 38.32% |
ಬೆಳಗಾವಿ | 40.43% |
ಬೀದರ್ | 42.03% |
ಕೊಪ್ಪಳ | 53.27% |
ಬಳ್ಳಾರಿ | 43.71% |
ಬಾಗಲಕೋಟೆ | 43.38% |
ತುಮಕೂರು | 46.68% |
ಚಿಕ್ಕಮಗಳೂರು | 46.75% |
ಚಾಮರಾಜನಗರ | 46.69% |
ಶಿವಮೊಗ್ಗ | 47.79% |
ಚಿತ್ರದುರ್ಗ | 47.94% |
ಧಾರವಾಡ | 48.60% |
ಹಾಸನ | 48.45% |